ನಿಯಮ ಉಲ್ಲಂಘನೆಯ ಸಂಚಾರಕ್ಕೆ ಬೇಕು ಕಡಿವಾಣ


Team Udayavani, Apr 5, 2018, 12:36 PM IST

5-April-9.jpg

ನಗರ: ಪುತ್ತೂರು ಪೇಟೆಯ ಮುಖ್ಯರಸ್ತೆಯಲ್ಲಿರುವ ಎರಡು ಸೇತುವೆಗಳಲ್ಲಿ ಡಿವೈಡರ್‌ ನಿಯಮ ಮೀರಿ ವಾಹನಗಳು ಸಂಚರಿಸುತ್ತಿದ್ದು, ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳಬೇಕಾದ ಆವಶ್ಯಕತೆ ಇದೆ.

ಪುತ್ತೂರು ಪೇಟೆ ಹಾಗೂ ಮುಖ್ಯರಸ್ತೆ ವಾಹನಗಳ ಸಂಚಾರ ದಟ್ಟಣೆಯಿಂದ ನಲುಗುತ್ತಿದೆ. ಇದರ ಜತೆಗೆ ವಾಹನ ಸವಾರರ ನಿಯಮ ಮೀರಿದ ನಿರ್ಭೀತ ಸಂಚಾರ ಮತ್ತಷ್ಟು ಅಪಾಯಗಳಿಗೆ ಕಾರಣವಾಗುತ್ತಿದೆ. ಬೊಳುವಾರು ಹಾಗೂ ಕಲ್ಲಾರೆಯಲ್ಲಿ ನಿಯಮ ಉಲ್ಲಂಘನೆಯ ಕಾರಣದಿಂದ ಎರಡು ಕಡೆ ಅಪಘಾತದ ಸ್ಥಳಗಳಾಗಿ ಗುರುತಿಸಿಕೊಂಡಿವೆ.

ಸಮಸ್ಯೆ ಏನು?
ಎರಡು ಹಳೆಯ ಸೇತುವೆಗಳ ಮೇಲೆ ಹಾದುಹೋಗುವ ಮುಖ್ಯರಸ್ತೆಯಲ್ಲಿ ಜಾಗವನ್ನು ವಿಸ್ತಾರಗೊಳಿಸಿ ಡಿವೈಡರ್‌ ಅಳವಡಿಸಲಾಗಿದೆ. ಡಿವೈಡರ್‌ನ ಎಡ ಮತ್ತು ಬಲದಲ್ಲಿ ಏಕಮುಖ ಸಂಚಾರ ನಿಯಮವನ್ನು ಎಲ್ಲ ವಾಹನ ಸವಾರರು ಪಾಲನೆ ಮಾಡುತ್ತಿಲ್ಲ. ಪೇಟೆಯಿಂದ ಹೋಗುವ ಮತ್ತು ಬರುವ ವಾಹನಗಳು ನಿಯಮ ಮೀರಿ ಒಂದೇ ಬದಿಯಲ್ಲಿ ಸಂಚರಿಸುವುದರಿಂದ ಅಪಾಯ ಸಂಭವಿಸುತ್ತಿದೆ.

ರಾತ್ರಿ ಅಪಾಯ
ರಾತ್ರಿ ವೇಳೆಯಂತೂ ಈ ಜಾಗಗಳಲ್ಲಿ ಸಂಚಾರ ಹೆಚ್ಚು ಅಪಾಯಕಾರಿಯಾಗಿದೆ. ಕಡಿಮೆ ಎತ್ತರದ ಡಿವೈಡರ್‌ನ್ನು ಅಳವಡಿಸಲಾಗಿರುವುದರಿಂದ ಮತ್ತು ತತ್‌ಕ್ಷಣಕ್ಕೆ ಈ ಡಿವೈಡರ್‌ ಕಾಣದಂತಿರುವುದರಿಂದ ಹೊಸದಾಗಿ ಈ ರಸ್ತೆಯಲ್ಲಿ ಸಾಗುವವರಿಗೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ.

ಕ್ರಮ ಏಕಿಲ್ಲ?
ನಗರದ ಮುಖ್ಯರಸ್ತೆಯಾದರೂ ಇಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವ ಕುರಿತು ಸಂಚಾರ ಪೊಲೀಸರೂ ಗಂಭೀರವಾಗಿ ಪರಿಗಣಿಸಿಲ್ಲ. ಕನಿಷ್ಠ ಕೆಲವು ದಿನಗಳ ಮಟ್ಟಿಗೆ ಈ ಎರಡು ಜಾಗಗಳಲ್ಲಿ ಸಿಬಂದಿಯನ್ನು ನೇಮಿಸಿ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಸವಾರರಲ್ಲಿ ಜಾಗೃತಿ ಮೂಡಿಸುವ ಕ್ರಮವನ್ನಾದರೂ ಕೈಗೊಂಡರೆ ಭವಿಷ್ಯದ ಅಪಾಯಗಳನ್ನು ತಪ್ಪಿಸಬಹುದು. ಜತೆಗೆ ರಸ್ತೆಯ ಡಿವೈಡರ್‌ನ್ನು ಎತ್ತರಕ್ಕೇರಿಸಿ ಬಣ್ಣ ಬಳಿಯುವ ಆವಶ್ಯಕತೆಯೂ ಇದೆ.

ಜಾಗೃತಿ ಮೂಡಿಸಲಿ
ರಸ್ತೆ ವಿಭಾಜಕವನ್ನು ಅಳವಡಿಸಿ ಸಮರ್ಪಕ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರೂ ಶೇ.30 ರಷ್ಟು ವಾಹನಗಳು ನಿಯಮ ಮೀರಿಯೇ ಸಂಚರಿಸುತ್ತಿವೆ. ಈ ಕಾರಣದಿಂದ ಇತರ ವಾಹನ ಸವಾರರಿಗೆ ಗೊಂದಲ ಉಂಟಾಗಿ ಅಪಘಾತಗಳು ನಡೆಯುತ್ತಿವೆ. ಈ ಕುರಿತು ಸಂಬಂಧಪಟ್ಟ ಸಂಚಾರ ಸುವ್ಯವಸ್ಥೆಯ ಪೊಲೀಸರು ಕ್ರಮ ಕೈಗೊಂಡು ಜಾಗೃತಿ ಮೂಡಿಸಬೇಕಾಗಿದೆ.
– ಶಂಕರನಾರಾಯಣ
ಸಾಮಾಜಿಕ ಕಾರ್ಯಕರ್ತರು, ಪುತ್ತೂರು

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.