ಪಂಚಿಂಗ್‌ ಕಲಿತ್ರೆ ಮಿಂಚಿಂಗ್‌

Team Udayavani, Apr 4, 2018, 3:38 PM IST

punching.jpg

“ಏನೇ ಬರ್ತಾ ಬರ್ತಾ ದಪ್ಪ ಆಗ್ತಾ ಇದೀಯ’ ಅಂತ ಯಾರಾದರೂ ಹೇಳಿಬಿಟ್ಟರೆ ಮುಗೀತು. ಬೆಳಗ್ಗೆದ್ದು ಜಾಗಿಂಗ್‌, ಸಂಜೆ ಜಿಮ್‌, ಡಯಟಿಂಗ್‌ ಅಂತೆಲ್ಲಾ ದೇಹದಂಡನೆಗೆ ಇಳಿದುಬಿಡುತ್ತೇವಲ್ಲ, ಅಂಥವರಿಗೆಲ್ಲ ಬಾಕ್ಸಿಂಗ್‌ ಕಲೆ ಹೇಳಿಮಾಡಿಸಿದ್ದು…

ಬಾಕ್ಸಿಂಗ್‌ ರಿಂಗ್‌ನ ಮಧ್ಯೆ ನಿಂತು, ಮೇರಿ ಕೊಂ ರೀತಿ ಪಂಚ್‌ ಇಡುವುದು ಬಹುತೇಕ ಹೆಣ್ಮಕ್ಕಳ ಆಸೆ. ಗಟ್ಟಿಗತ್ತಿ, ಧೈರ್ಯವಂತೆ, ಗಂಡುಬೀರಿ, ಸಾಹಸಿ… ಅಂತೆಲ್ಲ ಕರೆಸಿಕೊಳ್ಳುವುದು ಒಂದು ಟ್ರೆಂಡ್‌ ಕೂಡ ಹೌದು. ಈ ಟ್ರೆಂಡ್‌ನ‌ ಅನುಕರಣೆಯಲ್ಲಿ ಕರಾಟೆ ಮತ್ತು ಬಾಕ್ಸಿಂಗ್‌ನ ಮೇಲೆ ಅಭಿಮಾನಗಳು ಜಾಸ್ತಿ ಆಗಿವೆ. ಕಾರಣ, ಇವೆರಡೂ ಆತ್ಮರಕ್ಷಣೆಗೂ ನೆರವಾಗುತ್ತವೆ ಎಂಬ ಕಾರಣಕ್ಕೆ. ಅದರಲ್ಲೂ ಬಾಕ್ಸಿಂಗ್‌ ಎನ್ನುವುದು, ಆತ್ಮರಕ್ಷಣೆಯಲ್ಲದೇ, ಮಹಿಳೆಯನ್ನು ಸ್ಲಿಮ್‌ ಕೂಡ ಆಗಿಸುತ್ತದಂತೆ.

   “ಏನೇ ಬರ್ತಾ ಬರ್ತಾ ದಪ್ಪ ಆಗ್ತಾ ಇದೀಯ’ ಅಂತ ಯಾರಾದರೂ ಹೇಳಿಬಿಟ್ಟರೆ ಮುಗೀತು. ಬೆಳಗ್ಗೆದ್ದು ಜಾಗಿಂಗ್‌, ಸಂಜೆ ಜಿಮ್‌, ಡಯಟಿಂಗ್‌ ಅಂತೆಲ್ಲಾ ದೇಹದಂಡನೆಗೆ ಇಳಿದುಬಿಡುತ್ತೇವಲ್ಲ, ಅಂಥವರಿಗೆಲ್ಲ ಬಾಕ್ಸಿಂಗ್‌ ಕಲೆ ಹೇಳಿಮಾಡಿಸಿದ್ದು. ಪಂಚಿಂಗ್‌ ಬ್ಯಾಗೊಂದನ್ನು ಮನೆಯಲ್ಲಿ ನೇತು ಹಾಕಿ, ಅದಕ್ಕೆ ಡಿಶುಂ ಡಿಶುಂ ಗುದ್ದುತ್ತಿದ್ದರೆ, ಶರೀರದಲ್ಲಿ ಕ್ಯಾಲೊರಿ ಕರಗತೊಡಗುತ್ತದೆ. ನೋಡ್ತಾ, ನೋಡ್ತಾ, ಕೆಲವೇ ದಿನಗಳಲ್ಲಿ ಸ್ಲಿಮ್‌ ಆಗುತ್ತೇವೆ. ಹಾಗಾದ್ರೆ, ಬಾಕ್ಸಿಂಗ್‌ನಿಂದ ಮಹಿಳೆಯ ಆರೋಗ್ಯಕ್ಕೆ ಏನೇನು ಲಾಭಗಳಿವೆ?

– ಒಂದೇ ತೀವ್ರತೆಯಲ್ಲಿ ಪಂಚಿಂಗ್‌ ಬ್ಯಾಗ್‌ ಅನ್ನು ಪಂಚ್‌ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಂದೇ ತೀವ್ರತೆಯಲ್ಲಿ ಎರಡರಿಂದ ಐದು ನಿಮಿಷದವರೆಗೆ ಪಂಚ್‌ ಮಾಡಬಹುದು. 

– ಬಾಕ್ಸಿಂಗ್‌ನಿಂದ ಸ್ನಾಯುಗಳು ಸದೃಢವಾಗುವುದಲ್ಲದೆ, ದೈಹಿಕ ಕ್ಷಮತೆಯೂ ಹೆಚ್ಚುತ್ತದೆ. ಪಂಚ್‌ ಮಾಡುವಾಗ ಕಾಲಿನ ಸ್ನಾಯುಗಳು ದೇಹದ ಮೇಲ್ಭಾಗಕ್ಕೆ ಸಪೋರ್ಟ್‌ ನೀಡುತ್ತಿರುತ್ತವೆ. ಹಾಗಾಗಿ ಪಂಚಿಂಗ್‌ನಿಂದ ಕಾಲಿನ ಸ್ನಾಯುಗಳು ಶಕ್ತಿ ಪಡೆದುಕೊಳ್ಳುತ್ತವೆ.

– ಪಂಚ್‌ ಮಾಡುವಾಗ, ದೇಹದ ತೂಕ ಒಂದು ಕಾಲಿನಿಂದ ಇನ್ನೊಂದು ಕಾಲಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದರಿಂದ ದೇಹದ ಸ್ಥಿರತೆ ಹೆಚ್ಚುವುದಲ್ಲದೆ ಸದೃಢ ಶರೀರ ನಿಮ್ಮದಾಗುತ್ತದೆ.

– ಬಾಕ್ಸಿಂಗ್‌ ಮಾಡುವುದರಿಂದ ಕೊಬ್ಬಿನಾಂಶ ದೇಹದ ಒಂದೇ ಭಾಗದಲ್ಲಿ ಶೇಖರಣೆಯಾಗುವುದಿಲ್ಲ. ಅಧಿಕ ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿದು, ಒಳ್ಳೆಯ ಆಕಾರ ಸಿಗುತ್ತದೆ.

– ಬಾಕ್ಸಿಂಗ್‌ ಕೇವಲ ದೇಹದ ಆರೋಗ್ಯ ಕಾಪಾಡುವ ವ್ಯಾಯಾಮವಷ್ಟೇ ಅಲ್ಲ, ಅದನ್ನು ಆತ್ಮರಕ್ಷಣೆಯ ತಂತ್ರವನ್ನಾಗಿಯೂ ಬಳಸಬಹುದು.

– ಇನ್ನೊಂದು ಅಚ್ಚರಿಯ ವಿಷಯವೆಂದರೆ, ಪಂಚಿಂಗ್‌ ಅಥವಾ ಬಾಕ್ಸಿಂಗ್‌ ಮಾನಸಿಕ ಆರೋಗ್ಯಕ್ಕೂ ಬಹಳ ಒಳ್ಳೆಯದು. ಒತ್ತಡ, ಖನ್ನತೆಯನ್ನು ನಿವಾರಿಸಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಈ ವ್ಯಾಯಾಮ ಸಹಕಾರಿ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.