ಹವ್ಯಾಸ ಕಲಿಕೆಗೆ ಹೆಚ್ಚಿದೆ ಆಸಕ್ತಿ
Team Udayavani, Apr 5, 2018, 3:56 PM IST
ಕಲಿಕೆಯ ಟ್ರೆಂಡ್ ಇಂದು ಬದಲಾಗಿದೆ. ಹವ್ಯಾಸವನ್ನು ಬೆಳೆಸಿಕೊಳ್ಳಲು ಆಸಕ್ತಿಯೊಂದಿದ್ದರೆ ಗುರುವಿನ ನೆರವಿಲ್ಲದೆಯೂ ಕಲಿಯಬಹುದು ಎಂಬುದನ್ನು ಆಧುನಿಕ ತಂತ್ರಜ್ಞಾನಗಳು ತೋರಿಸಿಕೊಟ್ಟಿವೆ.
ತರಗತಿಗಳಿಗೆ ಹೋಗಿ ಚಿತ್ರಕಲೆ, ಕರಕುಶಲತೆ, ಟೈಲರಿಂಗ್ ಕಲಿಯಬೇಕಾದ ಅನಿವಾರ್ಯತೆ ಇಂದಿಲ್ಲ. ಅಂತರ್ಜಾಲದ ಮೂಲಕ ನಮಗೆ ಬೇಕಾದಲ್ಲಿ, ಬೇಕಾದ ರೀತಿಯಲ್ಲಿ ಕಲಿಯಬಹುದು. ಹೀಗಾಗಿ ಯುವ ಜನರು ಈಗ ತರಗತಿಗಳಿಗೆ ಹೋಗುವುದಕ್ಕಿಂತ ಹೆಚ್ಚಾಗಿ ಇಂಟರ್ ನೆಟ್, ಯೂಟ್ಯೂಬ್ ಗಳ ಮೊರೆ ಹೋಗುತ್ತಿದ್ದಾರೆ.
ಅವಕಾಶ ಹಲವು
ಫ್ಯಾನ್ಸಿ ಐಟಂ, ಆಲಂಕಾರಿಕ ವಸ್ತುಗಳು, ಇಂಟೀರಿಯರ್ ಡೆಕೋರೇಶನ್, ಎಂಬ್ರಾಯಿಡರಿ, ತಾಂತ್ರಿಕ ವಸ್ತುಗಳ ದುರಸ್ತಿ, ವೀಡಿಯೋ ಎಡಿಟಿಂಗ್, ಫೂಟೋಗ್ರಫಿ, ಕೃಷಿ, ಉದ್ಯಮದಲ್ಲಿ ಹೊಸ ತಂತ್ರಗಳ ಬಳಕೆ, ಬ್ಯುಟೀಷಿಯನ್, ಸಂಗೀತ, ನೃತ್ಯ ತರಬೇತಿ ಮೊದಲಾದವುಗಳನ್ನು ಯೂಟ್ಯೂಬ್ ಮೂಲಕ ಕಲಿಯಲು ಯುವ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ.
ಎಲ್ಲವೂ ಸಾಧ್ಯ
ಯಾವುದೇ ಹವ್ಯಾಸವನ್ನು ಕಲಿಕೆಯಬೇಕಿದ್ದರೆ ಯೂಟ್ಯೂಬ್ ಮೂಲಕ ಆ ವಿಚಾರಕ್ಕೆ ಭೇಟಿ ಕೊಟ್ಟು ಗಮನಿಸಿದರೆ ಸಾಕು. ಅದರ ಸಾಧಕ -ಬಾಧಕಗಳ ಜತೆಗೆ ಯಾವ ರೀತಿಯಲ್ಲಿ ಕಲಿಯಬಹುದು ಎಂಬ ಕುರಿತೂ ಮಾರ್ಗದರ್ಶನ, ಮಾಹಿತಿ ಲಭ್ಯವಿವೆ. ಹಲವು ಸಂದರ್ಭಗಳಲ್ಲಿ ಆ ಹವ್ಯಾಸಗಳ ಮೂಲಕ ಸಾಧನೆ ಮಾಡಿದವರ ಸಂಪರ್ಕವನ್ನೂ ಯೂಟ್ಯೂಬ್ ಮೂಲಕ ಸಾಧಿಸಲು ಸಾಧ್ಯವಾಗುತ್ತದೆ.
ಹಿಂದೆಲ್ಲ ಯಾವುದೇ ರೀತಿಯ ಕಲಿಕೆಗೆ ಟ್ರೈನಿಂಗ್ ಸೆಂಟರ್‌ಗಳನ್ನು ಹುಡುಕಾಡುವ ಅಥವಾ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿ ಮಾಡಿ ತರಬೇತಿ ಪಡೆಯುವ ಆವಶ್ಯಕತೆ ಇತ್ತು. ಆದರೆ ಇಂದು ಆಸಕ್ತಿಯೊಂದಿದ್ದರೆ ಸಾಕು.
ಆರ್ಥಿಕ ಮೂಲಕ್ಕಾಗಿ
ಕಲಿಕೆಯ ಜತೆ ಜತೆಗೆ ಉದ್ಯೋಗವನ್ನು ಮಾಡಬಯಸುವವರೂ ಈ ಮೂಲಕ ಆರ್ಥಿಕ ಮೂಲವನ್ನೂ
ಹುಡುಕಿಕೊಳ್ಳಬಹುದು. ಇಂತಹ ವಿಷಯಗಳಿಗೆ ಕುರಿತಂತೆ ಹೆಚ್ಚಿನ ಸರ್ಚ್ ಕೂಡ ಆಗುತ್ತಿದೆ ಎನ್ನುತ್ತಾರೆ ತಜ್ಞರು.
ಆಸಕ್ತಿ ಬೇಕು
ಯೂಟ್ಯೂಬ್ ಸಹಿತ ತಂತ್ರಜ್ಞಾನದ ಬಳಕೆ ಸದುಪಯೋಗಪಡಿಸಿಕೊಳ್ಳುವವರೂ ಹಲವರಿದ್ದಾರೆ. ಜ್ಞಾನದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಹವ್ಯಾಸಗಳ ಕಲಿಕೆಯ ಹಲವು ಸಂದರ್ಭಗಳಲ್ಲಿ ತರಬೇತಿಗೆ ತೆರಳಲು ಸಾಧ್ಯವಾಗದಿದ್ದಾಗ ಯೂಟ್ಯೂಬ್‌ನಲ್ಲಿ ಆಸಕ್ತಿಯಿಂದ ಗಮನಿಸಿದರೆ ಹಲವು ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.
– ನಿರಂಜನ್ ಪುತ್ತೂರು, ಕಂಪ್ಯೂಟರ್ ಶಿಕ್ಷಕ
ಹೊಸ ವಿನ್ಯಾಸ ಕಲಿಕೆಗೆ ನೆರವು
ಬ್ಯೂಟಿ ಕೇರ್‌ಗೆ ಸಂಬಂಧಿಸಿದ ಹೊಸ ವಿಚಾರಗಳನ್ನು ಯೂಟ್ಯೂಬ್‌ನಲ್ಲಿ ಹುಡುಕುತ್ತಲೇ ಇರುತ್ತೇನೆ. ಹಲವು ವಿನ್ಯಾಸಗಳಲ್ಲಿ ಮೆಹಂದಿ ಹಾಕುವುದನ್ನು ಯೂಟ್ಯೂಬ್ ನೋಡಿ ಕಲಿತುಕೊಂಡಿದ್ದೇನೆ. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇದು ನೆರವಾಗಿದೆ. ಉಳಿದಂತೆ ಟೈಲರಿಂಗ್ ತಿಳಿದಿರುವುದರಿಂದ ಹೊಸ ವಿನ್ಯಾಸಗಳನ್ನು ಕಲಿಯಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತೇನೆ.
– ನಾಗವೇಣಿ ಕುಂಬ್ರ, ಕಾಲೇಜು ವಿದ್ಯಾರ್ಥಿನಿ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.