ಕೆಎಸ್‌ಎ ಆಯೋಜಿತ ರಮಾನಾಥ ಪಯ್ಯಡೆ ಸ್ಮಾರಕ ಲೀಗ್‌ ಫುಟ್ಬಾಲ್‌ ಪಂದ್ಯಾಟ


Team Udayavani, Apr 3, 2018, 12:07 PM IST

0104mum03.jpg

ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಫುಟ್ಬಾಲ್‌ ಚಟುವಟಿಕೆಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ. ಪಂದ್ಯಾಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಇವೆರಡನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ಎಳವೆಯಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಲು ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಕಳೆದ ಹಲವಾರು ವರ್ಷಗಳಿಂದ ತೊಡಗಿಕೊಂಡಿರುವುದು ಅಭಿಮಾನ ಮತ್ತು ಹೆಮ್ಮೆಯ ವಿಷಯವಾಗಿದೆ. ಕ್ರೀಡೆ ಎಂಬುವುದು ಜಾತಿ, ಬೇಧವನ್ನು ಮರೆತು ಎಲ್ಲರನ್ನು ಒಂದುಗೂಡಿಸುವ ಕಲೆಯಾಗಿದೆ. ಕ್ರೀಡೆಗೆ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಹಾಗೂ ಕಾರ್ಯದರ್ಶಿ ಜಯ ಎ. ಶೆಟ್ಟಿ ಇವರ ಯೋಗದಾನ ಮಹತ್ತರವಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ  ಎಸ್‌. ಪಯ್ಯಡೆ ಇವರು ನುಡಿದರು.

ಮಾ. 31 ರಂದು ಸಂಜೆ ಚರ್ಚ್‌ಗೇಟ್‌ ಪರಿಸರದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಕ್ರೀಡಾಂಗಣದಲ್ಲಿ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮುಂಬಯಿ ಆಶ್ರಯದಲ್ಲಿ ನಡೆದ  ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಡಾ| ಪದ್ಮನಾಭ ಶೆಟ್ಟಿ ಇವರು ಪ್ರಾಯೋಜಿತ 22 ನೇ ವಾರ್ಷಿಕ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್‌ ಫುಟ್ಬಾಲ್‌ ಪಂದ್ಯಾಟದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಫುಟ್ಬಾಲ್‌ ಮತ್ತು ಕ್ರಿಕೆಟ್‌ಗೆ ಮಹತ್ತರವಾದ ಸ್ಥಾನಮಾನವನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ತುಳು-ಕನ್ನಡಿಗರ ಮಕ್ಕಳು ಪಡೆದುಕೊಳ್ಳಬೇಕು. ಇಲ್ಲಿ ತರಬೇತಿ ಪಡೆದ ಮಕ್ಕಳು ಇಂದು ರಾಷ್ಟ್ರೀಯ, ಅಂತಾರಾಷ್ಟಿÅàಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಭವಿಷ್ಯದಲ್ಲೂ ಅಸೋಸಿಯೇಶನ್‌ಗೆ ನನ್ನಿಂದಾಗುವ ಎಲ್ಲಾ ರೀತಿಯ  ಸಹಾಯ, ಸಹಕಾರ ಸದಾ ದೊರೆಯಲಿದೆ ಎಂದು ನುಡಿದು ವಿಜೇತ ತಂಡಗಳನ್ನು ಅಭಿನಂದಿಸಿ ಶುಭಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ್‌ ರಮಾನಾಥ ಪಯ್ಯಡೆ, ಬಂಟರ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠuಲ ಆಳ್ವ ಇವರು ಶುಭಹಾರೈಸಿದರು. ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಜತೆ ಕಾರ್ಯದರ್ಶಿ  ಎಂ. ಪಿ. ಶೆಟ್ಟಿ, ಗೌರವ ಕೋಶಾಧಿಕಾರಿ ಕೃಷ್ಣ ಎನ್‌. ಶೆಟ್ಟಿ, ಪ್ರೇಮನಾಥ್‌ ಕೋಟ್ಯಾನ್‌, ಜಯಂತ್‌ ಕುಂದರ್‌, ಶಾಲು ಡಿ’ಸೋಜಾ, ಹರೀಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ ಇವರು ಅತಿಥಿ- ಗಣ್ಯರುಗಳನ್ನು ಸ್ವಾಗತಿಸಿ, ವಿಜೇತ ತಂಡಗಳ ಹೆಸರು ಘೋಷಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಅತಿಥಿ-ಗಣ್ಯರುಗಳನ್ನು ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಗೌರವಿಸಿದರು.

ದಿ| ರಮಾನಾಥ ಪಯ್ಯಡೆ ಸ್ಮಾರಕ ಫುಟ್ಬಾಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಉದಯ ತಂಡ 

22 ನೇ ವಾರ್ಷಿಕ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್‌ ಫುಟ್ಬಾಲ್‌ ಪಂದ್ಯಾಟದ ಫೈನಲ್‌ ಪಂದ್ಯವು  ವಿಜಯ ಉದಯ ತಂಡ ಹಾಗೂ ಕರ್ನಾಟಕ ನ್ಪೋರ್ಟ್ಸ್ ಕ್ಲಬ್‌ ನಡುವೆ ನಡೆಯಿತು. ಪಂದ್ಯದ ಮೊದಲನೇ 20 ನಿಮಿಷದಲ್ಲಿ ಆಶೀರ್ವಾದ್‌ ಹೆಗಡೆ ಇವರ ಗೋಲಿನಿಂದ ಉದಯ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಮುನ್ನಡೆ ಪಂದ್ಯ ಮುಗಿಯುವವರೆಗೆ ಸಾಗಿ ಉದಯ ತಂಡವು ಅಂತಿಮವಾಗಿ ಈ ಪಂದ್ಯಾವಳಿಯ  ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಸತ್ಯ ವಿಜಯ ತಂಡಕ್ಕೆ ಮೂರನೇ ಸ್ಥಾನ 
ಈ ಪಂದ್ಯಾಟದ ಮುಂಚೆ ಮೂರನೇ ಹಾಗೂ ನಾಲ್ಕನೇ ಕ್ರಮಾಂಕಕ್ಕೆ  ಸತ್ಯವಿಜಯ ಹಾಗೂ ಮಂಗಳೂರು ಬ್ಲೂಸ್‌ ತಂಡಗಳು ಸೆಣಸಾಡಿದ್ದವು. ಎರಡು ತಂಡಗಳೂ ಅಂತಿಮ ಹಂತದವರೆಗೆ 0-0 ಅಂತರದಿಂದ ಸಮಾಬಲ ಸಾಧಿಸಿದ್ದು, ಆನಂತರ ನಡೆದ ಟ್ರೈಬ್ರೇಕರ್‌ನಲ್ಲಿ ಸತ್ಯವಿಜಯ ತಂಡವು ಮಂಗಳೂರು ಬ್ಲೂಸ್‌ ತಂಡವನ್ನು 5-4 ಅಂತರಗಳಿಂದ ವಿಜಯ ಸಾಧಿಸಿ ಮೂರನೇ ಸ್ಥಾನವನ್ನು ಪಡೆಯಿತು. ವಿಜಯಿ ತಂಡದ ಪರವಾಗಿ ಸೆನಾರಿಯೋ, ತೇಜಸ್‌ ಪೂಜಾರಿ, ಮೆಲ್ವಿನ್‌, ಶಿವಾಂಶ್‌ ರಾವ್‌, ತುಷಾರ ಪೂಜಾರಿ ಗೋಲು ಹೊಡೆದರೆ, ಪರಾಜಿತ ತಂಡದ ಪರವಾಗಿ ಉಮೇಶ್‌ ಸಾಲ್ಯಾನ್‌, ರಿಶಿಲ್‌ ಶೆಟ್ಟಿ, ಆರೋನ್‌ ಮಜಾಡೋ, ಅಸಿಫ್‌ ಖಾನ್‌ ಇವರು ಗೋಲು ಹೊಡೆದರು.

ವೈಯಕ್ತಿಕ ಪ್ರಶಸ್ತಿ ವಿಜೇತರು 
ರಾಜೇಶ್‌ ಬಂಗೇರ ಇವರು ಉತ್ತಮ ಗೋಲ್‌ ಕೀಪರ್‌, ಅಮಿರ್‌ ಶೇಖ್‌ ಉತ್ತಮ ಡಿಪೆಂಡರ್‌, ಬ್ರೆಂಡನ್‌ ಇವರು ಉತ್ತಮ ಡಿಫೆಂಡರ್‌ ಹಾಗೂ ತುಷಾರ್‌ ಪೂಜಾರಿ ಇವರು ಉತ್ತಮ ಫಾರ್‌ವರ್ಡರ್‌ ಪ್ರಶಸ್ತಿಗಳಿಗೆ ಭಾಜನರಾದರು. ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕ್ರೀಡಾಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಸ್ಫೂರ್ತಿಯಿಂದ ಆಡಬೇಕು ಡಾ| ಪಿ. ವಿ. ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಅಧ್ಯಕ್ಷ  ಮತ್ತು  ಪಂದ್ಯಾವಳಿಯ ಪ್ರಾಯೋಜಕ ಡಾ| ಪದ್ಮನಾಭ ವಿ. ಶೆಟ್ಟಿ ಮಾತನಾಡಿ, ಪಂದ್ಯಾವಳಿಯಲ್ಲಿ ತಂಡಗಳು ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು. ಚರ್ಚೆಗೆ ಆಸ್ಪಧ ನೀಡದೆ ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ತೊಡಗಬೇಕು. ಆಗ ಮಾತ್ರ ಆಟಗಾರರಲ್ಲಿ ಹುಮ್ಮಸ್ಸು ತುಂಬಲು ಸಾಧ್ಯವಾಗುತ್ತದೆ. ಕಳೆದ 22 ವರ್ಷಗಳಿಂದ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್‌ ಫುಟ್ಬಾಲ್‌ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಇದರ ಯಶಸ್ಸಿಗೆ ಶ್ರಮಿಸುತ್ತಿರುವ ಅಸೋಸಿಯೇಶನ್‌ನ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಕ್ರೀಡಾಭಿಮಾನಿಗಳು ಹಾಗೂ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳನ್ನು ಈ ಸಂದರ್ಭದಲ್ಲಿ ಅಭಿನಂದಿ ಸುತ್ತಿದ್ದೇನೆ ಎಂದು ನುಡಿದು ವಿಜೇತ ತಂಡಗಳನ್ನು  ಅಭಿನಂದಿಸಿ ಭವಿಷ್ಯದಲ್ಲಿ ಇನ್ನಷ್ಟು ಶ್ರೇಯಸ್ಸು ಕ್ರೀಡಾಳುಗಳಿಗೆ ಲಭಿಸಲಿ ಎಂದು ಹಾರೈಸಿದರು.

ಟಾಪ್ ನ್ಯೂಸ್

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

Zeeka-Virus

Zika Virus: ಗರ್ಭಿಣಿಯರೇ ಝೀಕಾ ಬಗ್ಗೆ ಎಚ್ಚರ: ಸರಕಾರ ಸೂಚನೆ

MBPatil

Airport: ರಾಜಧಾನಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗದ ಹುಡುಕಾಟ: ಎಂ.ಬಿ. ಪಾಟೀಲ್‌

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

1-a-da

Rain; ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತಾ ಟಿ20 ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

1-paris

Paris Olympics; ಅಲ್ಡ್ರಿನ್‌, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್‌ ಟಿಕೆಟ್‌

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.