ಬಸರಕೋಡದಲ್ಲಿ ಬಸವೇಶ್ವರ ರಥೋತ್ಸವ
Team Udayavani, Apr 3, 2018, 1:12 PM IST
ಮುದ್ದೇಬಿಹಾಳ: ತಾಲೂಕಿನ ಬಸರಕೋಡದಲ್ಲಿ ಸೋಮವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಪವಾಡ
ಬಸವೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೂ ಮೊದಲು ಮಧ್ಯಾಹ್ನ ನಿಡಗುಂದಿ ಪಟ್ಟಣದಿಂದ ತೇರಿನ ಕಳಸ, ಬೆಳ್ಳಿಯ ಛತ್ರಿ, ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ , ರೂಢಗಿ ಗ್ರಾಮದಿಂದ ತೇರಿನ ಮಿಣಿ ಮೆರವಣಿಗೆ ಸಮೇತ ಆಗಮಿಸಿದ್ದರು. ಮೂರುಲಿಂಗನ ದೇವಸ್ಥಾನದಿಂದ ಪವಾಡ ಬಸವೇಶ್ವರ ದೇವಸ್ಥಾನದವರೆಗೆ ಕಳಸದ ಮೆರವಣಿಗೆ ನಡೆಯಿತು. ಸಂಜೆ ಕಳಸವನ್ನು ರಥದ ಶಿಖರಕ್ಕೇರಿಸಿದ ಮೇಲೆ ವಿಶೇಷ ಪೂಜೆ ಸಲ್ಲಿಸಿ ನೂರಾರು ಶರಣರು, ಸಾವಿರಾರು ಭಕ್ತರು ಹಷೋದ್ಘಾರದೊಂದಿಗೆ ಮಹಾರಥೋತ್ಸವ ನೆರವೇರಿತು.
ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಮಹಾದೇವಿ ಪಾಟೀಲ, ನಮ್ಮ ಕಾಂಗ್ರೆಸ್‌ನ ಮುದ್ದೇಬಿಹಾಳ ಮತಕ್ಷೇತ್ರದ ಅಭ್ಯರ್ಥಿ ರಕ್ಷಿತ್ ವರ್ತೂರು, ಪವಾಡ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವೈ. ಬಿರಾದಾರ, ಪದಾಧಿಕಾರಿಗಳಾದ ಎಸ್.ಬಿ. ನಾಡಗೌಡರ, ಎಂ.ಆರ್. ನಾಡಗೌಡರ, ಜಾತ್ರಾ ಕಮೀಟಿ ಅಧ್ಯಕ್ಷ ಶ್ರೀಶೈಲ ಸೂಳಿಭಾವಿ, ಶ್ರೀಶೈಲ ಮೇಟಿ, ಅಪ್ಪುಧಣಿ ನಾಡಗೌಡ,
ಸಂಗನಗೌಡ ಬಿರಾದಾರ, ಅರವಿಂದ ಕೊಪ್ಪ ಇದ್ದರು.
ಮಹಾರಥೋತ್ಸವ ಹಿನ್ನೆಲೆ ದೇವಸ್ಥಾನದ ತೋಟದಲ್ಲಿ ಬೀಡು ಬಿಟ್ಟಿದ್ದ ನೂರಾರು ಶರಣ, ಶರಣೆಯರಿಗೆ ಭಕ್ತರು ಪಾದಪೂಜೆ ಸಲ್ಲಿಸಿ, ತಮ್ಮ ಮನೆಗಳಿಂದ ತಂದಿದ್ದ ಸಜ್ಜಕ, ಮಾದಲಿ ನೈವೇದ್ಯ ಅರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.