ಬಿಜೆಪಿ ಎಲ್‌ಇಡಿ ಪ್ರಚಾರ ವಾಹನಗಳಿಗೆ ಚಾಲನೆ
Team Udayavani, Apr 7, 2018, 7:00 AM IST
ಬೆಂಗಳೂರು: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುವ ಜತೆಗೆ ಜನರ ಸಲಹೆ, ಅಭಿಪ್ರಾಯವನ್ನೂ ಸಂಗ್ರಹಿಸುವ ಹೈಟೆಕ್ ಎಲ್‌ಇಡಿ ಪ್ರಚಾರ ವಾಹನಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಚಾಲನೆ
ನೀಡಿದರು.
ಮಲ್ಲೇಶ್ವರದ ವೈಯಾಲಿಕಾವಲ್ ಮೈದಾನದಲ್ಲಿ ಎಲ್‌ಇಡಿ ಪ್ರಚಾರ ವಾಹನ ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾ
ಡಿದ ಅವರು, ರಾಜ್ಯ 224 ವಿಧಾನಸಭಾ ಕ್ಷೇತ್ರಗಳಿಗೂ ಎಲ್‌ಇಡಿ ಪ್ರಚಾರ ವಾಹನಗಳು ತೆರಳಲಿದ್ದು, ನಿತ್ಯ 10 ಹಳ್ಳಿಗಳಲ್ಲಿ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಲಿದೆ. ಏ.14ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ. ಹಾಗಾಗಿ ಹೈಟೆಕ್ ವಿಡಿಯೋ ರಥಗಳಲ್ಲಿ ಮೂರು ವಿಡಿಯೋ ಪ್ರದರ್ಶನದ ಜತೆಗೆ ಸಲಹೆ ಸಂಗ್ರಹಕ್ಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ವಾಟ್ಸ್‌ಅಪ್,
ವೆಬ್‌ಸೈಟ್‌ನಲ್ಲೂ ಸಲಹೆ, ಅಭಿಪ್ರಾಯ ತಿಳಿಸಬಹುದಾಗಿದೆ ಎಂದರು. ಈಗಾಗಲೇ 200 ವಿಧಾನಸಭಾ ಕ್ಷೇತ್ರಗಳಲ್ಲಿಪ್ರಣಾಳಿಕೆಗೆಅಳವಡಿಸಬೇಕಾದ ಅಂಶಗಳ ಬಗ್ಗೆ ವ್ಯಾಪಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದೀಗ ಎಲ್‌ಇಡಿ ಪ್ರಚಾರ
ವಾಹನಗಳ ಮೂಲಕ “ನವಕರ್ನಾಟಕ ಜನಪರಶಕ್ತಿ’ ಅಭಿಯಾನದಡಿ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು. ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಕ್ತಾರ ಡಾ.ವಾಮನಾಚಾರ್ಯ
ಉಪಸ್ಥಿತರಿದ್ದರು.
ಹೈಟೆಕ್ ವಾಹನ
100ಕ್ಕೂ ಹೆಚ್ಚು ಎಲ್‌ಇಡಿ ಪ್ರಚಾರ ವಾಹನಗಳು ಶುಕ್ರವಾರದಿಂದಲೇ ಪ್ರಚಾರಕ್ಕೆ ನಿಯೋಜನೆಗೊಂಡಿವೆ. ಪ್ರತಿ ವಾಹನದ ಹೊರಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆಯಿದ್ದು, ಬಿಜೆಪಿ ಕುರಿತು ವಿಡಿಯೋ ಪ್ರಸಾರವಾಗುತ್ತಿರುತ್ತದೆ. ಜತೆಗೆ ನವಕರ್ನಾಟಕ ಜನಪರಶಕ್ತಿ ಅಭಿಪ್ರಾಯದಡಿ ಇಡಲಾದ ಪೆಟ್ಟಿಗೆಗೆ ಜನರು ಅಭಿಪ್ರಾಯ, ಸಲಹೆ ಸಲ್ಲಿಸಬಹುದು. ಟೋಲ್ ಫ್ರಿ ಸಂಖ್ಯೆ 6359 150 150ಗೆ ಕರೆ ಮಾಡಿಯೂ ಸಲಹೆ ನೀಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.