ಸಾವಿರ ದಿನದ ಧರಣಿಗೀಗ ಫಲ ಸಿಗುವ ಲಕ್ಷಣ
Team Udayavani, Apr 6, 2018, 4:50 PM IST
ಸೇಡಂ: ತಮ್ಮ ಜಮೀನಿಗೆ ಸೂಕ್ತ ಬೆಲೆ ಒದಗಿಸುವಂತೆ ಸತತ ಸಾವಿರ ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರಿಗೆ ಕೊನೆಗೂ ಚುನಾವಣೆ ಹತ್ತಿರ ಬಂದಾಗ ನ್ಯಾಯ ಸಿಗುವ ಲಕ್ಷಣಗಳು ಗೋಚರಿಸಿವೆ.
ತಾಲೂಕಿನ ಹಂಗನಹಳ್ಳಿ ಮತ್ತು ನೃಪತುಂಗ ನಗರದ ರೈತರು ಮಾಜಿ ಕಾರ್ಮಿಕ ಖಾತೆ ಸಚಿವ ಎಸ್.ಕೆ. ಕಾಂತಾ ನೇತೃತ್ವದಲ್ಲಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಎದುರು ನ್ಯಾಯಕ್ಕಾಗಿ ನಡೆಸಿದ ಪ್ರತಿಭಟನಾ ಬಂಡಿಗೆ ಚುನಾವಣೆ ಬಂದಾಗ ಚುರುಕು ಸಿಕ್ಕಂತಾಗಿದೆ.
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಎಸ್.ಕೆ. ಕಾಂತಾ ಮತ್ತು ಕೆಲ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ಕರೆಯಿಸಿ ಎರಡು ತಿಂಗಳಲ್ಲಿ ಕಾನೂನು ಸಲಹೆ ಮತ್ತು ಕಂದಾಯ ಇಲಾಖೆ ನೆರವಿನೊಂದಿಗೆ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಲಿಖಿತ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳ ಖಚಿತ ಆದೇಶದಿಂದ ತುಸು ಚೇತರಿಕೆ ಕಂಡ ರೈತರು, ಕೂಡಲೇ ನ್ಯಾಯ ದೊರಕಿಸಿ ಕೊಡುವಂತೆ ಅಂಗಲಾಚಿದ್ದಾರೆ. ಸಾವಿರ ದಿನಗಳ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ ಎಂದು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಏನಿದು?: ತಾಲೂಕಿನ ಮಳಖೇಡ ಗ್ರಾಮದ ಬಿರ್ಲಾ ಒಡೆತನದ ರಾಜಶ್ರೀ ಸಿಮೆಂಟ್ ಕಾರ್ಖಾನೆ ಸರ್ಕಾರದ
ಗೈರಾಣಿ ಭೂಮಿಗೆ 8.5 ಲಕ್ಷ ರೂ. ದರ ನೀಡಿದೆ. ಆದರೆ ರೈತರ ಸುಸಜ್ಜಿತ, ಬೆಳೆ ನೀಡುವ ಭೂಮಿಗೆ ಕೇವಲ 3.5 ಲಕ್ಷ ರೂ. ನೀಡಿ ಒಂದು ಕಣ್ಣಿಗೆ ಸುಣ್ಣ, ಮತ್ತೂಂದು ಕಣ್ಣಿಗೆ ಬೆಣ್ಣೆ ಒರೆಸುವ ಯತ್ನ ಮಾಡಿತ್ತು. ಈ ರೀತಿಯ ಧೋರಣೆ ಖಂಡಿಸಿ ಸತತ ಸಾವಿರ ದಿನಗಳಿಂದ ಮಾಜಿ ಕಾರ್ಮಿಕ ಖಾತೆ ಸಚಿವ ಎಸ್.ಕೆ. ಕಾಂತಾ ನೇತೃತ್ವದಲ್ಲಿ ರೈತರು ಅನಿರ್ದಿಷ್ಠಾವ ಧಿ ಧರಣಿ ಕೈಗೊಂಡಿದ್ದರು.
ಶಾಂತಿಯುತ ಧರಣಿ ಕೆಲ ಬಾರಿ ಕ್ರಾಂತಿಕಾರಿ ತಿರುವು ಪಡೆದುಕೊಂಡಿತ್ತು. ಸೇಡಂ ಬಂದ್, ರಸ್ತೆ ತಡೆಯಂತಹ
ಚಳವಳಿ ನಡೆದಿದ್ದವು. ಧರಣಿಯಲ್ಲಿ ಕುಳಿತ ಮೂವರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇಷ್ಟಾದರೂ ಸಹ ಕೇವಲ ಭರವಸೆಗಳು ದೊರೆತವೇ ವಿನಃ ಪರಿಹಾರ ಕಂಡಿರಲಿಲ್ಲ.
‘ಉದಯವಾಣಿ’ ಎಫೆಕ್ಟ್: ರೈತರಿಗಾಗುತ್ತಿರುವ ಅನ್ಯಾಯದ ಕುರಿತು ಧ್ವನಿ ಎತ್ತಿದ್ದ ‘ಉದಯವಾಣಿ’ ಕುರಿತು ಸಚಿವ ‘ಶರಣಪ್ರಕಾಶ ವಿರುದ್ಧ ಸಮರಕ್ಕೆ ತೊಡೆ ತಟ್ಟಿದ 80 ರೈತರು’ ತಲೆಬರಹದಡಿ ರೈತರು ಚುನಾವಣೆಗೆ ಸಿದ್ಧರಾಗಿರುವ ವಿಷಯ ಪ್ರಕಟಿಸಿತ್ತು.
ಸಾವಿರ ವರ್ಷಗಳ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಅನೇಕ ಬಾರಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಆದರೆ ರೈತರಿಗೆ ಸಮಯ ಒದಗಿಸಲಾಗಿರಲಿಲ್ಲ. ಈಗ ಚರ್ಚೆ ನಡೆದಿದೆ. ಕೂಡಲೇ ನ್ಯಾಯ ದೊರೆಯುವ ಭರವಸೆ ನನ್ನಲ್ಲೂ ಇದೆ.
ಡಾ| ಶರಣಪ್ರಕಾಶ ಪಾಟೀಲ,
ಜಿಲ್ಲಾ ಉಸ್ತುವಾರಿ ಸಚಿವ
ಸಮಸ್ಯೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂಧಿ ಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆದೇಶ ನೀಡಲು ಬರುವುದಿಲ್ಲ. ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿ ಭರವಸೆ ಮೂಡಿಸಿದ್ದಾರೆ. ಸಾವಿರ ದಿನಗಳ ಹೋರಾಟಕ್ಕೆ ಒಂದು ಹಂತದ ಭರವಸೆ ಸಿಕ್ಕಿದೆ. ಸರ್ಕಾರದ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಒಳ್ಳೆಯ ಅ ಧಿಕಾರಿಯಾಗಿದ್ದು, ಕೂಡಲೇ ನ್ಯಾಯ ದೊರಕಿಸಿಕೊಡುವ ಭರವಸೆ ಇದೆ.
ಎಸ್.ಕೆ. ಕಾಂತಾ, ಮಾಜಿ ಕಾರ್ಮಿಕ ಖಾತೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.