ಮುಳ್ಳುಹಂದಿ ತನ್ನ ಮೇಲೆ ತಾನೇ ಉಗಿದುಕೊಳ್ಳುವುದೇಕೆ?
Team Udayavani, Apr 5, 2018, 11:28 AM IST
“ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು’ ಎಂದು ಹಿರಿಯರು ಹೇಳಿರುವರು. ಬಹುಶಃ ಇದೇ ಹೇಳಿಕೆಯಿಂದ ಪ್ರೇರಣೆಗೊಂಡ ಮುಳ್ಳುಹಂದಿ ಇನ್ನೊಬ್ಬರಿಂದ ಉಗಿಸಿಕೊಳ್ಳುವುದಕ್ಕಿಂತ ಆ ಕೆಲಸವನ್ನು ತಾನೇ ಮಾಡಿಕೊಳ್ಳುವುದು ಉತ್ತಮ ಎಂದು ಭಾವಿಸಿತೋ ಏನೋ! ಇದೇ ಸರಿಯುತ್ತರ ಎಂದು ತಿಳಿಯಬೇಡಿ.
ಮುಳ್ಳುಹಂದಿಗೆ ಅಷ್ಟೊಂದು ಸೈದ್ಧಾಂತಿಕ ಮಟ್ಟದ ಜ್ಞಾನ ಇದ್ದಿರಬಹುದಾದ ಸಾಧ್ಯತೆ ಕಮ್ಮಿಯಲ್ಲ, ಇಲ್ಲವೇ ಇಲ್ಲ! ಮುಳ್ಳುಹಂದಿಗಳು ತಮ್ಮ ದೇಹದಲ್ಲಿನ ದುರ್ವಾಸನೆಯನ್ನು ತೊಡೆದುಹಾಕಲು ತಮ್ಮನ್ನು ತಾವೇ ಉಗಿದುಕೊಳ್ಳುತ್ತವೆ. ಈ ಉತ್ತರ ಹಿಡಿಸದಿದ್ದ ಪಕ್ಷದಲ್ಲಿ ಅಂಥ ಮಡಿವಂತ ಮುಳ್ಳುಹಂದಿಗಳು ಈ ರೀತಿಯಾಗಿ ಓದಿಕೊಳ್ಳಬೇಕು- ಕೆಮಿಕಲ್ ಡಿಯೋಡರೆಂಟ್‌ಗಳನ್ನು ಬಳಸಲಿಚ್ಛಿಸದ ಮುಳ್ಳುಹಂದಿಗಳು ತಮ್ಮ ಎಂಜಲನ್ನು ತಮ್ಮ ಮೇಲೆಯೇ ಪ್ರೇಕ್ಷಿಸಿಕೊಳ್ಳುತ್ತವೆ. ಅಸಲಿಗೆ ಶತ್ರುಗಳು ತಮ್ಮ ಬಳಿ ಸುಳಿಯದಿರಲೆಂದು ಮುಳ್ಳುಹಂದಿಗಳು ಈ ಉಪಾಯ ಹೂಡುವುದು. ಹೀಗೆ ಮಾಡಿದರೆ ಶತ್ರುಗಳು ಹೋಗಲಿ, ಯಾವ ಮಿತ್ರ ತಾನೇ ಬಳಿಗೆ ಬಂದಾನು ಹೇಳಿ? ಶತ್ರುವನ್ನು ದೂರವಿಡಲು ಇದುವೇ ಸರಿಯಾದ ಮಾರ್ಗವಾಗಿದ್ದಿದ್ದರೆ ದೇಶ, ದೇಶಗಳ ನಡುವೆ ಗನ್ನು, ಬಾಂಬುಗಳ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ಈ “ಸ್ವಯಂ ಎಂಜಲು ಪ್ರೋಕ್ಷನ’ ಮಾತ್ರದಿಂದ ಸಾವು ನೋವಿಲ್ಲದೆ ಮಹಾಯುದ್ಧಗಳು ಕೊನೆಗೊಳ್ಳುತ್ತಿದ್ದವು ಎನ್ನಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.