ತಾತ್ಕಾಲಿಕ ಬಸ್‌ ಶೆಡ್‌ ನಿರ್ಮಿಸಲು ಆಗ್ರಹ


Team Udayavani, Apr 4, 2018, 9:00 AM IST

Kumbale-Bus-stand-3-04.jpg

ಕುಂಬಳೆ: ಕುಂಬಳೆ ಬಸ್‌ ನಿಲ್ದಾಣದ ಆಯುಷ್ಯ ಮುಗಿದ ನೆಪದಲ್ಲಿ ಕಟ್ಟಡವನ್ನು ಕೆಡವಲಾಗಿದೆ. ನಿಲ್ದಾಣದ ಕಟ್ಟಡದೊಳಗೆ ವ್ಯಾಪಾರ ಮಾಡುತ್ತಿದ್ದ ಎಲ್ಲರನ್ನೂ ಕಾನೂನಿನ ಬಲ ಪ್ರಯೋಗದ ಮೂಲಕ ತೆರವುಗೊಳಿಸಲಾಗಿದೆ.ಇದಕ್ಕಾಗಿ ಸ್ಥಳೀಯಾಡಳಿತ ರಾಜ್ಯದ ಉಚ್ಚನ್ಯಾಯಾಲಯ ಮೆಟ್ಟಲೇರಬೇಕಾಯಿತು. ಕೊನೆಗೂ ಹಳೆ ನಿಲ್ದಾಣ ಕಟ್ಟಡವನ್ನು ಮುರಿದು ಸಮತಟ್ಟುಗೊಳಿಸಲಾಯಿತು. ಇದೀಗ ಈ ಪ್ರದೇಶದಲ್ಲಿ ಕಟ್ಟಡದ ಅಡಿಪಾಯದ ಕೆಲವು ಕಲ್ಲುಗಳು ಉಳಿದಿವೆ.ಇದರಿಂದಲಾಗಿ ಪ್ರಯಾ ಣಿಕರಿಗೆ ಬಸ್‌ ಇಳಿದು ಈ ಪ್ರದೇಶದಲ್ಲಿ ಪರಸ್ಪರ ಅತ್ತಿಂದಿತ್ತ ನಡೆದಾಡಲು ಅಸಾಧ್ಯವಾಗಿದೆ.ಕೆಲವು ಬಾರಿ ಈ ಪ್ರದೇಶದ ಸುತ್ತ ವಾಹನಗಳು ತಂಗಿರುವುದನ್ನು ಮತ್ತು ಕೆಲವೊಂದು ಸಂತೆಗಳನ್ನು ಕಾಣಬಹುದಾಗಿದೆ.

ಪ್ರಯಾಣಿಕರ ಗೋಳು : ಹಳೆನಿಲ್ದಾಣದೊಳಗೆ ಸದಾ ತುಂಬಿ ತುಳುಕುತ್ತಿದ್ದ ಪ್ರಯಾಣಿಕರು ಪ್ರಕೃತ ಆಶ್ರಯವಿಲ್ಲದೆ ಪರದಾಡಬೇಕಾಗಿದೆ.ಬಸ್ಸಿಗೆ ಕಾಯುವವರು ಬಿಸಿಲ ಝಳಕ್ಕೆ ಪಕ್ಕದ ಅಂಗಡಿ ಬಾಗಿಲಿನಲ್ಲಿ ನೆರಳಿಗಾಗಿ ಆಶ್ರಯ ಪಡೆಯಬೇಕಾಗಿದೆ. ವೃದ್ಧರು, ಮಕ್ಕಳು ಮಹಿಳೆಯರು ಸಂಕಷ್ಟ ಅನುಭವಿಸಬೇಕಾಗಿದೆ.ಮುಂದಿನ ದಿನದಲ್ಲಿ ಮಳೆಗಾಲದಲ್ಲಿ ಪ್ರಯಾಣಿಕರು ಇನ್ನಷು ಪರದಾಡಬೇಕಾಗಿದೆ.ಮಳೆಗೆ ಒದ್ದೆಯಾಗಿಯೇ ಬಸ್ಸೇರಬೇಕಾಗಿದೆ.

ತಾತ್ಕಾಲಿಕ ಶೆಡ್‌ ನಿರ್ಮಿಸಲು ಆಗ್ರಹ : ಹೊಸನಿಲ್ದಾಣ ಕಟ್ಟಡ ನಿರ್ಮಿಸಲು ತಾಂತ್ರಿಕ ವಿಳಂಬವಾಗುವುದು ಸಹಜ. ಆ ತನಕ ಇಲ್ಲೊಂದು ತಾತ್ಕಾಲಿಕ ಶೆಡ್‌ ನಿರ್ಮಿಸಲು ಪ್ರಯಾಣಿಕರ ಆಗ್ರಹವಾಗಿದೆ. ನೂತನ ನಿಲ್ದಾಣ ನಿರ್ಮಾಣದ ತನಕ ಪ್ರಯಾಣಿಕರು ಬಿಸಿಲು ಮಳೆಗೆ ಆಶ್ರಯ ಪಡೆಯಲು ಇದು ಅನಿವಾರ್ಯ ವಾಗಿದ್ದು ಸ್ಥಳೀಯಾಡಳಿತ ಇದಕ್ಕೆ ಮುಂದಾಗಬೇಕೆಂಬುದಾಗಿ ಪ್ರಯಾಣಿಕರ ಒತ್ತಾಯವಾಗಿದೆ. ಮಳೆಗಾಲಕ್ಕೆ ಮುನ್ನ ಸ್ಥಳೀಯಾಡಳಿತ ತಾತ್ಕಾಲಿಕ ಶೆಡ್‌ ನಿರ್ಮಿಸಲು ಮುಂದಾಗಬೇಕಾಗಿದೆ.

ಅಧ್ಯಕ್ಷರ ಭರವಸೆ : ಹೊಸ ಬಸ್‌ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಯೋಜನೆಯನ್ನು ರಾಜ್ಯ ಅರ್ಬನ್‌ ರೂರಲ್‌ ಫಿನಾನ್ಸ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ಗೆ ಸಮರ್ಪಿಸಲಾಗಿದೆ.ಇದರಲ್ಲಿ 90 ಶತಮಾನ ಸಾಲ ಮತ್ತು 10 ಶತಮಾನ ಗ್ರಾ.ಪಂ.ನ  ನಿಧಿ ಬಳಕೆಯಾಗುವುದು. ಯೋಜನೆಗೆ ಸರಕಾರ ಅಂಗೀಕಾರ ನೀಡಬೇಕಾಗಿದೆ. ಬಳಿಕ ಕಾಮಗಾರಿ ಆರಂಭವಾಗಲಿದೆ. ಆ ತನಕ ಪ್ರಯಾಣಿಕರಿಗೆ ತಂಗಲು ತಾತ್ಕಾಲಿಕ ಶೀಟಿನ ಶೆಡ್‌ ನಿರ್ಮಿಸಲಾಗುವುದೆಂಬುದಾಗಿ ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌.ಉದಯವಾಣಿಗೆ ತಿಳಿಸಿದ್ದಾರೆ.

— ಅಚ್ಯುತ ಚೇವಾರ್‌

ಟಾಪ್ ನ್ಯೂಸ್

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Untitled-1

Kasaragod ಅಪರಾಧ ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

1—–eweq

Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.