ಗಾಳಿ: ಲಾರಿ ಮೇಲೆ ಉರುಳಿದ ಮರ
Team Udayavani, Apr 4, 2018, 7:48 AM IST
ಬೆಳ್ತಂಗಡಿ: ಮಂಗಳವಾರ ಸಂಜೆ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಳೆ ಸುರಿದಿದ್ದು, ಉಜಿರೆಯ ನೀರಚಿಲುಮೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಿನಿ ಲಾರಿಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಸ್ವಲ್ಪ ಸಮಯ ಉಜಿರೆ – ಧರ್ಮಸ್ಥಳ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಹಲವು ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ. ಕನ್ಯಾಡಿ-2 ಶಾಲೆ ಬಳಿ ವಿದ್ಯುತ್ ತಂತಿಗಳ ಮೇಲೆ ಮರಬಿದ್ದು ಹಾನಿಯುಂಟಾಗಿದೆ.
ಗುಡುಗು ಸಿಡಿಲು ಗಾಳಿ ಸಹಿತ ಮಳೆ ಸುರಿದಿದ್ದರಿಂದ ಮುಂಡಾಜೆ, ಕಲ್ಮಂಜ, ಮುಲಾರು ಮೊದಲಾದೆಡೆ 500ಕ್ಕೂ ಹೆಚ್ಚು ಅಡಿಕೆ ಮರ, ರಬ್ಬರ್ ಮರಗಳಿಗೆ ಹಾನಿಯಾಗಿದೆ. ಪರಾರಿ ಸಿದ್ದಬೈಲು ಮಾರ್ಗದ ಪಿಲತಡ್ಕ ಬಳಿ 5 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಉಜಿರೆ, ಕನ್ಯಾಡಿ ಮೊದಲಾದೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮಂಗಳವಾರ ಸಂಜೆಯಿಂದಲೇ ನಗರ ಸಹಿತ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಿ ಕತ್ತಲು ಆವರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.