ಲ್ಯುಕೇಮಿಯಾ: ಎಸೆಸೆಲ್ಸಿ ವಿದ್ಯಾರ್ಥಿನಿ ಸಾವು
Team Udayavani, Apr 6, 2018, 2:13 PM IST
ಉಳ್ಳಾಲ: ವರ್ಷವಿಡೀ SSLCಗೆ ಸಿದ್ಧತೆ ನಡೆಸಿ ಪರೀಕ್ಷೆ ಮುಗಿಸುವ ತವಕದಲ್ಲಿದ್ದ, ಇದರ ನಡುವೆ ಕಳೆದೊಂದು ತಿಂಗಳಿಂದ ಅನಾರೋಗ್ಯ ಕಾಡಿದರೂ ಪರೀಕ್ಷೆ ಬರೆದ ಬಾಲೆಯೊಬ್ಬಳು ಕೊನೆಯ ಪರೀಕ್ಷೆಗೆ ಮುನ್ನವೇ ಬದುಕಿಗೆ ವಿದಾಯ ಹೇಳಿದ್ದಾಳೆ. ಅಸೈಗೋಳಿಯ ಸೈಟ್ ನಿವಾಸಿ ಸ್ಟೀಫನ್ ಡಿ’ಸೋಜಾ ಮತ್ತು ಗ್ರೇಸಿ ಡಿ’ಸೋಜಾ ಅವರ ಪುತ್ರಿ ಸ್ವೀಡಲ್ ಸ್ವೀಟಿ ಡಿ’ಸೋಜಾ (16) ಮೃತ ಬಾಲಕಿ. ಅನಾರೋಗ್ಯದ ನಡುವೆಯೇ ಬುಧವಾರ SSLC ಹಿಂದಿ ಪರೀಕ್ಷೆಗೆ ಉತ್ತರಿಸಿದ್ದ ಸ್ವೀಟಿ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಹೊಟ್ಟೆ ನೋವು ಕಾಡಿತ್ತು
ನಗರದ ಸೈಂಟ್ ಆ್ಯನ್ಸ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸ್ವೀಟಿ ಸದಾ ಚಟುವಟಿಕೆಯ ಹುಡುಗಿ, ಓದುವುದರಲ್ಲೂ ಮುಂದಿದ್ದಳು. ಎಸ್ಎಸ್ ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಸ್ವೀಟಿಗೆ ಕಳೆದ ಒಂದು ತಿಂಗಳಿನಿಂದ ಜ್ವರ, ಹೊಟ್ಟೆನೋವು ಆಗಾಗ ಕಾಡುತ್ತಿತ್ತು. ಸ್ಥಳೀಯ ವೈದ್ಯರು ನೀಡಿದ ಔಷಧದಿಂದ ಉಪಶಮನ ಹೊಂದುತ್ತಿದ್ದಳು. ಪರೀಕ್ಷೆಯ ಒತ್ತಡದಿಂದ ಉಂಟಾದ ಅನಾರೋಗ್ಯ ಇದಾಗಿರಬಹುದು ಎಂದು ಮನೆಯವರು ಭಾವಿಸಿದ್ದರು.
ಪತ್ತೆಯಾದ ರಕ್ತ ಕ್ಯಾನ್ಸರ್
ಪರೀಕ್ಷೆ ಪ್ರಾರಂಭಗೊಂಡ ಬಳಿಕವೂ ಅನಾರೋಗ್ಯ ಕಾಡಿದ್ದು, ಬುಧವಾರ ಬೆಳಗ್ಗೆ ಹೊಟ್ಟೆ ನೋವು ಉಲ್ಬಣಿಸಿತ್ತು. ಬೆಳಗ್ಗೆ ಆರರ ವೇಳೆಗೆ ಸ್ವೀಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳಿಗೆ ಒಳಪಡಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಸಂಜೆಯ ವೇಳೆಗೆ ಸಿಗಲಿದ್ದುದರಿಂದ ಮಂಗಳೂರಿನ ರೊಸಾರಿಯೋ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಿಂದಿ ಪರೀಕ್ಷೆಗೆ ಹಾಜರಾಗಿ ಉತ್ತರಿಸಿ ಆಸ್ಪತ್ರೆಗೆ ವಾಪಸಾಗಿದ್ದಳು. ಸಂಜೆ ವೇಳೆಗೆ ಆಕೆಗೆ ಆರೋಗ್ಯ ಸ್ಥಿತಿ ವಿಷಮಿಸಿ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ತಡರಾತ್ರಿ ಮೃತಪಟ್ಟಿದ್ದಾಳೆ.
ಸ್ವೀಟಿಯ ವೈದ್ಯಕೀಯ ಪರೀಕ್ಷೆಯ ವರದಿ ಹೆತ್ತವರಿಗೆ ಗುರುವಾರ ಸಂಜೆ ವೇಳೆಗೆ ಸಿಕ್ಕಾಗ ಆಕೆ ರಕ್ತ ಕ್ಯಾನ್ಸರ್ (ಲ್ಯುಕೇಮಿಯಾ)ನಿಂದ ಬಳಲುತ್ತಿದ್ದ ಮಾಹಿತಿ ಸಿಕ್ಕಿದೆ. ಶುಕ್ರವಾರ ಕೊನೆಯ ಸಮಾಜ ವಿಜ್ಞಾನ ಪರೀಕ್ಷೆ ಮುಗಿಸಿ ಸಂತೋಷದಿಂದ ಕುಣಿಯಬೇಕಾಗಿದ್ದ ಎಳೆ ಜೀವವನ್ನು ಲ್ಯುಕೇಮಿಯಾ ಬಲಿ ತೆಗೆದುಕೊಂಡಿದೆ. ಅಂಗಡಿ ವ್ಯಾಪಾರ ನಡೆಸುವ ತಂದೆ ಸ್ಟೀಫನ್ ಡಿ’ಸೋಜಾ, ಖಾಸಗಿ ಆಸ್ಪತ್ರೆ ಉದ್ಯೋಗಿಯಾಗಿರುವ ತಾಯಿ ಗ್ರೇಸಿ ಡಿ’ಸೋಜಾ ಮತ್ತು ಹತ್ತು ವರ್ಷ ವಯಸ್ಸಿನ ಸಹೋದರ ಶಾನ್ನನ್ನು ಸ್ವೀಟಿ ಆಗಲಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.