ಯುದ್ಧ ಸಾಕು ಪ್ರೀತಿ ಬೇಕು!
Team Udayavani, Apr 3, 2018, 7:30 AM IST
ಹೇಗಪ್ಪಾ ಇವನಿಗೆ ಉತ್ತರ ಕೊಡೋದು ಅಂತ ಅನ್ನಿಸ್ತಾ ಇದ್ರೆ ತಕ್ಷಣ ನಂಗೊಂದು ಮಿಸ್ ಕಾಲ್ ಕೊಡು. ನನ್ನ ಹೃದಯ ನಿನ್ನನ್ನ, ಹಾಗೂ ನಿನ್ನ ಕರೆಯನ್ನ ಕಾಯ್ತಾ ಇರುತ್ತೆ.
ಸ್ನೇಹಿತರ ಜೊತೆಗಿನ ಕೋಪ, ತಾಪ, ಜಗಳ, ಗಲಾಟೆ ಇವೆಲ್ಲಾ ಕ್ಷಣಿಕ. ಸ್ವಲ್ಪ ಹೊತ್ತಲ್ಲಿ ಸರಿಹೋಗಿ ಬಿಡುತ್ತೆ. ಹೆಚ್ಚಂದ್ರೆ ಒಂದೆರಡು ದಿನದಲ್ಲಿ ಎಲ್ಲಾ ಮೊದಲಿನಂತೆಯೇ ಆಗಿಬಿಡ್ತೀವಿ. ಆದ್ರೆ ಪ್ರೀತಿಸೋ ಹುಡುಗಿಗೆ ಕೋಪ ಬರೋ ಥರ ಏನಾದ್ರೂ ಅಪ್ಪಿತಪ್ಪಿ ತಪ್ ಮಾಡಿದ್ರೆ, ಅಲ್ಲಿಗೆ ಕತೆ ಮುಗ್ದೆ ಹೊಯ್ತು. ಇಡೀ ಪ್ರಪಂಚಾನೇ ತಲೆ ಕೆಳಗೆ ಮಾಡಿಬಿಡ್ತಾರೆ. ಯಾಕಂದ್ರೆ, ಹುಡುಗರಿಗಿಂತ ಹುಡುಗಿಯರ ಕೋಪ ಯಾವತ್ತೂ ಡೇಂಜರಸ್. ನಾನು ಸದ್ಯಕ್ಕೆ ನಿನ್ನ ಕೆಂಗಣ್ಣಿಗೆ ಗುರಿಯಾಗಿರೋ ಕಾರಣ, ನಿನ್ನ ತಾಪ ಸ್ವಲ್ಪ ತಣ್ಣಗಾಗ್ಲಿ ಅಂತ ಈ ಪತ್ರ ಬರೀತಾ ಇದೀನಿ.
ಹುಡುಗೀ… ಸದ್ಯ ನಮ್ಮಿಬ್ಬರ ಮಧ್ಯೆ ಭಾರತ-ಪಾಕಿಸ್ತಾನದ ಗಡಿಯಲ್ಲಿರುವ ವಾತಾವರಣ ಏರ್ಪಟ್ಟಿದೆ. ಜಗಳ-ಕಿತ್ತಾಟ ಮಾಮೂಲಿ ಎಂಬಂತಾಗಿದೆ. ನಾನು ನಿನ್ನ ಹತ್ರ ಅದೆಷ್ಟು ಸರಿ ಸಂಧಾನಕ್ಕೆ ಬಂದ್ರೂ, ನೀ ಮಾತ್ರ ಯುದ್ಧವೇ ಬೇಕು ಅಂತಿದ್ದೀಯಾ. ಇದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ. ಇಷ್ಟಾದ್ರೂ ನಂಗೆ ನಿನ್ನ ಮೇಲಿನ ಪ್ರೀತಿ ಒಂದು ಚೂರೂ ಕಮ್ಮಿಯಾಗಿಲ್ಲ. ಹೇಗೆ ಭೂಮಿಗೂ ಮೊದಲ ಮಳೆ ಹನಿಗೂ ಅವಿನಾಭಾವ ಸಂಬಂಧ ಇದೆಯೋ, ಹಾಗೆಯೇ ನನಗೆ ನಿನ್ನ ಮೇಲೆ ಅದಕ್ಕಿಂತ ಒಂದು ಪಟ್ಟು ಜಾಸ್ತಿನೇ ಪ್ರೀತಿ ಇದೆ.
ಇತ್ತೀಚೆಗೆ ನಿನ್ನ ಫೋನ್ ಇಲ್ಲದೆ, ಮೆಸೇಜ್ ಇಲ್ಲದೆ, ನಿನ್ನ ಸ್ವರ ಕೇಳದೆ ಏನೋ ಕಳೆದುಕೊಂಡಂತಾಗಿದೆ. ಹಾಗಾಗಿ ಆಗಾಗ ಏನೇನೋ ಬರೀತಾ ಇರ್ತೀನಿ. ನೋಡೋರೆಲ್ಲಾ ಏನಾಯೊ¤à ಅಂತ ಕೇಳ್ತಿದ್ದಾರೆ. ಅವರಿಗೆಲ್ಲಾ ಸಮಜಾಯಿಷಿ ಕೊಟ್ಟು ಕೊಟ್ಟು ಸಾಕಾಗಿದೆ. ಹಾಗಾಗಿ ಅದಕ್ಕೆಲ್ಲಾ ಒಂದು ಪೂರ್ಣವಿರಾಮ ಇಡೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದೀನಿ.
ನಂಗೂ ಒಂದು ಆಸೆ ಉಂಟು ಕಣೆ. ನಿಂಗೆ ಅದು ಹುಚ್ಚಾಟ ಅಂತ ಅನ್ನಿಸಬಹುದು. ಅದ್ರೂ ಪರವಾಗಿಲ್ಲ ಕೇಳು, ನಿನ್ನ ರೇಷ್ಮೆಯಂಥಾ ತುಂಬು ಕೂದಲಲ್ಲಿ ಮುಖ ಹುದುಗಿಸಿ ಪ್ರಪಂಚವನ್ನೇ ಮರೆಯಬೇಕೆಂಬ ಆಸೆ, ಆ ನಿನ್ನ ಬೊಗಸೆ ಕಂಗಳಲ್ಲಿ ನನ್ನ ಪ್ರತಿಬಿಂಬ ನೋಡುವಾಸೆ, ನಿನ್ನ ಚಿನ್ನದಂಥ ಸಂಪಿಗೆಯ ಮೂಗನ್ನು ಒಮ್ಮೆ ಹಿಂಡುವಾಸೆ, ನುಣ್ಣನೆಯ ಗಲ್ಲವನ್ನು ಸವರುವ ಆಸೆ, ನುಣುಪಾದ ನಿನ್ನ ಕೆನ್ನೆಗೆ ನನ್ನ ಕೆನ್ನೆ ಸವರುವ ಆಸೆ, ಮುಂಗುರುಳನ್ನು ತೀಡುವಾಸೆ, ನಿನ್ನನ್ನು ಅಪ್ಪಿ ನನ್ನನ್ನು ನಾನೇ ಮರೆಯುವಾಸೆ.. ಏನಪ್ಪಾ ಇವನಿಗೆ ಇಷ್ಟೆಲ್ಲಾ ಆಸೆ ಇದೆಯಾ ಅಂತ ಅಂದೊಬೇಡ. ನಿನ್ನ ನೋಡಿದ ಕ್ಷಣದಿಂದ ನನಗೇ ಗೊತ್ತಿಲ್ಲದೆ ನನ್ನ ಮನಸಲ್ಲಿ ಹಿಂಗೆಲ್ಲಾ ಯೋಚನೆ ಬರ್ತಾ ಇದೆ. ಅದಕ್ಕೇ ಹೇಳ್ತಾ ಇದೀನಿ ಸುಮ್ನೆ ಯುದ್ಧ ಬೇಡಾ, ಶಾಂತಿ ಒಪ್ಪಂದ ಮಾಡಿಕೊಳ್ಳೋಣ ಅಂತ!
ಈ ಪತ್ರ ನೋಡಿದ ಮೇಲೆ ನಿನಗೆ ನನ್ನ ಮೇಲಿನ ಕೋಪ ಸ್ವಲ್ಪ ಮಟ್ಟಿಗಾದ್ರೂ ಕಮ್ಮಿ ಆದ್ರೆ, ನಾನು ತಲೆ ಕೆರೆದುಕೊಂಡು, ರಾತ್ರಿ ನಿ¨ªೆ ಬಿಟ್ಟು ಒಂದೊಂದು ಪದಕ್ಕೂ ಜೀವ ತುಂಬಿ ಈ ಪತ್ರ ಬರೆದಿದ್ದಕ್ಕೆ ಒಂದು ಸಮಾಧಾನಕರ ಬಹುಮಾನ ಸಿಕು¤ ಅಂತ ಅಂದೊRàತೀನಿ. ಪತ್ರ ಓದಿ, ಹೇಗಪ್ಪಾ ಇವನಿಗೆ ಉತ್ತರ ಕೊಡೋದು ಅಂತ ಅನ್ನಿಸ್ತಾ ಇದ್ರೆ ತಕ್ಷಣ ನಂಗೊಂದು ಮಿಸ್ ಕಾಲ್ ಕೊಡು. ನನ್ನ ಹೃದಯ ನಿನ್ನನ್ನ, ಹಾಗೂ ನಿನ್ನ ಕರೆಯನ್ನ ಕಾಯ್ತಾ ಇರುತ್ತೆ.
ಇಂತಿ ಪ್ರೀತಿಯಲ್ಲಿ ಸೋತವ
ಟಿ.ಎಸ್. ಶ್ರೀವತ್ಸ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.