ಭಟ್ಕಳ: ಶಾಸಕ ವೈದ್ಯರನ್ನು ಬೆಂಬಲಿಸಲು ಮುಸ್ಲಿಂ ಸಂಘಟನೆ ನಿರ್ಧಾರ
Team Udayavani, Apr 3, 2018, 9:12 AM IST
ಭಟ್ಕಳ: ತಾಲೂಕಿನ ಇದಾರೆ ಫೈಸ ರುಸೂಲ್ ಸಂಘಟನೆ ವತಿಯಿಂದ ಈ ಬಾರಿ ಚುನಾವಣೆಯಲ್ಲಿ ಮಂಕಾಳ ವೈದ್ಯರನ್ನು ಬೆಂಬಲಿಸಲು ತೀರ್ಮಾನಿ ಸಲಾಗಿದೆ ಎಂದು ಸಂಘಟನೆಯ ಖಾಜಾ ಹಸನ್ ಕಲೈವಾಲಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇದಾರೆ ಪೈಸರುಸೂಲ್ ಸಂಘಟನೆಯು ಸುನ್ನಿ, ದಖನಿ, ತಂಗರಕರ ಜನತೆಯ ಸಂಘಟನೆಯಾಗಿದ್ದು ಭಟ್ಕಳ ಕ್ಷೇತ್ರದಲ್ಲಿ ಸಂಘಟನೆಯ ಹತ್ತು ಸಾವಿರಕ್ಕೂ ಹೆಚ್ಚು ಜನರಿದ್ದೇವೆ. ನಾವು ಈ ಬಾರಿ ಒಮ್ಮತದಿಂದ ಮಂಕಾಳ ವೈದ್ಯರು ಯಾವುದೇ ಪಕ್ಷದಿಂದ ನಿಂತರೂ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದೂ ಹೇಳಿದರು.
ಸಂಘಟನೆಯ ಪ್ರಮುಖ ಮುನೀರ್ ಅಹಮ್ಮದ್ ಮಾತನಾಡಿ ಮುಂದಿನ ಚುನಾವಣೆಯಲ್ಲಿ ನಾವು ಪಕ್ಷಾತೀತವಾಗಿ ಮಂಕಾಳ ವೈದ್ಯರಿಗೆ ಬೆಂಬಲ ನೀಡುತ್ತೇವೆ. ಕಳೆದ ಐದು ವರ್ಷಗಳಲ್ಲಿ ಬಡವರ ಪರವಾಗಿ ಅತ್ಯಂತ ಉತ್ತಮ ಕೆಲಸವಾಗಿದೆ. ಶಾಸಕ ಮಂಕಾಳ ವೈದ್ಯರು ಬಡವರ ಕಣ್ಣೀರು ಒರೆಸುವ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಅನೇಕ ಮನೆಗಳಿಗೆ ವಿದ್ಯುತ್ ನೀಡಿದ್ದಾರೆ. ಅವರಿಗೆ ನಮ್ಮ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದರು.
ಸಂಸ್ಥೆಯ ಜನರಲ್ ಸಕ್ರೆಟರಿ ಇಸ್ಮಾಯಿಲ್ ಫಾರೂಕಿ ಮಾತನಾಡಿ ನಮ್ಮ ಸಂಸ್ಥೆಯು ರಾಜಕೀಯೇತರ ಸಂಸ್ಥೆಯಾಗಿದ್ದು, ಈ ಚುನಾವಣೆಯಲ್ಲಿ ನಮ್ಮ ಸಂಸ್ಥೆ ಬಡವರ ಪರ ಕೆಲಸ ಮಾಡಿದ, ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಶ್ರಮಿಸುತ್ತಿರುವ ಮಂಕಾಳ ವೈದ್ಯರನ್ನು ಬೆಂಬಲಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದರು. ಅಬ್ದುಲ್ ಸತ್ತಾರ್, ಮೌಲಾನಾ ಮೊಹಮ್ಮದ್ ಅಕ್ರಮಿ, ಮುಂತಾದವರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.