ಮಜಾ ವಿತ್‌ ರಜಾ


Team Udayavani, Apr 3, 2018, 7:30 AM IST

sa-24.jpg

ರಜಾಕಾಲ ಬಂತೆಂದರೆ ಈಗ ತಾನೇ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳು ಪಂಜರದಿಂದ ಹಾರಿಬಿಟ್ಟ ಪಕ್ಷಿಯಂತಾಗುತ್ತಾರೆ. ಇಷ್ಟು ದಿನ ಕಾಡಿಸಿ ಪೀಡಿಸಿದ ಪುಸ್ತಕಗಳನ್ನು ಒತ್ತಟ್ಟಿಗಿಟ್ಟು ಆಟ ಮತ್ತಿತರ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮನರಂಜನೆ ಪಡೆಯುವುದು ತಪ್ಪಲ್ಲ, ಆದರೆ ಅದರ ನೆಪದಲ್ಲಿ ಸಮಯಹರಣ ಮಾಡುವುದು ಸರಿಯಲ್ಲ. ರಜಾಕಾಲವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೆಂದರೆ ಕೆಲ ಕೋರ್ಸುಗಳಿಗೆ ಸೇರಿಕೊಳ್ಳಬಹುದು. ಈಗ ಬಹಳಷ್ಟು ಕೋರ್ಸುಗಳು ಕಲಿಯಲು ಮಹಾನಗರಗಳಿಗೇ ಹೋಗಬೇಕೆಂದಿಲ್ಲ. ಪ್ರತಿ ಜಿಲ್ಲೆಯಲ್ಲೂ ಬಗೆ ಬಗೆಯ ಕೋರ್ಸ್‌ ಕಲಿಸುವ ಕೇಂದ್ರಗಳಿವೆ. ಕೋರ್ಸು ಎಂದಾಕ್ಷಣ ಮತ್ತದೇ ಪುಸ್ತಕ, ಹೋಂವರ್ಕ್‌ ರಗಳೆ ಎಂದೆಲ್ಲಾ ಕಲ್ಪಿಸಿಕೊಂಡು ಬೇಜಾರಾಗಬೇಕಿಲ್ಲ. ಇಲ್ಲಿನ ನೀಡಿರುವ ಕೋರ್ಸುಗಳಲ್ಲಿ ಕಲಿಕೆಯೂ ಇದೆ, ಮಜವೂ ಇದೆ…

ವಾಯ್ಸ ಮಾಡ್ಯುಲೇಷನ್‌
ನಿಮ್ಮ ಧ್ವನಿಯನ್ನು ತರಬೇತುಗೊಳಿಸಲೆಂದೇ ಪ್ರತ್ಯೇಕ ಕೋರ್ಸುಗಳಿವೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಇದು ಕಂಠದಾನ ಕಲಾವಿದರಾಗಬಯಸುವವರಿಗೆ, ರೇಡಿಯೊ ಜಾಕಿಗಳಾಗಬಯಸುವವರಿಗೆ ಮಾತ್ರವಲ್ಲ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಇದರಿಂದ ದೈನಂದಿನ ಚಟುವಟಿಕೆಗಳಿಗೂ ಸಹಕಾರಿ. ಉತ್ತಮ ಕಂಠ ಹೊಂದಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಈ ಕೋರ್ಸಿನಲ್ಲಿ ನಿಮ್ಮ ದನಿಯನ್ನು ನೀವು ಅರ್ಥ ಮಾಡಿಕೊಂಡು ಅದರ ಗತಿ, ಪಿಚ್‌, ವಾಲ್ಯೂಮ್‌, ದನಿಯಲ್ಲಿ ನಿಮ್ಮ ಮನಸ್ಥಿತಿಯನ್ನು ಮೂಡಿಸುವ ಕಲೆ ಮುಂತಾದವನ್ನು ಹೇಳಿಕೊಡಲಾಗುವುದು. ಅವರು ಮಾತಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತೆ ಎಂದು ಯಾರಾದರೂ ಹೊಗಳುವುದನ್ನು ಕೇಳಿದ್ದೀರಾ? ಅರದ ಹಿಂದಿನ ಮರ್ಮವೇ ಇದು. ಕೆಲವರಿಗೆ ಅದು ಸಹಜವಾಗಿ ಒಲಿದಿದ್ದರೆ ಇನ್ನು ಕೆಲವರು ತರಬೇತುಗೊಂಡಿರುತ್ತಾರೆ.

ನ್ಪೋಕನ್‌ ಇಂಗ್ಲೀಷ್‌ ಕೋರ್ಸ್‌
ಜಗತ್ತು ಗ್ಲೋಬಲ್‌ ವಿಲೇಜ್‌ ಆಗುತ್ತಿರುವುದರಿಂದ ಇಂಗ್ಲೀಷ್‌ ಕಲಿಕೆ ಅನೇಕ ವಿಧಗಳಲ್ಲಿ ಸಹಕಾರಿ. ಇದರರ್ಥ ಮಾತೃಭಾಷೆಯನ್ನು ನಿರ್ಲಕ್ಷಿಸಿ ಎಂದಲ್ಲ. ಇವತ್ತು ವೃತ್ತಿ ಕ್ಷೇತ್ರದಲ್ಲಿ ಇಂಗ್ಲೀಷ್‌ ಬಳಕೆ ತುಂಬಾ ಹೆಚ್ಚು ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಅಲ್ಲಿ ನಮ್ಮ ಸೀನಿಯರ್‌ಗಳು, ಸಹೋದ್ಯೋಗಿಗಳು ನಮ್ಮ ನೆಲದವರೇ ಆಗಿರಬೇಕೆಂದಿಲ್ಲವಲ್ಲ. ಹೀಗಾಗಿ ನ್ಪೋಕನ್‌ ಇಂಗ್ಲೀಷ್‌ ಕಲಿಯುವುದರಿಂದ ಅವರೊಂದಿಗೆ ಸಂವಹನ ಸಾಧಿಸುವುದು ಸುಲಭ. ಹೊರದೇಶಗಳಲ್ಲೂ ವೃತ್ತಿಯನ್ನು ಅರಸಬಹುದು. ಉದ್ಯೋಗವಾಕಾಶಗಳು ಹೆಚ್ಚು ಎನ್ನಬಹುದು. ಅಲ್ಲದೆ ಸಂದರ್ಶನಗಳಲ್ಲಿ ಅಂಕಪಟ್ಟಿ ಮುಂತಾದ ಶೈಕ್ಷಣಿಕ ಸಾಧನೆಗಳಿಗಿಂತ ಹೆಚ್ಚಾಗಿ ಇಂಗ್ಲೀಷ್‌ ಸಂವಹನವನ್ನು ಗಮನಿಸುತ್ತಾರೆ. 

ಅಡ್ವೆಂಚರ್‌ ಕೋರ್ಸ್‌
ಸಾಹಸ ಪ್ರವತ್ತಿಯವರು ನೀವಾದರೆ ಸ್ಕೂéಬಾ ಡೈವಿಂಗ್‌, ರಿವರ್‌ ರ್ಯಾಫ್ಟಿಂಗ್‌ ಮತ್ತು ಪರ್ವತಾರೋಹಣಕ್ಕೆ ಸಂಬಂಧಿಸಿದ ಕೋರ್ಸುಗಳಿಗೆ ಹಾಜರಾಗಬಹುದು. ಇದರಿಂದ ವೃತ್ತಿ ಬದುಕಿಗೆ ನೇರವಾಗಿ ಏನೂ ಸಹಾಯವಾಗದಿದ್ದರೂ, ರೆಸ್ಯೂಮೆಯಲ್ಲಿ ನಿಮ್ಮ ಆಸಕ್ತಿ ಕುರಿತಾದ ಬಾಕ್ಸ್‌ನಲ್ಲಿ ಇವುಗಳಲ್ಲಿ ಒಂದನ್ನು ಬರೆದರೂ ಸಂದರ್ಶನಕಾರ ಇಂಪ್ರಸ್‌ ಆಗಿಯೇ ಆಗುವರು. “ಅಭ್ಯರ್ಥಿ ಬೋರಿಂಗ್‌ ಇಲ್ಲ, ತುಂಬಾ ಇಂಟರೆಸ್ಥಿಂಗ್‌’ ಎಂದು ಅವರು ಷರಾ ಬರೆದುಬಿಡುತ್ತಾರೆ. ಬದುಕಿನಲ್ಲಿ ಹೊಸತನ್ನು ಎಕ್ಸ್‌ಪ್ಲೋರ್‌ ಮಾಡಬೇಕೆನ್ನುವವರಿಗೆ ಅಡ್ವೆಂಚರ್‌ ಕೋರ್ಸುಗಳು ಸೂಕ್ತ. ಅಲ್ಲಿ ಹೊಸದೊಂದು ಪ್ರಪಂಚವೆ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುವುದು. ಸುರಕ್ಷತೆಯ ಬಗ್ಗೆ ಎಚ್ಚರಿಕೆ ಇರಲಿ.

ಕಂಪ್ಯೂಟರ್‌ ಕೋರ್ಸ್‌
ಇದು ಕಂಪ್ಯೂಟರ್‌ ಯುಗ ಎನ್ನುವುದರಲ್ಲಿ ಅನುಮಾನವೇ ಬೇಡ. ಕಂಪ್ಯೂಟರ್‌ ಎಂಜಿನಿಯರ್‌ಗಳಿಗೆ ಬೇಡಿಕೆ ಕುಸಿಯುವುದಿಲ್ಲ ಎನ್ನುವ ನಂಬಿಕೆ ಹಿಂದೆಯೂ ಇತ್ತು. ಈಗಲೂ ಇದೆ. ಎಂಥ ಪ್ರತಿಕೂಲ ಪರಿಸ್ಥಿತಿ ಎದುರಾದರೂ ಒಂದಲ್ಲ ಒಂದು ಕಡೆ ನೌಕರಿಯ ಭದ್ರತೆ ಸಿಕ್ಕೇ ಸಿಗುತ್ತೆ  ಎನ್ನುವುದು ಐಟಿ. ಕ್ಷೇತ್ರದ ಹೆಗ್ಗಳಿಕೆ. ಹೀಗಾಗಿ ಕಂಪ್ಯೂಟರ್‌ ಕೋರ್ಸುಗಳಿಗೆ ಹಾಜರಾಗುವುದು ಯಾವ ಕಾಲಕ್ಕೂ ಸಹಕಾರಿಯಾಗಿಯೇ ಆಗುತ್ತೆ. ಮುಂದೆ ನೀವು ಯಾವುದೇ ಕ್ಷೇತ್ರದಲ್ಲಿ ಮುಂದುವರಿದರೂ ಅಲ್ಲಿ ನಿಮಗೆ ಕಂಪ್ಯೂಟರ್‌ ಜ್ಞಾನ ಬೇಕಾಗುವುದು. ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌, ಆಟೋ ಕ್ಯಾಡ್‌, ಸಾಫ್ಟ್ವೇರ್‌ ಟೆಸ್ಟಿಂಗ್‌, ಸೈಬರ್‌ ಸೆಕ್ಯುರಿಟಿ ಮುಂತಾದ ಕೋರ್ಸುಗಳು ಕಲಿಯಲು ಮಜವನ್ನೂ ಕೊಡುತ್ತವೆ. ಹೀಗಾಗಿ ನಲಿಯುತ್ತಾ ಕಲಿಯಬಹುದು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌
ಸಿವಿಲ್‌ ಸರ್ವೀಸಸ್‌ ಮತ್ತು ಎಂಟ್ರೆನ್ಸ್‌ ಪರೀಕ್ಷೆಗಳಾದ ಕ್ಯಾಟ್‌, ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಪರೀಕ್ಷೆಗಳಿಗೆ ಈಗಲೇ ಕೋಚಿಂಗ್‌ ಪಡೆದುಕೊಂಡರೆ ಅಂತಿಮ ಕ್ಷಣದ ಗಲಿಬಿಲಿ ತಪ್ಪುತ್ತದೆ. ಅಲ್ಲದೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದರಿಂದ ಪರೀಕ್ಷೆಗೆ ಚೆನ್ನಾಗಿ ತಯಾರಾಗಬಹುದು.

ಫೋಟೋಗ್ರಫಿ ಕೋರ್ಸು
ಇದು ಡಿಜಿಟಲ್‌ ಯುಗವಾಗಿರುವುದರಿಂದ ಡಿಜಿಟಲ್‌ ಕ್ಯಾಮೆರಾಗಳ ಭರಾಟೆ ಎಲ್ಲೆಲ್ಲೂ. ಫೋಟೋಗ್ರಫಿ ಹವ್ಯಾಸ ನಮ್ಮನ್ನು ಹೊಸ ಹೊಸ ಸ್ಥಳಗಳಿಗೆ ಕರೆದೊಯ್ಯುತ್ತದೆ. ಜಗತ್ತನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವುದನ್ನು ಕಲಿಸುತ್ತದೆ. ಅಲ್ಲದೆ ಮುಂದೆ ಯಾವ ಕ್ಷೇತ್ರವನ್ನು ಆರಿಸಿಕೊಂಡರೂ ವೃತ್ತಿಯ ಜೊತೆ ಜೊತೆಗೇ ಫೋಟೋಗ್ರಫಿಯನ್ನು ಮುಂದುವರಿಸಬಹುದು. ಅನೇಕ ಮಂದಿ ಹವ್ಯಾಸಿ ಮತ್ತು ವೃತ್ತಿನಿರತ ಫೋಟೋಗ್ರಾಫ‌ರ್‌ಗಳು ಈ ಸಮಯದಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸುವರು. ಅವರು ಮಾತ್ರವಲ್ಲ ಹೆಸರಾಂತ ಕ್ಯಾಮೆರಾ ಉಪಕರಣ ತಯಾರಕ ಕಂಪನಿಗಳೂ ಮುರಿತವರಿಂದ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುತ್ತದೆ. ಇಂಟರ್‌ನೆಟ್‌ ಮೂಲಕ ಅವುಗಳ ಮೇಲೊಂದು ಕಣ್ಣಿಟ್ಟರೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ.

ಡಿಜಿಟಲ್‌ ಆರ್ಟ್ಸ್
ಹಿಂದೆಲ್ಲಾ ಡ್ರಾಯಿಂಗ್‌ನಲ್ಲಿ ಆಸಕ್ತಿ ಇದ್ದವರನ್ನು ಪಾಲಕರು ರಜಾಕಾಲದಲ್ಲಿ ಆರ್ಟ್ಸ್ ಶಿಕ್ಷಕರ ಬಳಿ ಕಳುಹಿಸುತ್ತಿದ್ದರು. ಅವರು ಸಮಯ ಕಲೆಯಲೆಂದೋ, ಸ್ನೇಹಿತರು ಸೇರಿದ್ದಾರೆಂದೋ ಹೋಗಿ ಒಂದು ಗಂಟೆ ಕೂತಿದ್ದು ಬರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಲೆಯನ್ನು ವೃತ್ತಿಪರವಾಗಿಯೇ ಕಲಿಸಲೆಂದು ಅನೇಕ ಅÂನಿಮೇಷನ್‌, ಡಿಸೈನ್‌ ಸ್ಕೂಲುಗಳು ಪುಟ್ಟ ಅವಧಿಯ ಕೋರ್ಸುಗಳನ್ನು ಹಮ್ಮಿಕೊಳ್ಳುತ್ತವೆ. ಇಲ್ಲಿ ಗ್ರಾಫಿಕ್‌ ಡಿಸೈನಿಂಗ್‌, ವಿ.ಎಫ್.ಎಕ್ಸ್‌, ಅÂನಿಮೇಷನ್‌ ಮುಂತಾದ ವಿಭಾಗಗಳ ಕುರಿತು ಹೇಳಿಕೊಡುತ್ತಾರೆ. ಸಿನಿಮಾ, ಧಾರಾವಾಹಿ, ಜಾಹಿರಾತುಗಳಲ್ಲಿ ಇದರ ಬಳಕೆಯಾಗುವುದರಿಂದ ಕಲಿಯಲು ಆಸಕ್ತಿ ತೋರಿಸಬಹುದು.

ಫಿಟ್‌ನೆಸ್‌ ತರಗತಿಗಳು
ಇದು ವೃತ್ತಿಪರ ಕೋರ್ಸ್‌ ಆಗಿಲ್ಲದೇ ಇರಬಹುದು. ಆದರೆ ಬದುಕಿಗೆ ಸಹಾಯವಾಗುವ ಕೋರ್ಸ್‌. ಫಿಸಿಕಲ್‌ ಟ್ರೇನರ್‌ಗಳ ಬಳಿ, ಜಿಮ್‌ಗಳಿಗೆ ಸೇರುವುದರಿಂದ ಆರೋಗ್ಯದ ವಿಚಾರದಲ್ಲಿ ಶಿಸ್ತು ಮೂಡುತ್ತದೆ. ನಾವು ಸ್ವೀಕರಿಸುವ ಆಹಾರ ಮತ್ತು ನಮ್ಮ ಜೀವನಶೈಲಿ ಉತ್ತಮವಾಗುತ್ತದೆ. ಇದು ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿಯೂ ನಮ್ಮನ್ನು ಸದೃಢಗೊಳಿಸಬಲ್ಲುದು. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡರೆ ಇನ್ನುಳಿದಂತೆ ಯಾವ ಸಾಧನೆಗಳನ್ನು ಬೇಕಾದರೂ ಮಾಡುವುದು ಸುಲಭ.

ನ್ಯೂಸ್‌ ಆ್ಯಂಕರ್‌ ಆಗ್ತಿರಾ?
ಟಿ.ವಿ ನ್ಯೂಸ್‌ ಮಾಧ್ಯಮಗಳನ್ನು ಜನರು ಗುರುತಿಸೋದೇ ನ್ಯೂಸ್‌ ಆ್ಯಂಕರ್‌ಗಳ ಮೂಲಕ. ಟಿ.ವಿ. ನ್ಯೂಸ್‌ ಮಾಧ್ಯಮ ಮಾಡುವ ಎಲ್ಲಾ ಒಳ್ಳೆಯ ಕೆಲಸಗಳ ಪ್ರಶಂಸೆಗೆ  ಪಾತ್ರರಾಗೋದು ಕೂಡಾ ಅವರೇ. ಸಾಮಾನ್ಯವಾಗಿ ನ್ಯೂಸ್‌ ರೀಡರ್‌ ಆಗಬೇಕೆಂದರೆ ನೋಡಲು ಸುಂದರವಾಗಿರಬೇಕು, ಅದರೆ ಸೌಂದರ್ಯವೇ ಮುಖ್ಯ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ನ್ಯೂಸ್‌ ಅÂಂಕರ್‌ ಆಗಲು ಮಾನದಂಡಗಳೇನು, ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಆ್ಯಂಕರಿಂಗ್‌ಗೆ ಸಂಬಂಧಿಸಿದ ಕೋರ್ಸುಗಳಿಗೆ ಹಾಜರಾಗಬಹುದು. “ಅಲ್ಮಾ’ ಎನ್ನುವ ನ್ಯೂಸ್‌ ಆ್ಯಂಕರಿಂಗ್‌ ತರಬೇತಿ ಸಂಸ್ಥೆಯನ್ನು ನಾನು ಪ್ರಾರಂಭಿಸಲು ವಿದ್ಯಾರ್ಥಿಗಳ ಉತ್ಸಾಹವೇ ಕಾರಣ. ಪತ್ರಿಕೋದ್ಯಮದ ಕುರಿತು ಆಸಕ್ತಿ ಇರುವ ಯಾರು ಬೇಕಾದರೂ ಇಲ್ಲಿ ಸೇರಿಕೊಳ್ಳಬಹುದು. ಅನೇಕ ಹಂತಗಳಲ್ಲಿ ಅಭ್ಯರ್ಥಿಗಳನ್ನು ತರಬೇತುಗಳಿಸಲಾಗುತ್ತದೆ. ನ್ಯೂಸ್‌ ಆ್ಯಂಕರಿಂಗ್‌ ಒಂದೇ ಅಲ್ಲ, ಪ್ರಿಂಟ್‌ ಮೀಡಿಯಾದ ಬಗ್ಗೆಯೂ ಇಲ್ಲಿ ಹೇಳಿಕೊಡಲಾಗುವುದು. ಕನ್ನಡ ಮತ್ತು ಇಂಗ್ಲೀಷ್‌ ಎರಡೂ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿದ್ದೇವೆ. ಏಕೆಂದರೆ ಆಂಗ್ಲ ವಾಹಿನಿಗಳಲ್ಲೂ ಅವಕಾಶಗಳನ್ನು ಪಡೆದುಕೊಳ್ಳಲಿ ಎಂಬ ಸದುದ್ದೇಶದಿಂದ.
ಗೌರೀಶ್‌ ಅಕ್ಕಿ, ನ್ಯೂಸ್‌ ಆ್ಯಂಕರ್‌ ಮತ್ತು ಸ್ಥಾಪಕ, ಅಲ್ಮಾ ಸೂಪರ್‌ ಮೀಡಿಯಾ ಶಾಲೆ
 
ವಿದ್ಯಾ ಶಂಕರ…

ಟಾಪ್ ನ್ಯೂಸ್

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.