ಮಿನರ್ವ ಮಿಲ್‌ನಲ್ಲಿ ಕೆಜಿಎಫ್ ತಂಡ
Team Udayavani, Apr 5, 2018, 1:36 PM IST
ಆರಂಭದಿಂದಲೂ ಯಶ್ ಅಭಿನಯದ “ಕೆಜಿಎಫ್’ ಸುದ್ದಿಯಾಗುತ್ತಲೇ ಬಂದಿದೆ. ಈಗಲೂ ಈ ಚಿತ್ರ ಇನ್ನೊಂದು ಸುದ್ದಿಯಲ್ಲಿದೆ. ಇಷ್ಟು ದಿನ “ಕೆಜಿಎಫ್’ ಸುತ್ತ ಮುತ್ತ ದೊಡ್ಡ ದ್ದೊಂದು ಸೆಟ್ ಹಾಕಿ, ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ, ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಅಷ್ಟೇ ಅಲ್ಲ, ಮಿನರ್ವ ಮಿಲ್‌ನಲ್ಲಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ ಮುಂದುವರೆಸಿದೆ. ಬಹುತೇಕ ಚಿತ್ರೀಕರಣ ಮುಗಿಸಿ, ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರುವ “ಕೆಜಿಎಫ್’, ಈಗ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಬೀಡು ಬಿಟ್ಟಿದೆ. ಅಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಸುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.
ಇಲ್ಲಿರುವ ಸೆಟ್‌ನ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸುಮಾರು 80 ರ ದಶಕದಲ್ಲಿದ್ದ ವಾತಾವರಣವನ್ನು ನೆನಪಿಸುತ್ತದೆ. ಮೂಲಗಳ ಪ್ರಕಾರ, ಇದು ಚಿತ್ರದ ಹೀರೋನನ್ನು ಪರಿಚಯಿಸುವ ಹಾಡಿಗೆ ನಿರ್ಮಿಸಿರುವ ಸೆಟ್ ಎನ್ನಲಾಗುತ್ತಿದ್ದು, ಅಲ್ಲಿಯೇ ಕೆಲ ಮಾತಿನ ಭಾಗವನ್ನೂ ಚಿತ್ರತಂಡ ಚಿತ್ರೀಕರಿಸಲಿದೆಯಂತೆ ತಂಡ. ಕಳೆದ ವರ್ಷ ಆರಂಭಗೊಂಡ “ಕೆಜಿಎಫ್’, ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವುದಂತೂ ಹೌದು. ಇದು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದರಿಂದ ಆ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ.
ಸದ್ಯಕ್ಕೆ ಯಶ್ ಅವರ ಗೆಟಪ್ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೊಂಬಾಳೆ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಯಶ್ ಅವರಿಗೆ ನಾಯಕಿಯಾಗಿ ಶ್ರೀನಿಧಿ ಇದ್ದಾರೆ. ಉಳಿದಂತೆ ಇಲ್ಲಿ ದೊಡ್ಡ ಕಲಾವಿದರ ಬಳಗವೇ ತುಂಬಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.