12 ಹಾಲಿಗಳಿಗೆ ಬಿಜೆಪಿ ಟಿಕೆಟ್ ಪಕ್ಕಾ
Team Udayavani, Apr 5, 2018, 11:26 AM IST
ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ನಗರದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭವಾಗಿದೆ. ಈ ಸಂಬಂಧ ಬುಧವಾರ ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಸಭೆ ನಡೆದಿದ್ದು, ನಗರ ವ್ಯಾಪ್ತಿಯ 12 ಕ್ಷೇತ್ರಗಳ ಆಕಾಂಕ್ಷಿಗಳು ಹಾಗೂ ಮುಖಂಡರ
ಅಭಿಪ್ರಾಯ ಸಂಗ್ರಹಿಸಲಾಯಿತು. ಉಳಿದ 14 ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹ ಗುರುವಾರ ನಡೆಯಲಿದೆ.
ಮೂಲಗಳ ಪ್ರಕಾರ, ಬೆಂಗಳೂರು ನಗರದ 11 ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದ್ದು, ಕಾಂಗ್ರೆಸ್ ಶಾಸಕರು ಇರುವ ಕೆ.ಆರ್.ಪುರಕ್ಕೆ ನಂದೀಶ್ ರೆಡ್ಡಿ/ ಪೂರ್ಣಿಮಾ, ಯಶವಂತಪುರಕ್ಕೆ ರುದ್ರೇಶ್/ಅಶ್ವಥ್‌ನಾರಾಯಣ ಹೆಸರು ಪ್ರಸ್ತಾಪವಾಗಿದೆ. ಬಸವನಗುಡಿಯಲ್ಲಿ ರವಿಸುಬ್ರಹ್ಮಣ್ಯ ಜತೆಗೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರ ಹೆಸರು ಪ್ರಸ್ತಾಪವಾಯಿತು ಎಂದು ತಿಳಿದು ಬಂದಿದೆ. ಯಶವಂತಪುರದಲ್ಲಿ ಕಾಂಗ್ರೆಸ್ ಮಣಿಸಲು ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಗೆಲುವು ಸಾಧ್ಯ ಎಂದು ಅಲ್ಲಿನ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.
ಅದೇ ರೀತಿ ಬಳ್ಳಾರಿ ನಗರಕ್ಕೆ ಸೋಮಶೇಖರೆಡ್ಡಿ, ಗ್ರಾಮಾಂತರ ಕ್ಷೇತ್ರಕ್ಕೆ ಶ್ರೀರಾಮುಲು, ಕಂಪ್ಲಿ ಕ್ಷೇತ್ರಕ್ಕೆ ಸುರೇಶ್‌ಬಾಬು, ವಿಜಯನಗರಕ್ಕೆ ಗವಿಯಪ್ಪ ಹೆಸರು ಅಂತಿಮಗೊಳಿಸಲಾಗಿದೆ. ಶ್ರೀರಾಮುಲು ಹೆಸರು ಸಂಡೂರು- ಕೂಡ್ಲಿಗಿ ಕ್ಷೇತ್ರಕ್ಕೂ ಪರಿಗಣಿಸಬಹುದು ಎಂದು ಹೇಳಲಾಗಿದೆ. ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಸೇರಿರುವ ನಾಗೇಂದ್ರ ಸೋಲಿಸಲು ಶ್ರೀರಾಮುಲು ಅವರನ್ನು
ಕಣಕ್ಕಿಳಿಸಬೇಕು ಎಂದು ಕೆಲವರು ಪಟ್ಟು ಹಿಡಿದರು. ಜತೆಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಶ್ರೀರಾಮುಲು ಸಹೋದರಿ ಶಾಂತಾ ಹಾಗೂ ಅವರ ಪತಿ ಫಕೀರಪ್ಪ ಅವರ ಹೆಸರು ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ.
ಬೀದರ್ ಜಿಲ್ಲೆಯ ಮುಖಂಡರ ಸಭೆ ಸಂದರ್ಭ ದಲ್ಲಿ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ಕೊಡ ಬಾರದು ಎಂದು ವಿರೋಧ ವ್ಯಕ್ತಪಡಿಸಿದರು. ಆದರೆ ಯಡಿಯೂರಪ್ಪ ಅವರು ನಮ್ಮ ಗುರಿ ತಲುಪಲು ಸಂಖ್ಯೆಬೇಕು. ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿಯೇ ತೀರ್ಮಾನ
ಕೈಗೊಳ್ಳಲಾಗಿದೆ . ಖೂಬಾಗೆ ಟಿಕೆಟ್ ಖಚಿತವಾಗಿದೆ, ಎಲ್ಲರೂ ಅವರ ಜತೆ ಕೆಲಸ ಮಾಡಿ ಎಂದರು. ಈ ಸಂದರ್ಭದಲ್ಲಿ ಖೂಬಾಗೆ ಟಿಕೆಟ್ ನೀಡಿದರೆ ಬಂಡಾಯವಾಗಿ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಆಕಾಂಕ್ಷಿಗಳು ಎಚ್ಚರಿಕೆ ನೀಡಿದರು. ಇದಕ್ಕೆ ವರಿಷ್ಠರು, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿ ಸುಮ್ಮನಾದರು ಎಂದು ತಿಳಿದು ಬಂದಿದೆ.
ಅದೇ ರೀತಿ ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲೂ ಕೆಲವು ಮುಖಂಡರು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರ ಬಗ್ಗೆ ಅಸಮಾಧಾನ ತೋಡಿಕೊಂಡರು. ಆದರೆ, ಪಕ್ಷದ ಗೆಲುವಿಗಾಗಿ ಅಗತ್ಯ ಎಂದು ನಾಯಕರು ಸಮರ್ಥನೆ ಕೊಟ್ಟರು ಎನ್ನಲಾಗಿದೆ.
ರೆಡ್ಡಿ ಪರ ಬ್ಯಾಟಿಂಗ್: ಬಳ್ಳಾರಿ ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಜನಾರ್ಧನರೆಡ್ಡಿ ಪರ ಬ್ಯಾಟಿಂಗ್ ನಡೆಸಿದ ಅಲ್ಲಿನ ನಾಯಕರು, ಜನಾರ್ಧನರೆಡ್ಡಿ ಪಕ್ಷ ಸಂಘಟಿಸಿ ದುಡಿದಿದ್ದಾರೆ. ಈಗ ಅವರಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದರೆ ಹೇಗೆ
ಎಂದು ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್, ಸಹ ಉಸ್ತುವಾರಿ ಪುರಂದೇಶ್ವರಿ ಅವರಿಗೆ ತೆಲುಗು ಅರ್ಥವಾಗುತ್ತದೆ ಎಂಬ ಕಾರಣಕ್ಕೆ ತೆಲುಗಿನಲ್ಲೇ ಅಲ್ಲಿನ ನಾಯಕರು ಮಾತನಾಡಿದರು ಎಂದು ಹೇಳಲಾಗಿದೆ. ನಾಯಕರು ಮಾತನಾಡುವುದು ಅರ್ಥವಾದರೂ ಪುರಂದೇಶ್ವರಿ ಮೌನವಾಗಿದ್ದರು. ಅಮಿತ್ ಶಾ ಹೇಳಿಕೆ ಬಗ್ಗೆ ನಾವು ಮಾತನಾಡುವುದು ಬೇಡ. ಜನಾರ್ಧನರೆಡ್ಡಿ ವಿಚಾರ
ದಲ್ಲಿ ಹೈಕಮಾಂಡ್ ಶ್ರೀರಾಮುಲು ಜತೆ ಮಾತನಾಡಲಿದೆ ಎಂದು ಯಡಿಯೂರಪ್ಪ ಸಮಾಧಾನಪಡಿಸಿದರು ಎಂದು ತಿಳಿದು ಬಂದಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.