ಸಲ್ಲು ಕೈದಿ ನಂ.106: ಬಾಲಿವುಡ್‌ಗೆ ಖಾನ್ ಜೈಲು ಪಾಲು ಶಾಕ್
Team Udayavani, Apr 6, 2018, 7:00 AM IST
ಮುಂಬೈ: ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಲ್ಮಾನ್ ಖಾನ್ ಅವರನ್ನು ಜೋಧಪುರ ಕಾರಾಗೃಹದ ಅತಿ ಭದ್ರತೆಯ ಬ್ಯಾರಕ್ ಸಂಖ್ಯೆ 2ರಲ್ಲಿ ಇರಿಸಲಾಗಿದೆ. ಅವರೀಗ ಕೈದಿ ನಂ.106 ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಧಾರ್ಮಿಕ ಗುರು ಅಸಾರಾಂ ಬಾಪು ಇರುವ ಬ್ಯಾರಕ್‌ನಲ್ಲೇ ಇರಿಸು ವುದಾಗಿ ಕಾರಾಗೃಹ ಮೂಲಗಳು ತಿಳಿಸಿವೆ. ಅಸಾರಾಂ ಇರುವ ಪಕ್ಕದ ಜೈಲು ಕೋಣೆಯಲ್ಲೇ ಸಲ್ಮಾನ್‌ನನ್ನು ಕೂರಿಸಲಾಗಿದೆ.
ಇದೇ ಜೈಲಿನಲ್ಲಿ, ಇತ್ತೀಚೆಗೆ, ಕೂಲಿ ಕಾರ್ಮಿಕನೊಬ್ಬನನ್ನು ಅಮಾನುಷವಾಗಿ ಕೊಂದು, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಶಂಭು ಲಾಲ್ ರೇಗರ್ ಹಾಗೂ ಭನ್ವಂತರಿ ದೇವಿ ಕೊಲೆ ಆರೋಪ ಹೊತ್ತಿರುವ ಮಾಲ್ಕನ್ ಸಿಂಗ್ ವೈಷ್ಣೋಯಿ ಅವರೂ ಇದ್ದಾರೆ. ಬಿಶ್ನೋಯ್ ಸಮುದಾಯದ ಪಾತಕಿ, ಲಾರೆನ್ಸ್ ಬಿಶ್ನೋಯ್, ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ. ಆತನೂ ಇದೇ ಜೈಲಿನಲ್ಲಿದ್ದಾನೆ. ಹಾಗಾಗಿ, ಜೈಲಿಗೆ ಹಾಗೂ ಸಲ್ಮಾನ್ ಖಾನ್ ಇರುವ ಬರಾಕ್‌ಗೆ ಭಾರೀ ಬಿಗಿಭದ್ರತೆ ಹಾಕಲಾಗಿದೆ.
ನೂರಾರು ಕೋಟಿ ಹೂಡಿದವರ ತ್ರಿಶಂಕು ಸ್ಥಿತಿ: ಜೈಲು ಪಾಲಾಗಿರುವ ಸಲ್ಮಾನ್ ಮೇಲೆ ಬಾಲಿವುಡ್‌ನಲ್ಲಿ ಏನಿಲ್ಲ ವೆಂದರೂ, 400ರಿಂದ 600 ಕೋಟಿ ರೂ. ಹೂಡಿಕೆಯಾಗಿದ್ದು, ಇದೀಗ ನ್ಯಾಯಾಲಯದ ತೀರ್ಪಿನಿಂದಾಗಿ ಅವರ ಮೇಲೆ ಹಣ ಹೂಡಿರುವ ನಿರ್ಮಾಪಕರೆಲ್ಲಾ ತಲೆಯ ಮೇಲೆ ಟವೆಲ್ ಹಾಕಿ ಕೂಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸಲ್ಮಾನ್, ದೊಡ್ಡ ಬ್ಯಾನರ್‌ಗಳ ಪ್ರಾಜೆಕ್ಟ್ಗಳಾದ ರೇಸ್ 3ನಲ್ಲಿ ಸದ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ, ಸದ್ಯದಲ್ಲೇ ಅವರ ಕಿಕ್ 2, ದಬಾಂಗ್ 3 ಹಾಗೂ ಭಾರತ್ ಚಿತ್ರಗಳು ಸೆಟ್ಟೇರಲಿವೆ. ಹಾಗಾಗಿ, ಈಗ ಸಲ್ಮಾನ್ ಖಾನ್ ಜೈಲು ಪಾಲಾದರೆ, ಈ ಚಿತ್ರಗಳು ನೆನೆಗುದಿಗೆ ಬೀಳಲಿವೆ ಎನ್ನುತ್ತಿದ್ದಾರೆ ಬಾಲಿವುಡ್ ಪಂಡಿತರು.
ರೇಸ್‌ಗೆ ಅತಿ ಹೆಚ್ಚು ತೊಂದರೆ!: ಸಲ್ಲು ಕೈಯ್ಯಲ್ಲಿ ಸದ್ಯಕ್ಕಿರುವ ಚಿತ್ರಗಳಲ್ಲಿ ರೇಸ್ 3 ಪ್ರಮುಖ ಚಿತ್ರ. ಸಲ್ಮಾನ್ ವಿರುದ್ಧದ ತೀರ್ಪಿನ ಬಿಸಿ ಮೊದಲು ತಟ್ಟುವುದು ಈ ಚಿತ್ರಕ್ಕೇ. ಏಕೆಂದರೆ, ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣ ಗೊಂಡಿದೆ. ಕೆಲವು ಭಾಗಗಳ ಚಿತ್ರೀಕರಣ ಬಾಕಿಯಿದೆ. ಚಿತ್ರದ ಬಿಡುಗಡೆ ಜೂನ್‌ನಲ್ಲಿ ಆಗಲಿದೆ ಎಂದು ನಿರ್ಧಾರವಾಗಿದೆ. ಹೀಗಿರುವಾಗ, ಇನ್ನುಳಿದ ಅಲ್ಪಭಾಗದ ಚಿತ್ರೀಕರಣ ಆಗದ ಹೊರತು ಚಿತ್ರ ಬಿಡುಗಡೆ ಸಾಧ್ಯವಿಲ್ಲ. ಈಗಾಗಲೇ ಚಿತ್ರದ ಮೇಲೆ 125- 150 ಕೋಟಿ ರೂ. ಬಂಡವಾಳ ಹೂಡಲಾಗಿರುವುದರಿಂದ ಸಲ್ಮಾನ್ ಸೂಕ್ತ ಸಮಯಕ್ಕೆ ಬಿಡುಗಡೆಯಾಗಿ (ಜಾಮೀನಿನ ಮೇಲಾದರೂ ಸರಿ) ಚಿತ್ರೀಕರಣದಲ್ಲಿ ಪಾಲ್ಗೊಳ್ಳದಿದ್ದರೆ ಚಿತ್ರದ ಬಿಡುಗಡೆ ನನೆಗುದಿಗೆ ಬೀಳುತ್ತದೆ ಎಂಬುದು ಬಾಲಿವುಡ್ ತಜ್ಞರ ಲೆಕ್ಕಾಚಾರ.
ಇವರು ಕೃಷ್ಣ ಮೃಗ ಆರಾಧಕರು
15ನೇ ಶತಮಾನದಲ್ಲಿ, ರಾಜಸ್ಥಾನದ ಧಾರ್ಮಿಕ ಗುರುಗಳಾಗಿದ್ದ ಗುರು ಜಂಬೇಶ್ವರ್ ಅವರ ಅನುಯಾಯಿಗಳೇ ಬಿಶ್ನೋಯ್ ಜಾತಿಯವರು. ಇವರು ವಿಷ್ಣುವಿನ ಆರಾಧಕರು. ಪ್ರಕೃತಿ ಆರಾಧಕರು. ಹಸಿರು ಮರಗಳನ್ನು ಕತ್ತರಿಸುವುದಿಲ್ಲ. ಪ್ರಾಣಿ ಹತ್ಯೆಗಳನ್ನು ಮಾಡುವುದಿಲ್ಲ. ಶುದ್ಧ ಸಸ್ಯಾಹಾರಿಗಳು. ಅಲ್ಲದೆ, ಇವರು ಕೃಷ್ಣ ಮೃಗಗಳನ್ನು ದೇವರ ಪ್ರತೀಕವೆಂದು ಆರಾಧಿಸುತ್ತಾರೆ. ಸನಾತನ ಧರ್ಮದಲ್ಲಿ, ಗೋವುಗಳಿಗೆ ಇರುವ ಮಹತ್ವ ಹಾಗೂ ಪೂಜ್ಯನೀಯ ಭಾವ, ಇಲ್ಲಿ ಕೃಷ್ಣ ಮೃಗಗಳಿಗಿದೆ. ಬಿಶ್ನೋಯ್ ಕುಲಸ್ಥರ ಹಲವಾರು ಮನೆಗಳಲ್ಲಿ ಇವುಗಳನ್ನು ಪೂಜ್ಯಭಾವದಿಂದ ಸಾಕುತ್ತಾರೆ.
ಯಾವಾಗ ಏನೇನಾಯ್ತು?
ಅಕ್ಟೋಬರ್ 2 ,1998
ತಾರೆಯರಾದ ಸಲ್ಮಾನ್‌ಖಾನ್, ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ಟಬು ಮತ್ತು ನೀಲಂ ರಾಜಸ್ಥಾನದ ಜೋಧ್‌ಪುರದಲ್ಲಿ 2 ಕೃಷ್ಣಮೃಗಗಳನ್ನು ಕೊಂದಿದ್ದಾರೆ ಎಂದು ದೂರು ದಾಖಲು
ಏಪ್ರಿಲ್ 10, 2006
ಸಲ್ಮಾನ್ ಖಾನ್ ದೋಷಿ ಎಂದು ಸಾಬೀತು. 5 ವರ್ಷ ಜೈಲು ಮತ್ತು ದಂಡ ವಿಧಿಸಿದ ವಿಚಾರಣಾ ನ್ಯಾಯಾಲಯ. ಒಂದು ವಾರದ ಜೈಲುವಾಸದ ಬಳಿಕ ಜಾಮೀನು ಮಂಜೂರು
ಆಗಸ್ಟ್ 31, 2006
ಶಿಕ್ಷೆ ಅಮಾನತುಗೊಳಿಸಿದ ರಾಜಸ್ಥಾನ ಹೈಕೋರ್ಟ್. ಅನುಮತಿ ಪಡೆಯದೇ ದೇಶ ಬಿಟ್ಟು ಹೋಗದಂತೆ ಆದೇಶ
ಜುಲೈ 25, 2016
ಎಲ್ಲ ಆರೋಪಗಳಿಂದಲೂ ಸಲ್ಮಾನ್‌ರನ್ನು ಖುಲಾಸೆಗೊಳಿಸಿ ರಾಜಸ್ಥಾನ ಹೈಕೋರ್ಟ್ ತೀರ್ಪು. ಕೃಷ್ಣಮೃಗಗಳು ಸಲ್ಲು ಗನ್‌ನಿಂದ ಹೊರಬಂದ ಗುಂ ಡುಗಳಿಂದಲೇ ಸತ್ತವು ಎಂಬುದನ್ನು ಪುರಾವೆಯಿಲ್ಲ ಎಂದ ನ್ಯಾಯಾಲಯ
ನವೆಂಬರ್ 11, 2016
ಖುಲಾಸೆ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನಟನಿಗೆ ನೋಟಿಸ್ ಜಾರಿ ಮಾಡಿದ ಸರ್ವೋಚ್ಚ ನ್ಯಾಯಾಲಯ
ಏಪ್ರಿಲ್ 5, 2018
ಸಲ್ಮಾನ್ ಖಾನ್ ದೋಷಿ ಎಂದು ಜೋಧ್‌ಪುರ ಕೋರ್ಟ್ ತೀರ್ಪು.
5 ವರ್ಷ ಜೈಲು ಶಿಕ್ಷೆ. ಇತರೆ ಆರೋಪಿಗಳು ಖುಲಾಸೆ.
ಸಲ್ಲುಗೆ ಸುತ್ತಿಕೊಂಡ ಕೇಸುಗಳು
20 ವರ್ಷಗಳ ಹಿಂದಿನ(1998) ಕೃಷ್ಣಮೃಗ ಬೇಟೆ ಪ್ರಕರಣ
ವನ್ಯಜೀವಿ(ರಕ್ಷಣೆ) ಕಾಯ್ದೆಯನ್ವಯ ದಾಖಲಾದ ಪ್ರಕರಣ
ಶಸ್ತ್ರಾಸ್ತ್ರ ಕಾಯ್ದೆ ಕೇಸ್. ಪರವಾನಗಿ ಇಲ್ಲದ ರೈಫಲ್ ಮತ್ತು ರಿವಾಲ್ವರ್ ಇಟ್ಟುಕೊಂಡ ಆರೋಪ
ಹಿಟ್ ಆ್ಯಂಡ್ ರನ್ ಕೇಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.