ಮೇಕ್‌ ಇನ್‌ ಕನ್ನಡ


Team Udayavani, Apr 6, 2018, 4:10 PM IST

rimek.jpg

“ನಾನು ಸ್ವಮೇಕ್‌ ಚಿತ್ರ ಮಾಡೋಕೆ ರೆಡಿ. ಆದರೆ, ಕಥೆ ಹೇಳ್ಳೋಕೆ ಹೋದರೆ ಯಾವ ನಿರ್ಮಾಪಕ, ಹೀರೋ ಕೂಡ ಕಥೆ ಕೇಳ್ಳೋಕೆ ರೆಡಿ ಇಲ್ಲ. ಕಾರಣ ಗೊತ್ತಿಲ್ಲ. ಒಂದು ಸಿಡಿ ಕೊಟ್ಟು, ಇದನ್ನ ಮಾಡಿ ಅಂತಾರೆ. ನಾನೇನು ಮಾಡಲಿ…?’ ಹಾಗಂತ ಇತ್ತೀಚೆಗೆ ನಿರ್ದೇಶಕ ಓಂಪ್ರಕಾಶ್‌ ರಾವ್‌ ಬೇಸರದಿಂದ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಅದೇ ಕಾರಣಕ್ಕೆ ಅವರು ಇಷ್ಟು ವರ್ಷ ರೀಮೇಕ್‌ ಮತ್ತು ರೀಮಿಕ್ಸ್‌ ಚಿತ್ರಗಳನ್ನು ಮಾಡಬೇಕಾಯಿತಂತೆ. ಇದು ಓಂಪ್ರಕಾಶ್‌ ರಾವ್‌ ಅವರೊಬ್ಬರ ಸಮಸ್ಯೆಯಷ್ಟೇ ಅಲ್ಲ, ಹಲವು ನಿರ್ದೇಶಕರು ರೀಮೇಕ್‌ನ ವರ್ತುಲದಿಂದ ಹೊರಬರುವುದಕ್ಕೆ ಒದ್ದಾಡುತ್ತಿದ್ದಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕ್ರಮೇಣ ಚಿತ್ರಣ ಬದಲಾಗುತ್ತಿರುವಂತಿದೆ. ಹಿಂದೊಮ್ಮೆ ಬೇರೆ ಭಾಷೆಯ ಚಿತ್ರವನ್ನು ಕನ್ನಡದಲ್ಲಿ ರೀಮೇಕ್‌ ಮಾಡುವುದು ದೊಡ್ಡ ಪ್ರತಿಷ್ಠೆ ಎನ್ನುವಂತಾಗಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್‌ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದಷ್ಟೇ ಅಲ್ಲ, ತಾವು ರೀಮೇಕ್‌ ಮಾಡುತ್ತಿದ್ದೀ ಅಂತ ಹೇಳಿಕೊಂಡರೆ, ಎಲ್ಲಿ ಜನ ಚಿತ್ರವನ್ನು ನೋಡುವುದಕ್ಕೆ ಬರುವುದಿಲ್ಲವೋ ಎಂಬ ಭಯ ಚಿತ್ರತಂಡದವರನ್ನು ಕಾಡುತ್ತಿದೆ.

ಒಂದು ಚಿತ್ರ ರೀಮೇಕ್‌ ಎಂದು ಹೇಳಿಕೊಂಡರೆ, ಅದರಿಂದ ಸಮಸ್ಯೆಯಾಗುತ್ತದೆಯೇ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಇತ್ತೀಚೆಗೆ “ಅತೃಪ್ತ’ ಎಂಬ ಚಿತ್ರ ಬಿಡುಗಡೆಯಾಯಿತು. ಅದರ ಬಿಡುಗಡೆಯ ಕುರಿತಾಗಿ ಹೇಳುವುದಕ್ಕೆ ಚಿತ್ರದ ತಂಡದವರು ಮಾಧ್ಯಮದವರೆದುರು ಬಂದಿದ್ದರು. ಚಿತ್ರತಂಡದವರು ಎಲ್ಲೂ ಚಿತ್ರದ ಕಥೆಯ ಬಗ್ಗೆ ಮಾತನಾಡಿರಲಿಲ್ಲ. ಅಷ್ಟರಲ್ಲಾಗಲೇ, ಇದು ತೆಲುಗಿನ “ಅವುನು’ ಚಿತ್ರದ ರೀಮೇಕ್‌ ಇರಬಹುದು ಎಂಬ ಸಂಶಯ ಮಾಧ್ಯಮದವರಿಗೆ ಬಂದಿತ್ತು.

ಹಾಗಾಗಿ ಇದು ರೀಮೇಕಾ ಅಥವಾ ಸ್ವಮೇಕಾ ಎಂಬ ಪ್ರಶ್ನೆಯನ್ನು ಚಿತ್ರತಂಡದವರ ಎದುರು ಇಟ್ಟಾಗ, ಚಿತ್ರತಂಡದವರು ಒಲ್ಲದ ಮನಸ್ಸಿನಲ್ಲಿಯೇ ತಮ್ಮದು ರೀಮೇಕ್‌ ಚಿತ್ರ ಎಂದು ಒಪ್ಪಿಕೊಂಡರು. ರೀಮೇಕ್‌ ಮಾಡಿದ್ದೇ ಹೌದು. ಅದನ್ನು ಹೇಳಿಕೊಳ್ಳುವುದಕ್ಕೆ ಮುಚ್ಚಾಮರೆಯೇನು ಎಂಬ ಪ್ರಶ್ನೆ ಬರುತ್ತದೆ. ಇದನ್ನು ಚಿತ್ರತಂಡದವರಿಗೆ ಕೇಳಿದರೆ, “ಜನ ರೀಮೇಕ್‌ ಎಂದರೆ ಚಿತ್ರ ನೋಡುವುದಕ್ಕೆ ಬರುವುದಿಲ್ಲ.

ಅದಕ್ಕೆ ಎಲ್ಲೂ ನಾವು ಇದು ರೀಮೇಕ್‌ ಅಂತ ಹೇಳಿಕೊಂಡಿಲ್ಲ’ ಎಂಬ ಉತ್ತರ ನಿರ್ದೇಶಕರಿಂದ ಬಂತು. ಇದು ಬರೀ “ಅತೃಪ್ತ’ ತಂಡದವರ ಕಥೆಯಷ್ಟೇ ಅಲ್ಲ. ಇತ್ತೀಚಿನ ದಿನಗಳಲ್ಲಿ ರೀಮೇಕ್‌ ಮಾಡುತ್ತಿದ್ದರೂ, ಅದನ್ನು ಹೇಳಿಕೊಳ್ಳುವುದಕ್ಕೆ ಸಂಕೋಚಪಡುವವರು ಸಾಕಷ್ಟು ಜನ ಇದ್ದಾರೆ. “ಸಂಹಾರ’ ಚಿತ್ರವು “ಅದೇ ಕಂಗಳ್‌’ ಎಂಬ ತಮಿಳಿನ ಚಿತ್ರದ ರೀಮೇಕ್‌ ಎಂದು ಗೊತ್ತಾಗಿದ್ದು ಬಿಡುಗಡೆಯಾದ ಮೇಲೆ.

ಅಲ್ಲಿಯವರೆಗೂ ಚಿತ್ರತಂಡದವರು ಇದೊಂದು ರೀಮೇಕ್‌ ಎಂಬ ವಿಷಯವನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಅದೇ ತರಹ ಆರ್‌. ಚಂದ್ರು ಅವರು “ಲಕ್ಷ್ಮಣ’ ಎಂಬ ಚಿತ್ರವನ್ನು ಶುರು ಮಾಡಿದಾಗ, ಅದು ತೆಲುಗಿನ “ಆತನಕ್ಕೊಡೆ’ ಎಂಬ ಸಿನಿಮಾದ ರೀಮೇಕ್‌ ಅಂತ ಹೇಳಿಕೊಂಡಿರಲಿಲ್ಲ. “ಮಾಯ’ ಎಂಬ ಚಿತ್ರವನ್ನು “ಆಕೆ’ ಹೆಸರಿನಲ್ಲಿ ರೀಮೇಕ್‌ ಮಾಡಿದಾಗ, “ರಾಜತಂತಿರಮ್‌’ ಚಿತ್ರ “ಪಂಟ’ ಆದಾಗ, “ಕನಿಥನ್‌’ ಎಂಬ ಚಿತ್ರವು “ಅತಿರಥ’ನಾದಾಗ ಎಲ್ಲೂ ಚಿತ್ರತಂಡದವರು ತಮ್ಮ ಚಿತ್ರವು ರೀಮೇಕ್‌ ಎಂದು ಹೇಳಿಕೊಂಡಿರಲಿಲ್ಲ.

ಅಷ್ಟೇ ಏಕೆ, ವಿಜಯ್‌ ಅಭಿನಯದ “ಕನಕ’ ಚಿತ್ರ ಸಹ ತಮಿಳಿನ “ವೆಯಿಲ್‌’ ಎಂಬ ಚಿತ್ರದಿಂದ ಸ್ಫೂರ್ತಿಪಡೆದಿದ್ದು ಎಂದು ವಿಕಿಪೀಡಿಯಾ ಹೇಳುವವರೆಗೂ ಯಾರಿಗೂ ಅದೊಂದು ರೀಮೇಕ್‌ ಇರಬಹುದು ಎಂದು ಯಾರಿಗೂ ಗೊತ್ತಿರಲಿಲ್ಲ. ಒಂದು ಭಾಷೆಯ ಜನಪ್ರಿಯ ಚಿತ್ರವೊಂದನ್ನು ಇನ್ನೊಂದು ಭಾಷೆಯಲ್ಲಿ ರೀಮೇಕ್‌ ಮಾಡುವುದು ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ನಡೆದುಬಂದಿರುವ ಸಂಪ್ರದಾಯ.

ಇದುವರೆಗೂ ನೂರಾರು ಪರಭಾಷೆಯ ಚಿತ್ರಗಳು ಕನ್ನಡಕ್ಕೆ ರೀಮೇಕ್‌ ಆಗಿವೆ. ಒಂದು ಹಂತದಲ್ಲಿ ಬೇರೆ ಭಾಷೆಯ ಚಿತ್ರವನ್ನು ಕನ್ನಡದಲ್ಲಿ ರೀಮೇಕ್‌ ಮಾಡುವುದು ದೊಡ್ಡ ಪ್ರತಿಷ್ಠೆ ಎನ್ನುವಂತಾಗಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್‌ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದಷ್ಟೇ ಅಲ್ಲ, ತಾವು ರೀಮೇಕ್‌ ಮಾಡುತ್ತಿದ್ದೀವಿ ಅಂತ ಹೇಳಿಕೊಂಡರೆ,

ಎಲ್ಲಿ ಜನ ಚಿತ್ರವನ್ನು ನೋಡುವುದಕ್ಕೆ ಬರುವುದಿಲ್ಲವೋ ಎಂಬ ಭಯ ಚಿತ್ರತಂಡದವರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ ರೀಮೇಕ್‌ ಮಾಡಿದರೂ, ಚಿತ್ರತಂಡದವರು ಅದನ್ನು ರೀಮೇಕ್‌ ಎಂದು ಹೇಳಿಕೊಳ್ಳುವುದಕ್ಕೆ ಚಿತ್ರತಂಡದವರು ಹಿಂಜರಿಯುತ್ತಿದ್ದಾರೆ. ಇಷ್ಟಕ್ಕೂ ಯಾಕೆ ಇಂಥದ್ದೊಂದು ಪರಿಸ್ಥಿತಿ ಬಂತು ಎಂದರೆ ಆಶ್ಚರ್ಯವಾಗಬಹುದು.

ಹೋಲಿಕೆಯೇ ಸಮಸ್ಯೆ: ಇಷ್ಟಕ್ಕೂ ಚಿತ್ರಗಳನ್ನು ರೀಮೇಕ್‌ ಮಾಡುವುದಕ್ಕೆ ಮತ್ತು ನೋಡುವುದಕ್ಕೆ ಯಾಕೆ ಜನ ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದಕ್ಕೂ ಕಾರಣಗಳಿವೆ. ಪ್ರಮುಖವಾಗಿ, ಮುಂಚೆ ಮೂಲ ಚಿತ್ರವನ್ನು ನೋಡದವರು ಹೆಚ್ಚಾಗಿ ರೀಮೇಕ್‌ ನೋಡುತ್ತಿದ್ದರು. ಈಗ ಎಲ್ಲಾ ಭಾಷೆಯ ಎಲ್ಲಾ ಚಿತ್ರಗಳು ಸಲೀಸಾಗಿ ಸಿಗುವಂತಾಗಿದೆ. ಹಿಂದೊಮ್ಮೆ ಒಂದು ಪರಭಾಷೆಯ ಚಿತ್ರವು ಬಿಡುಗಡೆಯಾದರೂ, ಅದನ್ನು ಚಿತ್ರಮಂದಿರದಲ್ಲೇ ನೋಡಬೇಕಿತ್ತು. ಈಗ ಹಾಗಿಲ್ಲ. ಬೇರೆಬೇರೆ ವಿಧಾನಗಳಿಂದ ಜನ ಆ ಚಿತ್ರಗಳನ್ನು ನೋಡಿರುತ್ತಾರೆ.

ಪ್ರಮುಖವಾಗಿ ಪೈರಸಿ ಸಿಡಿಗಳು ಸಿಗುತ್ತವೆ, ಡೌನ್‌ಲೋಡ್‌ ಮಾಡಿಕೊಳ್ಳಬಹುದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗಿರುತ್ತದೆ … ಹಾಗಾಗಿ ಇವತ್ತು ಎಲ್ಲಾ ಚಿತ್ರಗಳೂ ಜನರಿಗೆ ಸುಲಭವಾಗಿ ಸಿಗುತ್ತದೆ ಮತ್ತು ಜನ ಸಹ ನೋಡಿರುತ್ತಾರೆ. ಹಾಗಾಗಿ ಮೂಲ ಚಿತ್ರ ನೋಡದವರು ರೀಮೇಕ್‌ ನೋಡುತ್ತಾರೆ ಎಂಬ ಕಾರಣ ಹಳೆಯದಾಯಿತು. ಇನ್ನೊಂದು ಕಾರಣ, ಹೋಲಿಕೆ ಮಾಡುವುದು. ಯಾವುದೇ ಒಂದು ಯಶಸ್ವಿ ಮತ್ತು ಜನಪ್ರಿಯ ಚಿತ್ರವು ಜನರ ಮನಸ್ಸಿನಲ್ಲಿ ಆಳವಾಗಿ ಕೂತಿರುತ್ತದೆ.

ಅದು ರೀಮೇಕ್‌ ಆಗಿ, ಅದನ್ನು ನೋಡಿದಾಗ, ಮೂಲ ಚಿತ್ರದೊಂದಿಗೆ ಹೋಲಿಕೆಗಳು ಸಹಜ. ಮೂಲ ಚಿತ್ರದಲ್ಲಿ ಮೇಕಿಂಗ್‌ ಚೆನ್ನಾಗಿತ್ತು, ರೀಮೇಕ್‌ನಲ್ಲಿ ಅಭಿನಯ ಚೆನ್ನಾಗಿರಲಿಲ್ಲ, ಹಾಡುಗಳು ಇನ್ನಷ್ಟು ಚೆನ್ನಾಗಿರಬೇಕಿತ್ತು … ಎಂಬಂತಹ ಮಾತುಗಳನ್ನು ಎಲ್ಲರ ಬಾಯಲ್ಲೂ ಕೇಳಬಹುದು. ಜನ ಈ ರೀತಿ ಪ್ರತಿಯೊಂದು ವಿಷಯವನ್ನು ಹೋಲಿಕೆ ಮಾಡಿ ನೋಡುವಷ್ಟು ಮತ್ತು ಮಾತನಾಡುವಷ್ಟು ಜಾಗೃತರಾಗಿರುವುದರಿಂದ, ಚಿತ್ರ ಮಾಡುವವರು ಸಹ ಜನರ ಅಭಿಪ್ರಾಯಗಳಿಗೆ ಮಣಿದಿದ್ದಾರೆ.

ಹಾಗಾಗಿ ಮೊದಲೇ ರೀಮೇಕ್‌ ಎಂದು ಘೋಷಿಸಿಬಿಟ್ಟರೆ, ಜನ ಫಿಕ್ಸ್‌ ಆಗಿ ಬರುತ್ತಾರೆ ಮತ್ತು ಎಲ್ಲದಕ್ಕೂ ಹೋಲಿಕೆ ಮಾಡುತ್ತಾರೆ ಎಂಬ ಭಯರುವುದರಿಂದ ಬಹಳಷ್ಟು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮದು ರೀಮೇಕ್‌ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತದೆ.  ಇನ್ನು ಎಲ್ಲಕ್ಕಿಂತ ಹೆಚ್ಚಾಗಿ, ಚಿತ್ರ ಮಾಡುವ ನಿರ್ದೇಶಕರೆಲ್ಲರೂ ಬರಹಗಾರರಾಗಿದ್ದು, ತಮ್ಮ ಕಥೆಗಳನ್ನು ತಾವೇ ನಿರ್ದೇಶಿಸುವ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

ಹೀರೋಗಳೂ ರೀಮೇಕ್‌ನಿಂದ ದೂರ: ಬರೀ ನಿರ್ಮಾಪಕರು ಮತ್ತು ನಿರ್ದೇಶಕರಷ್ಟೇ ಅಲ್ಲ, ಎಷ್ಟೋ ಹೀರೋಗಳು ಇವತ್ತು ರೀಮೇಕ್‌ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೊಂದು ದಿನ ಮಾತನಾಡುವ ಸಂದರ್ಭದಲ್ಲಿ, ನಟ ಮುರಳಿ ತಾವು ರೀಮೇಕ್‌ ಮಾಡುವುದಿಲ್ಲ ಮತ್ತು ಮಾಡಿದರೂ ಜನ ನೋಡುವುದಿಲ್ಲ ಎಂದು ಹೇಳಿಕೊಂಡರು. ಅದಕ್ಕೆ ಸರಿಯಾಗಿ ಅವರು ರೀಮೇಕ್‌ ಮಾಡಿ ಹಲವು ವರ್ಷಗಳಾಗಿವೆ. ಅವರ ಹಿಂದಿನ ಮೂರು ಚಿತ್ರಗಳು ಸತತ ಸ್ವಮೇಕ್‌ ಆಗಿದ್ದವು ಮತ್ತು ಮುಂದೆ ಸಹ ಅವರು ಸ್ವಮೇಕ್‌ ಚಿತ್ರಗಳನ್ನು ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಬರೀ ಮುರಳಿ ಅಷ್ಟೇ ಅಲ್ಲ, ಬೇರೆ ಹೀರೋಗಳ ಮುಂಬರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿನೋಡಿ. ಕಳೆದ ಎರಡೂರು ವರ್ಷಗಳಲ್ಲಿ ಸತತವಾಗಿ ಮೂರು ರೀಮೇಕ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಎಂದರೆ ಅದು ಉಪೇಂದ್ರ. ಮಿಕ್ಕಂತೆ ಬೇರೆಯವರೆಲ್ಲರೂ ರೀಮೇಕ್‌-ಸ್ವಮೇಕ್‌ಗಳ ನಡುವೆ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಪುನೀತ್‌, ಸುದೀಪ್‌, ದರ್ಶನ್‌, ಯಶ್‌, ಗಣೇಶ್‌ ಅವರೆಲ್ಲರ ಮುಂದಿನ ಚಿತ್ರಗಳೂ ಸ್ವಮೇಕ್‌ ಆಗಿವೆ ಮತ್ತು ಒಂದಿಬ್ಬರು ಹೀರೋಗಳ ಹಿಂದಿನ ಚಿತ್ರಗಳಲ್ಲಿ ಒಂದೆರೆಡು ರೀಮೇಕ್‌ಗಳು ಕಾಣಿಸುವುದು ಬಿಟ್ಟರೆ,

ಮಿಕ್ಕಂತೆ ಸ್ವಮೇಕ್‌ ಚಿತ್ರಗಳೇ ಇವೆ. “ಮುಕುಂದ ಮುರಾರಿ’ ಚಿತ್ರದ ನಂತರ ಸುದೀಪ್‌ ರೀಮೇಕ್‌ ಮಾಡಿಲ್ಲ. “ಬೃಂದಾವನ’ ನಂತರ ದರ್ಶನ್‌ ಅವರು ರೀಮೇಕ್‌ ಸಹವಾಸಕ್ಕೆ ಹೋಗಿಲ್ಲ. ಯಶ್‌ ಅಭಿನಯದ “ಸಂತು ಸ್ಟ್ರೇಟ್‌ ಫಾರ್ವರ್ಡ್‌’ ಚಿತ್ರ ರೀಮೇಕ್‌ ಎಂದು ಹೇಳಲಾಗುತ್ತದೆ. “ಅಂಜನಿಪುತ್ರ’ ಚಿತ್ರವೊಂದನ್ನು ಮಾಡಿದ್ದು ಬಿಟ್ಟರೆ, ಪುನೀತ್‌ ಅವರ ಹಿಂದಿನ ಚಿತ್ರಗಳಲ್ಲಿ “ರಾಜಕುಮಾರ’, “ಮೈತ್ರಿ’ಯಂತಹ ಸ್ವಮೇಕ್‌ಗಳು ಸಿಗುತ್ತವೆ. ಹೀಗೆ ಹೀರೋಗಳು ಸಹ ರೀಮೇಕ್‌ ಮಾಡುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದ, ರೀಮೇಕ್‌ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

ಮಳೆ ಪೂರ್ತಿ ನಿಂತಿಲ್ಲ: ಹಾಗಾದರೆ, ರೀಮೇಕ್‌ ಪರಂಪರೆ ನಿಂತೇ ಹೋಯಿತಾ ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ರೀಮೇಕ್‌ ಚಿತ್ರಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಹಾಗಂತ ಪೂರ್ತಿ ನಿಂತಿಲ್ಲ. ಈಗಲೂ ಕನ್ನಡದಲ್ಲಿ ಪ್ರತಿ ವರ್ಷ ಒಂದಿಪ್ಪತ್ತು ರೀಮೇಕ್‌ ಚಿತ್ರಗಳು ಸಿಗುತ್ತವೆ. ಆದರೆ, ಅದ್ಯಾವುದೂ ದೊಡ್ಡ ಟ್‌ ಚಿತ್ರಗಳ ರೀಮೇಕ್‌ ಅಲ್ಲ. ಸಣ್ಣಪುಟ್ಟ ಬಜೆಟ್‌ನಲ್ಲಿ ಮಾಡಿ, ಒಂದು ಲೆವೆಲ್‌ಗೆ ಜನಪ್ರಿಯವಾಗಿರುವ ಮತ್ತು ಯಶಸ್ವಿಯಾಗಿರುವ ಚಿತ್ರಗಳ ರೀಮೇಕ್‌ಗಳು ಅವು. ಸುಮ್ಮನೆ ಒಂದೆರೆಡು ವರ್ಷಗಳ ಉದಾಹರಣೆ ತೆಗೆದುಕೊಂಡರೆ,”ಬೃಹಸ್ಪತಿ’, “ಗೌಡ್ರು ಹೋಟೆಲ್‌’, “ಸಂಹಾರ’,

“ಪ್ರೀತಿ ಪ್ರೇಮ’, “ಪಟಾಕಿ’, “ಸಿಲಿಕಾನ್‌ ಸಿಟಿ’, “ಪಂಟ’, “ಮಾಯ’, “ರಜನಿ-ಮುರುಗನ್‌’, “ಮಿಸ್ಟರ್‌ ಮೊಮ್ಮಗ’, “ಜಿಗರ್‌ ಥಂಡಾ’, “ಗೋಲಿ ಸೋಡಾ’, “ಜಾನ್‌ ಜಾನಿ ಜನಾರ್ಧನ್‌’, “ಸುಂದರಾಂಗ ಜಾಣ’, “ಮಂಡ್ಯ ಟು ಮುಂಬೈ’, “ಭಲೇ ಜೋಡಿ’, “ಕಥೆ-ಚಿತ್ರಕಥೆ-ನಿರ್ದೇಶನ: ಪುಟ್ಟಣ ಕಣಗಾಲ್‌’, “ಕಲ್ಪನಾ 2′, “ಉಪೇಂದ್ರ ಮತ್ತೆ ಬಾ’ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. ಒಂದು ಚಿತ್ರವೆಂದರೆ, ಈ ಎಲ್ಲಾ ಚಿತ್ರಗಳ ಮೂಲ ಚಿತ್ರಗಳು ಸಹ ದೊಡ್ಡ ಮಟ್ಟದ ಯಶಸ್ವಿ ಚಿತ್ರಗಳಾಗಿರಲಿಲ್ಲ. ಹಾಗೆಯೇ, ಈ ಚಿತ್ರಗಳು ಸಹ ದೊಡ್ಡ ಹಿಟ್‌ ಚಿತ್ರಗಳೇನಲ್ಲ. ಈ ಚಿತ್ರಗಳಿಂದ ನಿರ್ಮಾಪಕರು ದೊಡ್ಡ ದುಡ್ಡು ಕಂಡಿದ್ದು ಕಡಿಮೆಯೇ ಎಂದರೆ ತಪ್ಪಿಲ್ಲ.

ಹೊಸಬರಿಗೆ ರೀಮೇಕ್‌ ಸೇಫ‌ು: ಇಲ್ಲೊಂದು ವಿಚಿತ್ರವನ್ನು ಗಮನಿಸಬೇಕು. ಹಿಂದೊಮ್ಮೆ ಒಂದು ಚಿತ್ರ ರೀಮೇಕ್‌ ಆಗುತ್ತಿದೆ ಎಂದರೆ ಅದು ದೊಡ್ಡ ಸ್ಟಾರ್‌ನ ಚಿತ್ರವೋ ಅಥವಾ ದೊಡ್ಡ ಬಜೆಟ್‌ನ ಚಿತ್ರವು ಎಂಬ ಮಾತಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ. ರೀಮೇಕ್‌ ಮಾಡುತ್ತಿರುವವರೆಲ್ಲಾ ಹೆಚ್ಚಾಗಿ ಹೊಸಬರೇ ಅಥವಾ ದೊಡ್ಡ ಸ್ಟಾರ್‌ಗಳಲ್ಲದವರು. ಇನ್ನು ಬಜೆಟ್‌ ಸಂಖ್ಯೆಯಲ್ಲೂ ಕಡಿಮೆ ಅಥವಾ ಆ್ಯವರೇಜ್‌ ಬಜೆಟ್‌ನ ಚಿತ್ರಗಳೇ ಹೆಚ್ಚಾಗಿ ಕನ್ನಡಕ್ಕೆ ಬರುತ್ತಿವೆ.

ಮೇಲೆ ಹೆಸರಿಸಿರುವ ಕೆಲವು ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಿ. ಅಲ್ಲಿ ದೊಡ್ಡ ಸ್ಟಾರ್‌ ಚಿತ್ರ ಅಂತ ಕಾಣುವುದು “ಕಲ್ಪನಾ 2′, “ಉಪೇಂದ್ರ ಮತ್ತೆ ಬಾ’, “ಸುಂದರಾಂಗ ಜಾಣ’, “ಪಟಾಕಿ’, “ಜಾನ್‌ ಜಾನಿ ಜನಾರ್ಧನ್‌’, “ಸಿಲಿಕಾನ್‌ ಸಿಟಿ’ಯಂತಹ ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಚಿತ್ರಗಳು ಹೊಸಬರದ್ದು ಅಥವಾ ಕಡಿಮೆ ಬಜೆಟ್‌ನ ಚಿತ್ರಗಳಾಗಿವೆ. ಪ್ರಮುಖವಾಗಿ ಹೊಸಬರನ್ನಿಟ್ಟುಕೊಂಡು ಚಿತ್ರ ಮಾಡುವಾಗ, ಎಂತಹ ಚಿತ್ರ ಮಾಡಬೇಕು ಎಂಬ ಗೊಂದಲ ಇದ್ದೇ ಇರುತ್ತದೆ.

ಅದೇ ಕಾರಣಕ್ಕೆ ಬೇರೆ ಭಾಷೆಗಳಲ್ಲಿನ ಹೆಚ್ಚು ಸುದ್ದಿ ಮಾಡದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದು ಆ್ಯವರೇಜ್‌ ಬಜೆಟ್‌ನ ಚಿತ್ರಗಳನ್ನು ತಂದು ರೀಮೇಕ್‌ ಮಾಡಲಾಗುತ್ತಿದೆ. ಹಾಗೆ ಮಾಡಿದರೆ ನಿರ್ಮಾಪಕರು ಒಂದು ಹಂತಕ್ಕೆ ಸೇಫ‌ು ಅಂತರ್ಥ. ಅಲ್ಲಿ ಕಥೆ ಒಂದು ಮಟ್ಟಕ್ಕಿರುತ್ತದೆ ಮತ್ತು ಬಜೆಟ್‌ ಸಹ ಹೆಚ್ಚಿರುವುದಿಲ್ಲ. ಹಾಗಾಗಿ ಅಂತಹ ಚಿತ್ರಗಳನ್ನೇ ಆಯ್ಕೆ ಮಾಡಿಕೊಂಡು ರೀಮೇಕ್‌ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಒಂದು ಕಾಲಕ್ಕೆ ರೀಮೇಕ್‌ ವಿಷಯವಾಗಿ ಚಿತ್ರರಂಗದಲ್ಲಿ, ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಕಾಲತ್ತು. ರೀಮೇಕ್‌ ಮಾಡುವುದೇ ಹೆಮ್ಮೆ ಎನ್ನುವಂತಹ ಪರಿಸ್ಥಿತಿ ಇತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ರುದ್ಧವಾಗಿದೆ. ರೀಮೇಕ್‌ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದಷ್ಟೇ ಅಲ್ಲ, ರೀಮೇಕ್‌ ಮಾಡುವುದೇ ಅವಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೊಂದು ದಿನ ರೀಮೇಕ್‌ ಸಂಪೂರ್ಣವಾಗಿ ನಿಂತು ಹೋಗುತ್ತದೆ ಎನ್ನುವುದಕ್ಕಿಂತ, ಆ ಸಂಖ್ಯೆಯಲ್ಲಿ ಇನ್ನಷ್ಟು ಕಡಿಮೆಯಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ರೀಮೇಕಾರಣ
1) ರೀಮೇಕ್‌ ಚಿತ್ರಗಳ ಸತತ ಸೋಲು, ನಷ್ಟ
2) ಪ್ರೇಕ್ಷಕನಿಗೆ ಹೆಚ್ಚಿದ ಪರಭಾಷಾ ಚಿತ್ರಗಳ ಜ್ಞಾನ
3) ಮೂಲ ಚಿತ್ರದೊಂದಿಗೆ ಹೋಲಿಕೆಯ ಭಯ
4) ರೀಮೇಕ್‌ ಬಗ್ಗೆ ಸ್ಟಾರ್ ನಿರಾಸಕ್ತಿ
5) ಹೆಚ್ಚಿದ ಕಥೆಗಾರ-ನಿರ್ದೇಶಕರ ಸಂಖ್ಯೆ

* ಚೇತನ್ ನಾಡಿಗೇರ್

ಟಾಪ್ ನ್ಯೂಸ್

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.