ಟೋಲ್ಗೇಟ್ನಲ್ಲಿ ನಿತ್ಯ ನರಕ ಯಾತನೆ
Team Udayavani, Apr 6, 2018, 10:51 AM IST
ತಲಪಾಡಿ: ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಿದ ಅಂಗವಾಗಿ ತಲಪಾಡಿಯಲ್ಲಿ ವಾಹನಗಳಿಂದ ಸುಂಕ ವಸೂಲಿ ಮಾಡಲು ನಿರ್ಮಿಸಿದ ಟೋಲ್ಗೇಟ್ನಿಂದಾಗಿ ವಾಹನ ಪ್ರಯಾಣಿಕರಿಗೆ ಪ್ರತಿ ದಿನ ನರಕಯಾತನೆ ಅನುಭವವಾಗುತ್ತಿದೆ. ಈ ಎರಡೂ ರಾಜ್ಯಗಳಿಗೆ ದಿನಾ ಸಾವಿರಾರು ವಾಹನಗಳು ಹಾದು ಹೋಗುವುದರಿಂದ ಟೋಲ್ಗೇಟ್ನಲ್ಲಿ ಸಾಕಷ್ಟು ಹೊತ್ತು ತಮ್ಮ ವಾಹನಗಳ ಸುಂಕ ಪಾವತಿಸಲು ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ.
ಸುಂಕ ವಸೂಲಿ ಮಾಡುವ ಮಂದಿ ಸುಂಕ ಪಾವತಿಸಿದ ರಶೀದಿ ನೀಡಲು ವಿಳಂಬವಾಗುವುದರಿಂದ ಹಿಂದಿನಿಂದ ಬಂದ ವಾಹನಗಳು ಸರದಿಯಲ್ಲಿ ನಿಂತು ತಮ್ಮ ಸರದಿಯಾಗಿ ಕೆಲವು ಹೊತ್ತು ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ ತುರ್ತು ಕಾರ್ಯಕ್ಕೆ ಹೋಗುವವರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ.
ತುರ್ತು ಕೆಲಸಕ್ಕೆ ಹೋಗುವವರು ಈ ಟೋಲ್ಗೇಟ್ನಲ್ಲಿ ಸಿಕ್ಕಿ ಹಾಕಿಕೊಳ್ಳುವುದರಿಂದ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ತಮ್ಮ ಕೆಲಸಕ್ಕೆ ಅಡ್ಡಿಯಾದ ಬಗ್ಗೆಯೂ ಪ್ರಯಾಣಿಕರು ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.