ಸತತ ಮಳೆ: ಕತ್ತಲಲ್ಲಿ ಕಾಲ ಕಳೆದ ಗ್ರಾಮೀಣ ಜನತೆ
Team Udayavani, Apr 4, 2018, 12:07 PM IST
ಸುಬ್ರಹ್ಮಣ್ಯ: ಮೂರು ದಿನಗಳಿಂದ ಸಂಜೆ ವೇಳೆಗೆ ಗುಡುಗು, ಮಿಂಚು, ಗಾಳಿ ಸಹಿತ ಹಗುರ ಮಳೆಯಾಗುತ್ತಿದೆ. ಹಲವೆಡೆ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಸಂಜೆ ವೇಳೆಗೆ ಗಾಳಿ ಮಳೆ ಆಗುತ್ತಿರುವ ಕಾರಣ ವಿದ್ಯುತ್ ಮಾರ್ಗಗಳ ತಂತಿಗಳಲ್ಲಿ ದೋಷಗಳು ಕಾಣಿಸಿಕೊಂಡು ಗ್ರಾಮೀಣ ಭಾಗಕ್ಕೆ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತಿದೆ. ಮಡಪ್ಪಾಡಿ, ಕಲ್ಮಕಾರು, ಬಾಳುಗೋಡು, ದೇವಚಳ್ಳ ಪರಿಸರದ ಜನತೆ ಮೂರು ದಿನಗಳಿಂದ ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ.
ಮೆಸ್ಕಾಂ ಸಿಬಂದಿ ವಿದ್ಯುತ್ ಮಾರ್ಗದ ದೋಷಗಳನ್ನು ಪತ್ತೆ ಹಚ್ಚಿ, ಅದರ ದುರಸ್ತಿ ಕಾರ್ಯಕ್ಕೆ ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಾಡಿನೊಳಗಿನ ಮಾರ್ಗದಲ್ಲಿ ವಿದ್ಯುತ್ ತಂತಿ ಹಾದು ಹೋದ ಕಾರಣ ಸಮಸ್ಯೆ ಜಟಿಲವಾಗಿದ್ದು, ಸಕಾಲದಲ್ಲಿ ಎಲ್ಲ ಕಡೆಗೂ ವಿದ್ಯುತ್ ಸರಬರಾಜು ಮಾಡಲು ಮೆಸ್ಕಾಂನಲ್ಲಿ ಸಿಬಂದಿ ಕೊರತೆಯಿದೆ. ಬಡಗನ್ನೂರು, ಕಬಕ ಪರಿಸರದಲ್ಲೂ ಮಂಗಳವಾರ ಸಂಜೆ ಮಳೆಯಾಗಿದೆ.
ಸಾಧಾರಣ ಮಳೆ
ಪುತ್ತೂರು: ತಾಲೂಕಿನ ನಗರ ಹಾಗೂ ಗ್ರಾಮಾಂತರದ ಕೆಲವು ಭಾಗಗಳಲ್ಲಿ ಮಂಗಳವಾರ ಸಂಜೆ 10 ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ. ಪುತ್ತೂರು ನಗರ, ಕಬಕ, ಸವಣೂರು, ಕುಂಬ್ರ, ಸಂಪ್ಯ ಸಹಿತ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯ ಜತೆಗೆ ಗುಡುಗು ಅಬ್ಬರಿಸಿದರೂ ಹೆಚ್ಚು ಸಮಯ ಮಳೆ ಬೀಳಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.