ಬೇಕಾಬಿಟ್ಟಿ ಕೊಳವೆಬಾವಿ: ಬೀಳಲಿ ಮೂಗುದಾರ


Team Udayavani, Apr 6, 2018, 11:20 AM IST

6-April-6.jpg

ಸುಳ್ಯ: ಬೇಸಗೆ ಕಾಲಿಟ್ಟ ಬೆನ್ನಲ್ಲೇ ಸುಳ್ಯ ತಾಲೂಕಿನಲ್ಲಿ ಕೊಳವೆಬಾವಿ ಕೊರೆಯುವ ಯಂತ್ರಗಳ ಸದ್ದು ಕೇಳಿ ಬರುತ್ತಿದೆ. ಪಕ್ಕದ ರಾಜ್ಯಗಳ ನೋಂದಣಿಯಿರುವ ಲಾರಿಗಳು ತಾಲೂಕಿನಲ್ಲಿ ಬೀಡುಬಿಟ್ಟಿವೆ. ಕಾನೂನನ್ನು ಉಲ್ಲಂ ಸಿ ಬೇಕಾಬಿಟ್ಟಿ ಭೂಮಿಗೆ ಕನ್ನ ಇಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ನಗರ ಮಾತ್ರವಲ್ಲ, ಕುಗ್ರಾಮದಲ್ಲೂ ನೀರಿಗೆ ಬಂಗಾರದ ಬೆಲೆ ಬಂದಿದೆ. ಅದ ರಲ್ಲೂ ಕೃಷಿ ಅವಲಂಬಿತ ಸುಳ್ಯದ ಜನತೆಗೆ ನೀರಿನ ಅವಶ್ಯ ಹೆಚ್ಚೇ ಇದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನದಿ, ಹಳ್ಳ, ಕೊಳ್ಳ, ಕೆರೆ, ಬಾವಿ, ತೋಡುಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಜಲಮೂಲ ಆಳಕ್ಕೆ ಹೋಗಿದೆ. ಒಂದೆರಡು ಬಾರಿ ಬಿದ್ದ ಮಳೆ ನೀರಿನ ಬವಣೆ ತೀರಿಸಿಲ್ಲ. ಹೀಗಾಗಿ ಕೊಳವೆ ಬಾವಿಯಿಂದ ನೀರು ಪಡೆಯುವುದು ಅನಿವಾರ್ಯ.

ನೀರಿನ ಅಗತ್ಯ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆಯುವುದು ಸರಿಯಲ್ಲ. ಇದಕ್ಕೂ ಮೂಗುದಾರ ಹಾಕಬೇಕಿದೆ. ಕೊಳವೆ ಬಾವಿ ಕೊರೆಯಲು ಜಿಲ್ಲಾ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಸರಕಾರದ ಸುತ್ತೋಲೆ ಪ್ರಕಾರ, ಸಾರ್ವಜನಿಕ ಕೊಳವೆ ಬಾವಿಗಳ 500 ಮೀ. ವ್ಯಾಪ್ತಿಯಲ್ಲಿ ಕೊಳವೆಬಾವಿ ಹೊಂದಲು ಸ್ಥಳೀಯಾಡಳಿತದ ನಿರಾಕ್ಷೇಪಣ ಪತ್ರದ ಅಗತ್ಯವಿದೆ.ಆದರೆ, ಕಾನೂನನ್ನು ಗಾಳಿಗೆ ತೂರಿ ಬೋರ್‌ವೆಲ್‌ ಕೊರೆಯಲಾಗುತ್ತಿದೆ.

ತಾಲೂಕಿನಲ್ಲಿರುವ ಕೊಳವೆ ಬಾವಿಗಳೆಷ್ಟು ಎಂಬ ಲೆಕ್ಕ ಸಿಗುತ್ತಿಲ್ಲ. ಹಿಂದಿನ ವರ್ಷ 885 ಕೊಳವೆ ಬಾವಿಗಳಿದ್ದವು. ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ ಕೇವಲ 188. ಉಳಿದ 697 ನಿರುಪಯುಕ್ತ ಆಗಿವೆ. ಆದರೆ, ಇದೂ ಅಂದಾಜು ಅಷ್ಟೇ. ಸ್ಪಷ್ಟ ಮಾಹಿತಿ ಇಲಾಖೆ ಬಳಿ ಇಲ್ಲ. ಈ ಬಾರಿ ಖಾಸಗಿ ಜಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಕೃಷಿಕರಷ್ಟೇ ಅಲ್ಲದೆ, 5-10 ಸೆಂಟ್ಸ್‌ ಜಾಗ ಇದ್ದವರೂ ಬೋರ್‌ ವೆಲ್‌ ಕೊರೆಸುತ್ತಿದ್ದಾರೆ. ಇವು ಇಲಾಖೆಯ ಮಾಹಿತಿ ಪಟ್ಟಿಯಲ್ಲಿಲ್ಲ.

ಕಳೆದ ಬೇಸಗೆಯಲ್ಲಿ ಅಂತರ್ಜಲ ಕುಸಿತ ಕಂಡು ಕುಡಿಯುವ ನೀರಿಗೂ ಕೊರತೆ ಎದುರಾಗಿತ್ತು. ಕೊಳವೆಬಾವಿ ಕೊರೆಸಲು ಜನ ಮುಂದಾಗಿದ್ದರೂ ಅವಕಾಶ ನಿರಾಕರಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಸರಕಾರ ಕೊಳವೆ ಬಾವಿ ವಿಚಾರದಲ್ಲಿ ಕಠಿನ ನಿಯಮ ಜಾರಿಗೆ ತಂದಿತ್ತು. ನಿಯಮ ಸಡಿಲಗೊಳಿಸಿದರೆ ಜಿಲ್ಲಾಡಳಿತವೇ ಹೊಣೆ ಎಂದಿತ್ತು. ಈ ನಡುವೆ ಅಲ್ಲಲ್ಲಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದನ್ನು ಅಧಿಕಾರಿಗಳು ತಡೆದಿದ್ದರು. ಈ ಬಾರಿಯೂ ಅಂಥದೇ ಕಠಿನ ನಿಯಮಗಳನ್ನು ಜಾರಿಗೆ ತರುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹೊಸದಾಗಿ ತಲೆ ಎತ್ತುವ ಬೃಹತ್‌ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಸಮರ್ಪಕವಾಗಿ ಜಾರಿಗೊಂಡಿಲ್ಲ. ಬಹುತೇಕ ಕಡೆಗಳಲ್ಲಿ ಮಳೆಗಾಲದಲ್ಲಿ ಮಳೆನೀರು ಚರಂಡಿಗಳಲ್ಲೇ ಹರಿಯುತ್ತದೆ. ಸರಕಾರಿ ಕಚೇರಿಗಳೂ ಮಳೆಕೊಯ್ಲು ಅಳವಡಿಸಿಕೊಂಡಿಲ್ಲ. ಬೋರ್‌ವೆಲ್‌ಗ‌ಳಿಗೆ ನೀರಿಂಗಿಸುವ ಯೋಜನೆಗಳನ್ನೂ ಗ್ರಾ.ಪಂ.ಗಳು ಅನುಷ್ಠಾನ ಮಾಡಿಲ್ಲ. ರೈತರೂ ಆಧುನಿಕ ಕೃಷಿ ಪದ್ಧತಿಗೆ ಮಾರು ಹೋಗಿದ್ದರಿಂದ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ರಸಗೊಬ್ಬರ ಬಳಕೆ ಹೆಚ್ಚುತ್ತಿದೆ. ಭೂಮಿಯ ಫ‌ಲವತ್ತತೆ ಮಟ್ಟ ಇಳಿಕೆಯಾಗುತ್ತಿದೆ. ಸುಮಾರು 200 ಅಡಿಗಳಷ್ಟು ಆಳಕ್ಕೆ ಇಳಿಯುತ್ತಿದ್ದ ಎರೆಹುಳುಗಳು ಭೂಮಿಯ ಫ‌ಲವತ್ತತೆ ಹಾಗೂ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಿದ್ದವು. ಅವೂ ರಾಸಾಯ ನಿಕ ಗೊಬ್ಬರಗಳಿಂದ ಸಾಯುತ್ತಿವೆ.

ತಾಲೂಕಿನಲ್ಲಿ 100ಕ್ಕೂ ಅಧಿಕ ವೆಂಟೆಡ್‌ ಡ್ಯಾಮ್‌ಗಳಿದ್ದರೂ, ಬಹುತೇಕ ಕಡೆಗಳಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿಲ್ಲ. ಕೆಲ ಡ್ಯಾಮ್‌ ಗಳು ಮಾತ್ರ ನಿರ್ವಹಣೆ ಆಗುತ್ತಿವೆ. ಡ್ಯಾಮ್‌ ಆರಂಭದ ವರ್ಷ ಕೃಷಿ ಇಲಾಖೆ ಹಲಗೆ ನೀಡುತ್ತದೆ. ಆದರೆ ರೈತರು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಒಂದೇ ವರ್ಷದಲ್ಲಿ ನೀರು ಹರಿದು ಹೋಗುತ್ತದೆ. ಮತ್ತೆ ಡ್ಯಾಮ್‌ಗೆ ಹಲಗೆ ಹಾಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ಬೇಸಗೆಯಲ್ಲಿ ನೀರಿನ ಅಭಾವ ಉಂಟಾಗುತ್ತಿದೆ.

ಕಠಿನ ನಿಯಮ ರೂಪಿಸಬೇಕು
ಒಂದು ವಾರದಲ್ಲಿ ನಮ್ಮ ಮನೆಯ ಸುತ್ತ ಹತ್ತಾರು ಬೋರ್‌ವೆಲ್‌ ಕೊರೆದಿದ್ದಾರೆ. ಇದಕ್ಕೆ ಮಿತಿಯೇ ಇಲ್ಲದಂತಾಗಿದೆ. ಮೊದಲೆಲ್ಲ 10 ಅಡಿಯಷ್ಟು ಕೊರೆದರೆ ನೀರು ಸಿಗುತ್ತಿತ್ತು. ಈಗ 300 ಅಡಿ ತನಕ ಕೊರೆಯಬೇಕು. ಸೆಂಟ್ಸ್‌ ಲೆಕ್ಕದಲ್ಲಿ ಭೂಮಿ ಇದ್ದವರೂ ಬೋರ್‌ ಕೊರೆವವರೆ. ಇದಕ್ಕೆ ಮಾನದಂಡವೇ ಇಲ್ಲ, ಸ್ಪಷ್ಟ ನಿಯಮ ರೂಪಿಸುವುದು ಅವಶ್ಯ. ಇಲ್ಲವಾದಲ್ಲಿ ಇದು ಭವಿಷ್ಯಕ್ಕೆ ಮಾರಕ. ಬಯಲು ಸೀಮೆಯ ಗತಿಯೇ ನಮಗೂ ಬರಬಹುದು.
– ಪಿ.ಜಿ.ಎನ್‌. ಪ್ರಸಾದ್‌,
ಪ್ರಗತಿಪರ ಕೃಷಿಕರು, ಮಳೆ ಮಾಪಕರು

ಅನುಮತಿ ನೀಡಲಾಗುತ್ತಿಲ್ಲ
ಬೋರ್‌ವೆಲ್‌ ಕೊರೆಯಲು ಅನುಮತಿ ನೀಡುತ್ತಿಲ್ಲ. ಸರಕಾರಿ ಯೋಜನೆಯಂತೆ ಕುಡಿಯುವ ನೀರಿನ ಯೋಜನೆಗಳಿಗಾಗಿ ಅನುಮತಿ ಪಡೆದಿದ್ದಲ್ಲಿ ಮಾತ್ರ ಅವಕಾಶ ಇದೆ. ಬೋರ್‌ವೆಲ್‌ ಕೊರೆಯುತ್ತಿರುವ ಕುರಿತು ದೂರು ಬಂದಿಲ್ಲ. ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. 
-ಕುಂಞಮ್ಮ,
ತಹಶೀಲ್ದಾರ್‌, ಸುಳ್ಯ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.