ಅರಿಸಿನ ಕಾಳುಮೆಣಸಿನ ಸಮ್ಮಿಶ್ರಣ ಹಲವು ರೋಗಗಳಿಗೆ ರಾಮಬಾಣ
Team Udayavani, Apr 3, 2018, 5:28 PM IST
ಅರಿಸಿನ ಕೇವಲ ಅಡುಗೆಗೆ ಮಾತ್ರ ಬಳಸುವ ವಸ್ತುವಲ್ಲ. ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಸಿನದಲ್ಲಿರುವ ಕುರ್ಕುಮಿನ್ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಇಂತಹುದ್ದೇ ಇನ್ನೊಂದು ವಸ್ತು ಕಾಳುಮೆಣಸು. ಇವೆರಡೂ ವಸ್ತುಗಳ ಸಮ್ಮಿಶ್ರಣ ಹಲವು ರೋಗಗಳಿಗೆ ರಾಮಬಾಣ ಎಂಬುದು ಈಗಾಗಲೇ ದೃಢಪಟ್ಟಿದೆ. ಅರಿಸಿನದಲ್ಲಿರುವ ಔಷಧೀಯ ಗುಣಗಳ ಪೂರ್ಣ ಪ್ರಯೋಜನ ಪಡೆಯಲು ಕಾಳುಮೆಣಸು ನೆರವಾಗುತ್ತದೆ.
ಅರಿಸಿನದಲ್ಲಿ ಅದ್ಭುತ ಔಷಧೀಯ ಗುಣಗಳಿದ್ದರೂ ಇವನ್ನು ಸುಲಭದಲ್ಲಿ ದೇಹ ಪಡೆದುಕೊಳ್ಳುವುದಿಲ್ಲ. ಏಕೆಂದರೆ ಇದರ ಪೋಷಕಾಂಶಗಳು ದೇಹಕ್ಕೆ ಮೂಲರೂಪದಲ್ಲಿ ಸಿಗುವ ಮುನ್ನವೇ ಜೀರ್ಣಕ್ರಿಯೆಯಲ್ಲಿ ಚಯಾಪಚಯ ಕ್ರಿಯೆಗೆ ಒಳಗೊಂಡು ಪರಿವರ್ತಿತಗೊಳ್ಳುತ್ತವೆ. ಆದರೆ ಇದರೊಂದಿಗೆ ಕಾಳುಮೆಣಸನ್ನು ಸೇವಿಸಿದರೆ ಅರಿಸಿನದ ಪ್ರಯೋಜನಗಳನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಸ್ಥೂಲಕಾಯ ಹಾಗೂ ಮಧುಮೇಹ ಬಾರ ದಂತೆ ತಡೆಯುತ್ತದೆ. ಈ ಸಂಯೋಜನೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ.
ಉರಿಯೂತಕ್ಕೆ ಔಷಧ
ಅರಿಸಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ಅಲ್ಲದೇ ಉರಿಯೂತದಿಂದ ಉಂಟಾಗುವ ಹಲವಾರು ತೊಂದರೆಗಳನ್ನು ನಿವಾರಿಸುತ್ತದೆ. ನಮ್ಮ ದೇಹದ ರಕ್ತವನ್ನು ಸೋಸಿ ಕಶ್ಮಲಗಳನ್ನು ಹೊರಹಾಕುವಲ್ಲಿ ಯಕೃತ್‌ನ ಕಾರ್ಯ ಪ್ರಮುಖವಾಗಿದೆ. ಅರಿಸಿನವು ಈ ಕಶ್ಮಲಗಳು ದೇಹದಲ್ಲಿ ಉಳಿಯದಂತೆ ನೋಡಿಕೊ ಳ್ಳು ತ್ತದೆ ಮತ್ತು ಯಕೃತ್‌ನ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಸನ್ನ ಹೆಗ್ಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.