ವಿಷಾಹಾರ ಸೇವನೆ : ನೋಯ್ಡಾ ಶಾಲೆಯ 150 ವಿದ್ಯಾರ್ಥಿಗಳು ಅಸ್ವಸ್ಥ
Team Udayavani, Apr 6, 2018, 4:47 PM IST
ನೋಯ್ಡಾ : ಇಲ್ಲಿನ ಪ್ರತಿಷ್ಠಿತ ಸ್ಟೆಪ್ ಬೈ ಸ್ಟೆಪ್ ಶಾಲೆಯ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಊಟಮಾಡಿದ ಬಳಿಕ 150 ವಿದ್ಯಾರ್ಥಿಗಳು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಘಟನೆ ವರದಿಯಾಗಿದೆ.
ಮಕ್ಕಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿರುವುದನ್ನು ಶಂಕಿಸಲಾಗಿದೆ.ಆದರೆ ಶಾಲಾ ಆಡಳಿತದವರು ಘಟನೆಯ ಬಗ್ಗೆ ತನಿಖೆ ನಡೆಸಲು ಬಂದ ಪೊಲೀಸರನ್ನು ಒಳಗೆ ಪ್ರವೇಶಿಸಲು ಬಿಡದಿರುವುದು ಹೆತ್ತವರ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳಿಗೆ ನೀಡಲಾಗಿದ್ದ ಪರೋಠ ಮತ್ತು ತರಕಾರಿ ಸಾಂಬಾರ್ ವಿಷಯುಕ್ತವಾಗಿದ್ದ ಕಾರಣ ಅದನ್ನು ಸೇವಿಸದ ಮಕ್ಕಳು ವಾಂತಿ ಮಾಡಿಕೊಂಡರು, ಹಲವರು ಹೊಟ್ಟೆ ನೋವಿಗೆ ಗುರಿಯಾದರು.
ವಿಷಯ ತಿಳಿದು ತನಿಖೆಗಾಗಿ ನೋಯ್ಡಾ ನಗರದ ಮ್ಯಾಜಿಸ್ಟ್ರೇಟರು ಶಾಲೆಗೆ ಹೋದಾಗ ಅಲ್ಲಿನ ಗೇಟನ್ನು ಮುಚ್ಚಲಾಗಿತ್ತು ಎಂದು ಗೌತಮ್ ಬುದ್ಧ ನಗರದ ಪೊಲೀಸ್ ಠಾಣಾಧಿಕಾರಿ ಪಿಯೂಷ್ ಸಿಂಗ್ ಹೇಳಿದರು. ಶಾಲಾ ಮಾಲಕನಿಗೆ ಪ್ರಭಾವೀ ರಾಜಕೀಯ ಮುಖಂಡರೊಂದಿಗೆ ಉತ್ತಮ ಸಂಬಂಧವಿರುವುದರಿಂದ ಘಟನೆಯ ಬಗ್ಗೆ ತನಿಖೆ ನಡೆಯುವ ಸಾಧ್ಯತೆಗಳು ಇಲ್ಲವೆಂದು ಜನರಲ್ಲಿ ಶಂಕೆ ಮೂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.