ಕೊಲೆಗೈದವನ ಸೆರೆ
Team Udayavani, Apr 4, 2018, 12:44 PM IST
ಬೆಂಗಳೂರು: ಸ್ನೇಹಿತನಿಗೆ ನೀಡಿದ್ದ 500 ರೂ. ಸಾಲದ ವಿಚಾರಕ್ಕೆ ಓಂ ಪ್ರಕಾಶ್ ಎಂಬಾತನನ್ನು ಕೊಲೆಗೈದಿದ್ದ ನ್ಯೂ
ಭೂಪಸಂದ್ರದ ನಿವಾಸಿ ಧನಂಜಯ್ (35)ನನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 27ರಂದು
ಬೆಳಗ್ಗೆ 11ಗಂಟೆ ಸುಮಾರಿಗೆ ಓಂ ಪ್ರಕಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿ ಧನಂಜಯ್ ಪರಾರಿಯಾಗಿದ್ದ. ಚಿಕಿತ್ಸೆ ಫಲಿಸದೆ ಓಂಪ್ರಕಾಶ್ ನಾಲ್ಕು ದಿನಗಳ ಬಳಿಕ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತರಕಾರಿ ವ್ಯಾಪಾರಿಯಾಗಿರುವ ಆರೋಪಿ ಧನಂಜಯ್, ಕಳೆದ ಒಂದು ತಿಂಗಳ ಹಿಂದೆ ತನ್ನ ಸ್ನೇಹಿತ ರಮೇಶ್‌ಗೆ 500 ರೂ. ಸಾಲ ನೀಡಿದ್ದು, ಆತ ವಾಪಾಸ್ ನೀಡಿರಲಿಲ್ಲ. ಮಾ. 27ರಂದು ಬೆಳಗ್ಗೆ ಜಗಳ ತೆಗೆದಿದ್ದ ಧನಂಜಯ್, ಮರದ ಪಟ್ಟಿಗೆಯಿಂದ ಓಂಪ್ರಕಾಶ್ ತಲೆಗೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Ceasefire: ಇಸ್ರೇಲ್, ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ?
Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.