ದೂರ ಪ್ರಯಾಣ ಬ್ಯಾಗ್‌ಗಳಲ್ಲೂ ನಾನಾ ಆಯ್ಕೆ
Team Udayavani, Apr 6, 2018, 4:30 PM IST
ದೂರದ ಪ್ರಯಾಣ ಅಥವಾ ಪ್ರವಾಸ ಹೋಗುವ ಸಮಯದಲ್ಲಿ ನಮ್ಮ ಬ್ಯಾಗ್‌ಗಳಲ್ಲಿ ಅನೇಕ ವಸ್ತುಗಳನ್ನು ತುಂಬಿಸಿಕೊಳ್ಳುತ್ತೇವೆ. ಈ ಹಂತದಲ್ಲಿ ಬ್ಯಾಗ್‌ಗಳ ಗಾತ್ರ ಎಷ್ಟೇ ದೊಡ್ಡದಿದ್ದರೂ ಚಿಕ್ಕ ಎಂದೆನಿಸುತ್ತದೆ. ಇಂದು ಸಾಮಾನ್ಯವಾಗಿ ಪ್ರವಾಸಿಗರು ದೊಡ್ಡದಾದ ಲಗೇಜ್ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯ. ಅದಕ್ಕೆಂದೇ ಮಾರುಕಟ್ಟೆಯಲ್ಲಿಂದು ಅನೇಕ ವೆರೈಟಿಯ ಲಗೇಜ್ ಅಥವಾ ಟ್ರಕ್ಕಿಂಗ್ ಬ್ಯಾಗ್‌ಗಳು ಲಭ್ಯವಿವೆ.
ಬ್ಯಾಗ್‌ಗಳ ಗಾತ್ರ ಹೆಚ್ಚಾದಂತೆ ಬೆನ್ನು ನೋವಿಗೆ ಕಾರಣವಾಗುತ್ತದೆ. ಅದಕ್ಕೆಂದೆ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬ್ಯಾಗ್ ಕಾಲಿಟ್ಟಿವೆ. ಪ್ರಮುಖವಾಗಿ ಸಣ್ಣ ಮಕ್ಕಳಿಗೆ ಲೈಟ್ ವೈಟ್ ಬ್ಯಾಗ್‌ಗಳು ಬಂದು ಬಿಟ್ಟಿವೆ. ಈ ಬ್ಯಾಗ್ ಗಳನ್ನು ಬೆನ್ನಿಗೆ ಹಾಕುವಾಗ ಎರಡೂ ಭುಜಕ್ಕೂ ಸಮಾನ ಭಾರ ಬೀಳುವಂತಹ ವಿನ್ಯಾಸ ಕೂಡ ಮಾಡಲಾಗುತ್ತದೆ. ರೋಲಿಂಗ್ ಬ್ಯಾಕ್‌ಪ್ಯಾಕ್ ಶೈಲಿಯ ಬ್ಯಾಗ್‌ಗಳನ್ನು ಬೆನ್ನಿಗೂ ಹಾಕಿಕೊಳ್ಳಲು ಅವಕಾಶವಿದೆ. ಅದರಂತೆಯೇ ಈ ರೀತಿಯ ಬ್ಯಾಗ್‌ಗಳಲ್ಲಿ ಚಕ್ರವೂ ಇದೆ. ಚಕ್ರ ಮತ್ತು ಹ್ಯಾಂಡಲ್ ಸಹಾಯದಿಂದ ತೆಗೆದುಕೊಂಡು ಹೋಗುವ ವೈಶಿಷ್ಟ್ಯವನ್ನು
ಹೊಂದಿದೆ. ಬೆನ್ನಿನ ಹೊರೆಯನ್ನು ಇಳಿಸಲು ಈ ಬ್ಯಾಗ್‌ಗಳು ಸಹಾಯ ಮಾಡುತ್ತವೆಯಲ್ಲದೆ, ಹೆಚ್ಚಾಗಿ ಸಾಹಸಿಗರು ಈ ರೀತಿಯ ಬ್ಯಾಗ್‌ಗಳ ಬಳಕೆ ಮಾಡುತ್ತಾರೆ.
ಡಫೆಲ್ ಬ್ಯಾಗ್‌ಗಳು
ಮುಖ್ಯವಾದ ವಿನ್ಯಾಸವುಳ್ಳ ಬ್ಯಾಗ್‌ಗಳಲ್ಲಿ ಡಫೆಲ್ ಬ್ಯಾಗ್ ಗಳು ಕೂಡ ಒಂದು. ಈ ಬ್ಯಾಗ್‌ಗಳಲ್ಲಿ ಸ್ಥಳಾವಕಾಶ ಹೆಚ್ಚಿರುತ್ತದೆ. ಇದರಲ್ಲಿ ಮೂರರಿಂದ ನಾಲ್ಕು ಬದಿಗಳಲ್ಲಿ ವಸ್ತುಗಳನ್ನು ಇಡಲು ಅವಕಾಶವಿದೆ. ಮಧ್ಯದ ಕಂಪಾರ್ಟ್‌ಮೆಂಟ್ ತುಂಬಾ ಅಗಲವಾಗಿದೆ. ಆದ್ದರಿಂದ ಯಾವುದೇ ವಸ್ತುಗಳನ್ನು ತುಂಬಿಸಲು ಅವಕಾಶವಿದೆ. ಹೆಚ್ಚಾಗಿ ಕ್ರೀಡಾ ಸಾಮಗ್ರಿ ಸಹಿತ ಇತರ ವಸ್ತುಗಳನ್ನು ಸಾಗಿಸಲು ಈ ರೀತಿಯ ಬ್ಯಾಗ್‌ಗಳನ್ನು ಉಪಯೋಗ ಮಾಡಬಹುದಾಗಿದೆ. ಈ ವಿನ್ಯಾಸದ ಬ್ಯಾಗ್ ಗಳನ್ನು ಕೈಯಲ್ಲಿ ಹಿಡಿದೇ ಕೊಂಡೊಯ್ಯಬೇಕೇ ವಿನಾ ಬೆನ್ನಲ್ಲಿ ಧರಿಸಲು ಆಗುವುದಿಲ್ಲ.
ಇದರಂತೆಯೇ ಪ್ರವಾಸಿಗರು ಹೆಚ್ಚಾಗಿ ಉಪಯೋಗ ಮಾಡುವಂತಹ ಮತ್ತೂಂದು ಬ್ಯಾಗ್ ಎಂದರೆ ರೋಲಿಂಗ್
ಡಫೆಲ್ ಬ್ಯಾಗ್‌ಗಳು. ಈ ಬ್ಯಾಗ್‌ಗಳು ಎತ್ತರದ ಪ್ರಾಕಾರದಲ್ಲಿ ಇರುತ್ತವೆ. ಆದ್ದರಿಂದ ಹೆಚ್ಚಿನ ಸಾಮಗ್ರಿಗಳು ಬ್ಯಾಗ್‌ನ ಒಳಗಡೆ ಹಿಡಿಯುತ್ತವೆ. ಮೆಸೆಂಜರ್ ಬ್ಯಾಗ್ ಈ ರೀತಿಯ ಬ್ಯಾಗ್‌ಗಳನ್ನು ಹೆಚ್ಚಾಗಿ ಕೆಮರಾ, ನೀರು, ಚಾಕು ಸಹಿತ ಚಿಕ್ಕಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ಉಪಯೋಗ ಮಾಡುತ್ತೇವೆ. ಮಕ್ಕಳಿಗೆ ಕೂಡ ವಿವಿಧ ವಿನ್ಯಾಸಗಳ ಬ್ಯಾಗ್‌ಗಳು ಲಭ್ಯವಿವೆ. ಹೆಚ್ಚಾಗಿ ಸ್ಕೂಲ್ ಬ್ಯಾಗ್, ಡೋರ ಪ್ಲೇ ಹಾರ್ಡ್ ಟ್ರೋಲಿ ಬ್ಯಾಗ್, ಡೀಪರ್ ಬ್ಯಾಗ್, ಡಿಸ್ನೀ ಬ್ಯಾಗ್, ಡಿಸೀ ಕಾಮಿಕ್ ಬ್ಯಾಗ್ ಸಹಿತ ನಾನಾ ವಿನ್ಯಾಸಗಳ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿವೆ.
ಹೆಚ್ಚು ಬಾಳಿಕೆ
ನಾನು ಹೆಚ್ಚಾಗಿ ಬ್ರ್ಯಾಂಡೆಡ್ ಟ್ರಕ್ಕಿಂಗ್ ಬ್ಯಾಗ್ ಉಪಯೋಗ ಮಾಡುತ್ತೇನೆ. ಏಕೆಂದರೆ ಇವುಗಳು ಹೆಚ್ಚಾಗಿ ಬಾಳಿಕೆ ಬರುತ್ತವೆ. ಅದರಲ್ಲಿಯೂವೆ ಪ್ರವಾಸಕ್ಕೆ, ಟ್ರಕ್ಕಿಂಗ್‌ಗೆ ತೆರಳುವ ಸಮಯದಲ್ಲಿ ಬ್ಯಾಗ್‌ಗಳಲ್ಲಿ ಹೆಚ್ಚಿನ ವಸ್ತುಗಳನ್ನು ಇಡಲು ಸ್ಥಳಾವಕಾಶ ಬೇಕಾಗುತ್ತದೆ. ಆದ್ದರಿಂದ ಹೆಚ್ಚಾಗಿ ಯೋಚಿಸಿ ಆಯ್ಕೆ ಮಾಡುತ್ತೇನೆ.’
– ನಿಖಿತಾ ಜೈನ್,
ಉದ್ಯೋಗಿ
ವಿವಿಧ ವಿನ್ಯಾಸ
ಮಂಗಳೂರಿನಲ್ಲಿ ಹೆಚ್ಚಾಗಿ ಟ್ರೋಲಿಂಗ್ ಬ್ಯಾಗ್‌ಗಳಿಗೆ ಬೇಡಿಕೆ ಇದೆ. ಅಲ್ಲದೆ, ಕೆಲವೊಂದು ಸೀಸನ್ ಸಮಯದಲ್ಲಿ ಬ್ಯಾಗ್‌ಗಳಿಗೆ ಬೇಡಿಕೆ ಬರುತ್ತದೆ. ಇತ್ತೀಚೆಗೆ ಆನ್ ಲೈನ್‌ನಲ್ಲಿಯೇ ವಿವಿಧ ವಿನ್ಯಾಸಗಳ ಬ್ಯಾಗ್‌ಗಳು ಸಿಗುವುದರಿಂದ ನಮಗೆ ಬೇಡಿಕೆ ಕಡಿಮೆಯಾಗಿದೆ.’
– ಅವಿನಾಶ್ ಶೇಟ್,
ವ್ಯಾಪಾರಸ್ಥರು
ಆನ್‌ಲೈನ್‌ನಲಿ ಬೇಡಿಕೆ ಹೆಚ್ಚು
ಇಂದು ಅಂತರ್ಜಾಲ ಯುಗದಲ್ಲಿ ಆನ್ ಲೈನ್‌ನಲ್ಲಿ ಅನೇಕ ಮಂದಿ ಬ್ಯಾಗ್ ಗಳನ್ನು ಖರೀದಿ ಮಾಡುತ್ತಾರೆ. ಆನ್ ಲೈನ್‌ನಲ್ಲಿ ಖರೀದಿ ಮಾಡುವುದರಿಂದ ಅನೇಕ ವಿನ್ಯಾಸಗಳ ಬ್ಯಾಗ್‌ಗಳು ಸಿಗುತ್ತವೆ. ಅಷ್ಟೇ ಅಲ್ಲದೆ, ಬ್ರ್ಯಾಂಡೆಡ್ ಬ್ಯಾಗ್‌ಗಳು ಸಿಗುತ್ತವೆ. ಅಷ್ಟೇ ಅಲ್ಲದೆ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದರಿಂದ ಅನೇಕ ಸಂದರ್ಭದಲ್ಲಿ ರಿಯಾಯಿತಿ ದೊರೆಯುತ್ತದೆ.
ಟ್ರಾವೆಲ್ ಲ್ಯಾಪ್‌ಟಾಪ್ ಕೇಸ್ ಬ್ಯಾಗ್
ಈ ಬ್ಯಾಗ್‌ಗಳ ವಿನ್ಯಾಸ ಲ್ಯಾಪ್ ಟಾಪ್ ಬ್ಯಾಗ್ ತರಹವೇ ಇದ್ದು, ಇದರಲ್ಲಿ ಲ್ಯಾಪ್‌ಟಾಪ್, ಅಂಗಿ, ನೀರು, ಕ್ಯಾಮರಾ, ವಯರ್‌ಗಳು ಸೇರಿದಂತೆ ಇನ್ನಿತರ ವಸ್ತು ಸಾಗಿಸಬಹುದು. ಇತ್ತೀಚಿನ ದಿನಗಳಲ್ಲಿ ಸೂಟ್‌ಕೇಸ್ ಉಪಯೋಗ ಕಡಿಮೆಯಾದರೂ, ಇದರ ಬಳಕೆ ಇನ್ನೂ ಇದೆ. ಸಾಮಾನ್ಯವಾಗಿ ಸೂಟ್ ಕೇಸ್‌ನಲ್ಲಿ ವಿಶಾಲ ಶಾಗವಿದ್ದು, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಂಡೊಯ್ಯಬಹುದು. ಸೂಟ್ ಕೇಸ್‌ನಲ್ಲಿ ವಿವಿಧ ಕಂಪೆನಿಯ ಸೂಟ್‌ಕೇಸ್ ಇದೆ. ಅಲ್ಲದೆ, ಗಾತ್ರದಲ್ಲಿಯೂ ವಿವಿಧ ವಿನ್ಯಾಸವಿದೆ. ಇದರೊಡನೆ ರಗ್ ಸ್ಟೋರೇಜ್ ಬ್ಯಾಗ್ ಉಪಯೋಗ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.