ವಿದ್ಯಾರ್ಥಿ ಸ್ನೇಹಿ ‘ಬೈಜುಸ್’
Team Udayavani, Apr 4, 2018, 5:19 PM IST
ದೇಶದ ಪ್ರತಿಷ್ಠಿತ ಶಿಕ್ಷಣ ಸ್ನೇಹಿ ಆ್ಯಪ್ಸ್ ಗಳಲ್ಲಿ ಬೈಜುಸ್ ಕೂಡ ಒಂದು. ಇದು ಬೆಂಗಳೂರು ಮೂಲದ ಥಿಂಕ್ ಆ್ಯಂಡ್ ಲರ್ನ್ ಪ್ರೈವೆಟ್ ಲಿಮಿಟೆಡ್‌ನ ಪೋಷಕ ಸಂಸ್ಥೆ. 2015ರ ಆಗಸ್ಟ್‌ನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿತು.
ಬೈಜುಸ್ 4ರಿಂದ ದ್ವಿತೀಯ ಪಿಯುಸಿವರೆಗಿನ ಶಿಕ್ಷಣದ ಪ್ರತಿಯೊಂದು ವಿಷಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ದೇಶದ ಉನ್ನತ ಐಎಎಸ್ (ಯುಪಿಎಸ್‌ಸಿ), ಅಂತಾರಾಷ್ಟ್ರೀಯ ಪರೀಕ್ಷೆಗಳಾದ ಜಿಆರ್‌ಇ ಮತ್ತು ಜಿಮೆಟ್ ಪರಿಕ್ಷೆಗಳಿಗೆ ಬೇಕಾದ ಉಪಯುಕ್ತ ಮಾಹಿತಿಗಳು ಹಾಗೂ ಸೇವೆಗಳನ್ನು ಒದಗಿಸುತ್ತದೆ. ಇದರೊಂದಿಗೆ ಐಐಟಿ, ಜೆಇಇ, ಎನ್‌ಇಇಟ್ (ನೀಟ್), ಸಿಎಟಿ (ಕ್ಯಾಟ್) ಪರೀಕ್ಷೆ ತಯಾರಿಗಳ ಮಾಹಿತಿಯ ಹೂರಣ ಇದರಲ್ಲಿದೆ.
ಪ್ರಚಲಿತ ವಿದ್ಯಮಾನಗಳ ವೀಡಿಯೋ ಗ್ಯಾಲರಿಗಳೂ ಇದ್ದು, ಎಲ್ಲ ಅಂಶಗಳು ಒಂದೇ ಸೂರಿನಡಿ ದೊರಕುವಂತೆ ಮಾಡಿವೆ. ತಿಂಗಳು ಮತ್ತು ವಾರಗಳ ಲೇಟೆಸ್ಟ್ ಅಪ್‌ಡೇಟ್ಸ್ ಮತ್ತು ಆ ಕುರಿತ ಆಳವಾದ ಅಧ್ಯಯನದ ಸಾರವನ್ನು ಒದಗಿಸುತ್ತದೆ. ಮುಖ್ಯವಾಗಿ ಬೈಜುಸ್ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದು, ಆ್ಯನಿಮೇಶನ್ ಮೂಲಕ ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯಾಚರಿಸುತ್ತಿದೆ.
ರೆಗ್ಯುಲರ್ ಕ್ಲಾಸ್ ಕೋಚಿಂಗ್‌ಗಳು ಆನ್‌ಲೈನ್ ಮತ್ತು ಆಫ್ಲೈನ್‌ನಲ್ಲಿ ಲಭ್ಯವಿದ್ದು, ವಿಷಯಕ್ಕೆ ಅನುಗುಣವಾಗಿ ಹಣ ಪಾವತಿ ಮಾಡಬೇಕಾಗುತ್ತದೆ. ಶಿಕ್ಷಕರೊಂದಿಗೆ ಸಂಭಾಷಣೆ ಮುಕ್ತವಾಗಿರುವ ಈ ಆ್ಯಪ್ ಅನ್ನು 8 ಮಿಲಿಯನ್ ಮಂದಿ ಬಳಸುತ್ತಿದ್ದಾರೆ. 4 ಲಕ್ಷ ಮಂದಿ ಚಂದಾದರರನ್ನು ಹೊಂದಿದೆ. ಬೈಜುಸ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, 14 ಎಂಬಿ ಗಾತ್ರವನ್ನು ಹೊಂದಿದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.