ಅಂತರಿಕ್ಷದಲ್ಲಿ ಹೈಫೈ ಹೋಟೆಲ್
Team Udayavani, Apr 7, 2018, 10:10 AM IST
ಹೊಸದಿಲ್ಲಿ: ಕಳೆದೆರಡು ವರ್ಷಗಳ ಹಿಂದೆ, ಖಾಸಗಿ ಸಂಸ್ಥೆಯೊಂದರಿಂದ ಮಂಗಳ ಗ್ರಹಕ್ಕೆ ಜನರನ್ನು ಕಳಿಸುವ ಯೋಜನೆ ಪ್ರಸ್ತಾಪವಾಯಿತು. ಇತ್ತೀಚೆಗೆ, ಸೂರ್ಯನ ಅಧ್ಯಯನಕ್ಕೆ ಸಾಗುವ ರಾಕೆಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಲು ಜನರಿಗೆ ನಾಸಾದಿಂದ ಆಹ್ವಾನ ಬಂದಿದ್ದಾಯ್ತು. ಇದೀಗ, ಓರಿಯನ್ ಸ್ಪೇಸ್ ಕಂಪೆನಿ ಎಂಬ ಸಂಸ್ಥೆ, ಅಂತರಿಕ್ಷದಲ್ಲಿ ಐಶಾರಾಮಿ ಹೊಟೇಲೊಂದನ್ನು ನಿರ್ಮಿಸುವ ಕನಸಿಗೆ ಕೈ ಹಾಕಿದೆ. ಈ ಹೊಟೇಲ್‌ಗೆ ‘ಅರೋರಾ ಸ್ಟೇಷನ್’ ಎಂದು ಹೆಸರಿಟ್ಟಿದೆ. ಭೂಮಿಯಲ್ಲೇ ನಿರ್ಮಾಣಗೊಂಡು, ಅಂತರಿಕ್ಷಕ್ಕೆ 2021ರಲ್ಲಿ ನೆಗೆಯಲಿರುವ ಈ ಹೊಟೇಲ್, 2022ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.
ಏನಿದರ ವಿಶೇಷ? ಕಂಪೆನಿ ಪ್ರಕಾರ, ಪ್ರತಿಷ್ಠಿತ ರಿಟ್ಜ್ -ಕಾರ್ಲ್ಟನ್ ಹಾಗೂ ಮ್ಯಾಂಡ್ರಿಯನ್ ಓರಿಯಂಟಲ್ ಸಂಸ್ಥೆಗಳ ಹೊಟೇಲ್‌ಗಳಿಗೂ ಮೀರಿದ ಐಶಾರಾಮ ಇರಲಿದೆ. ಪ್ರತಿ 90 ನಿಮಿಷಕ್ಕೆ ಭೂ ಮಂಡಲವನ್ನು ಒಂದು ಪ್ರದಕ್ಷಿಣೆ ಹಾಕಲಿದೆ ಈ ಹೊಟೇಲ್. ಹೀಗಾಗಿ, ಇದರಲ್ಲಿರುವ ಗ್ರಾಹಕರಿಗೆ ನಿತ್ಯ 16 ಸೂರ್ಯೋದಯಗಳನ್ನು ನೋಡುವ ಅಪೂರ್ವ ಅವಕಾಶ ಸಿಗಲಿದೆ. ಈ ಹೊಟೇಲ್‌ಗೆ ಹೋಗಬಯಸುವವರು, ಒಂದು ತಿಂಗಳ ಕಾಲ ಆನ್ ಲೈನ್ ಮತ್ತು 4 ವಾರಗಳ ಕಾಲ ಹೂಸ್ಟನ್, ಟೆಕ್ಸಾಸ್‌ನಲ್ಲಿ ತರಬೇತಿ ಪಡೆಯಬೇಕು. ಅಂದಹಾಗೆ, ಪ್ರತಿಯೊಬ್ಬ ಗ್ರಾಹಕ ಇದಕ್ಕಾಗಿ 64 ಕೋಟಿ ರೂ. ತೆರಬೇಕಿದೆ! ಪ್ರಯಾಣ ಪೂರ್ತಿಯಾದ ಮೇಲೆ ಈ ಹಣ ಸಂಪೂರ್ಣವಾಗಿ ಹಿಂದಿರುಗಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.