ನವ ಸುಳ್ಯದ ನಿರ್ಮಾತೃಗೆ ಕಂಚಿನ ಪ್ರತಿಮೆಯ ಗೌರವ
Team Udayavani, Apr 4, 2018, 10:57 AM IST
ಸುಳ್ಯ: ಹಳ್ಳಿಗಾಡಿನ ಬೀಡಾಗಿದ್ದ ಸುಳ್ಯವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಲ್ಲಿ ಮಹತ್ವದ ಕೊಡುಗೆ ನೀಡಿದ, ಹಲವು ವಿದ್ಯಾಸಂಸ್ಥೆಯ ನಿರ್ಮಾತೃ ಕುರುಂಜಿ ವೆಂಕಟರಮಣ ಗೌಡ ಅವರ ಕಂಚಿನ ಪ್ರತಿಮೆಯೊಂದು ಸ್ಮಾರಕ ರೂಪದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ಸದ್ಯದಲ್ಲೇ ಅನಾವರಣಗೊಳ್ಳಲಿದೆ.
ದಿ| ಡಾ| ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ಸಮಿತಿ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಖಾಸಗಿ ಬಸ್ ನಿಲ್ದಾಣ ಬಳಿ ಹಳೆ ಹೂವಿನ ಮಾರುಕಟ್ಟೆ ಬಳಿ ಅಡಿ ಪಾಯ ಕಾಮಗಾರಿ ಪೂರ್ಣಗೊಂಡಿದೆ. ಮಾಣಿ- ಮೈಸೂರು ರಾಜ್ಯ ಹೆದ್ದಾರಿ, ನಗರದ ಮಧ್ಯೆ ಹಾದು ಹೋಗುವ ರಸ್ತೆ ಭಾಗಕ್ಕೆ ಅಭಿಮುಖವಾಗಿ ಈ ಪ್ರತಿಮೆ ಎದ್ದು ನಿಲ್ಲಲಿದೆ.
ಎರಡನೆಯ ಪ್ರತಿಮೆ
ಸುಳ್ಯದ ನಗರದ ಪಾಲಿಗೆ ಈಗ ನಿರ್ಮಾಣ ಆಗುತ್ತಿರುವುದು ಕುರುಂಜಿ ವೆಂಕಟರಮಣ ಗೌಡ ಅವರ ಎರಡನೆ ಪ್ರತಿಮೆ. ನಾಲ್ಕು ವರ್ಷಗಳ ಹಿಂದೆ ಕುರುಂಜಿಬಾಗ್‌ನಲ್ಲಿ ಕೆವಿಜಿ ವಿದ್ಯಾಸಂಸ್ಥೆಯ ನೌಕರ ವೃಂದದವರೇ ಸೇರಿ ಕಂಚಿನ ಪ್ರತಿಮೆ ನಿರ್ಮಿಸಿದ್ದರು. ಈಗ ಎರಡನೆ ಪ್ರತಿಮೆ ಮುಖ್ಯ ರಸ್ತೆ ಸಮೀಪದಲ್ಲಿ ಸಾರ್ವಜನಿಕ ನೆಲೆಯಲ್ಲಿ ನಿರ್ಮಾಣ ಆಗುತ್ತಿದೆ. ಇದು ಸಾರ್ವಜನಿಕ ರೂಪದಲ್ಲಿ ನೀಡುತ್ತಿರುವ ಮೊದಲ ಪ್ರತಿಮೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇನ್ನು ಮುಂದೆ ನಗರದ ಮುಖ್ಯ ರಸ್ತೆ ಮತ್ತು ತಾಲೂಕು ಕಚೇರಿ ರಸ್ತೆ ಸಂಚರಿಸುವ ಸಂದರ್ಭದಲ್ಲಿ ಕುರುಂಜಿ ವೆಂಕಟರಮಣ ಗೌಡ ಅವರನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಒದಗಲಿದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.