ಬಪ್ಪನಾಡು ದೇವಿಗೆ ಲಕ್ಷ  ಮಲ್ಲಿಗೆ ಚೆಂಡು!


Team Udayavani, Apr 7, 2018, 9:54 AM IST

7-April-1.jpg

ಬಪ್ಪನಾಡು: ಇಲ್ಲಿನ ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಡೋಲಿನಷ್ಟೇ ಪ್ರಾಮುಖ್ಯತೆ ಹಗಲು ರಥೋತ್ಸವದ ದಿನ ರಾತ್ರಿ ನಡೆ ಯುವ ಶಯನೋತ್ಸವಕ್ಕೂ ಇದೆ.

ಶಯನೋತ್ಸವ ಅಂದರೆ ದೇವರಿಗೆ ಹರಕೆ ರೂಪದಲ್ಲಿ ಮಲ್ಲಿಗೆ ಹೂ ಸಮರ್ಪಿಸುವ ಸೇವೆ. ಇದು ಒಂಬತ್ತು ಮಾಗಣೆ ವ್ಯಾಪ್ತಿಯ ದೇವಸ್ಥಾನವಾಗಿದ್ದರೂ 32 ಗ್ರಾಮಗಳಿಂದ ಮಾತ್ರವಲ್ಲದೆ ಕಾಸರಗೋಡು, ಉಡುಪಿ ಮತ್ತು ದ.ಕ. ಜಿಲ್ಲೆಯ ಹೆಚ್ಚಿನ ಭಕ್ತರು ದೇವರ ಶಯನಕ್ಕೆ ಮಲ್ಲಿಗೆ ಹೂ ಸಮರ್ಪಿಸುತ್ತಾರೆ.

ದಾಖಲೆ ಮಲ್ಲಿಗೆ
ಶುಕ್ರವಾರ ನಡೆದ ಬಪ್ಪನಾಡು ಶಯನೋತ್ಸವಕ್ಕೆ ಸುಮಾರು 80,000ದಿಂದ 1 ಲಕ್ಷ ಚೆಂಡುಗಳಷ್ಟು ಮಲ್ಲಿಗೆ ಅರ್ಪಿತವಾಗಿದೆ ಎಂಬುದು ವಿಶೇಷ. ಇದು ಸಾರ್ವತ್ರಿಕ ದಾಖಲೆ ಎಂಬುದು ಭಕ್ತರ ಅಭಿಪ್ರಾಯ. ಒಂದು ಚೆಂಡು ಮಲ್ಲಿಗೆ ದರ ಸುಮಾರು 70 ರಿಂದ 80 ರೂ. ಗಳಿತ್ತು. ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬಂದ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯ ಹೊರಭಾಗದ ಸುತ್ತು ಪೌಳಿಯ ಸುತ್ತ ಮಲ್ಲಿಗೆಯಲ್ಲಿ ಇಡಲಾಗಿತ್ತು. 

ಹೀಗಾಗಿ ದೇವ ಸ್ಥಾನ ಆವರಣದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ಹರಕೆ ರೂಪದಲ್ಲಿ ಹೂ ನೀಡಿದವರಿಗೆ ದೇವಸ್ಥಾನದ ವತಿಯಿಂದ ರಶೀದಿ ನೀಡಲಾಯಿತು. ಅದನ್ನು ಶುಕ್ರ ವಾರ ದೇವಸ್ಥಾನದಲ್ಲಿ ತೋರಿಸಿ, ಮಲ್ಲಿಗೆ ಪ್ರಸಾದವನ್ನು ಭಕ್ತರು ಪಡೆದುಕೊಂಡರು. ಇಲ್ಲಿ ಸ್ವೀಕರಿಸುವ ಮಲ್ಲಿಗೆ ಎಷ್ಟು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ, ಅಂದಾಜು ಹಾಗೂ ಪ್ರತೀ ವರ್ಷದ ಮಲ್ಲಿಗೆಯ ಆಗಮನದ ಹಿನ್ನೆಲೆಯಿಂದ ಲೆಕ್ಕ ಮಾಡಲಾಗು ತ್ತದೆ. ಇದರಂತೆ ಸುಮಾರು ಒಂದು ಲಕ್ಷ ಚೆಂಡು ಮಲ್ಲಿಗೆ ಸಮರ್ಪಿತವಾಗಿರಬಹುದು ಎಂಬುದು ಸಾರ್ವತ್ರಿಕ ಅನಿಸಿಕೆ.

ಈ ಬಾರಿ ಅಧಿಕ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಶಯನೋತ್ಸವಕ್ಕೆ ಸಲ್ಲಿಕೆಯಾಗುವ ಮಲ್ಲಿಗೆ ಹೂವಿಗೆ ವಿಶೇಷ ಮಾನ್ಯತೆ ಇದೆ. ಹೀಗಾಗಿ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಮಲ್ಲಿಗೆ ಹೂವನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ. ಈ ಬಾರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಬಂದಿದೆ.
– ಮನೋಹರ್‌ ಶೆಟ್ಟಿ,
ಕ್ಷೇತ್ರದ ಮ್ಯಾನೇಜಿಂಗ್‌ ಟ್ರಸ್ಟಿ

50ಕ್ಕೂ ಅಧಿಕ ಮಾರಾಟಗಾರರು!
ಮೂಲ್ಕಿಯಿಂದ ಆರಂಭವಾಗಿ ಮುಖ್ಯದ್ವಾರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 50ಕ್ಕೂ ಮಿಕ್ಕಿ ಮಲ್ಲಿಗೆ ಮಾರಾಟಗಾರರು ಗುರುವಾರ ಮಧ್ಯಾಹ್ನದಿಂದಲೇ ಮಲ್ಲಿಗೆ ಮಾರಾಟದಲ್ಲಿ ನಿರತರಾಗಿದ್ದರು. ಉಡುಪಿ, ಕಟಪಾಡಿ, ಪಡುಬಿದ್ರಿ, ಮೂಲ್ಕಿ, ಕಾರ್ನಾಡು, ಹಳೆಯಂಗಡಿ, ಸುರತ್ಕಲ್‌, ಮಂಗಳೂರಿನ ಹೂವಿನ ವ್ಯಾಪಾರಿಗಳು ಭಾಗವಹಿಸಿದ್ದರು. ಬಾಳೆ ಹಗ್ಗದಲ್ಲಿ ನೇಯ್ದ ಮಲ್ಲಿಗೆ ಮಾರಾಟಕ್ಕಷ್ಟೇ ಸೀಮಿತ ಮಾಡಲಾಗಿತು.
– ವೇದವ್ಯಾಸ್‌, ಹೂವಿನ ಮಾರಾಟಗಾರರು

ಲೆಕ್ಕ ಇಲ್ಲ
ಈ ಬಾರಿಯ ಶಯನೋತ್ಸವದಲ್ಲಿ ಹೆಚ್ಚಿನ ಮಲ್ಲಿಗೆ ಬಂದಿದೆ. ಆದರೆ, ಎಷ್ಟು ಬಂದಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತಿಲ್ಲ. ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಶಯನೋತ್ಸವದ ಸಂದರ್ಭಕ್ಕಿಂತಲೂ ಅಧಿಕ ಮಲ್ಲಿಗೆ ಬಂದಿದೆ.
– ಜಯಮ್ಮಾ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ

ದೇವಾಲಯವೆಲ್ಲ ಮಲ್ಲಿಗೆಯ ಸುವಾಸನೆ..!
ಶ್ರೀ ದೇವಿಯ ಶಯನಕ್ಕೆಂದು ಭಕ್ತರು ದೇವರಿಗೆ ಅರ್ಪಿಸುವ ಮಲ್ಲಿಗೆ ಹೂವನ್ನು ಇಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಗುರುವಾರ ಸಂಜೆಯಿಂದ ಭಕ್ತರು ಶ್ರೀ ದೇವರಿಗೆ ಮಲ್ಲಿಗೆ ಹೂ ಅರ್ಪಿಸಿದರು. ಭಾರೀ ಪ್ರಮಾಣದ ಮಲ್ಲಿಗೆ ಇದ್ದ ಹಿನ್ನೆಲೆಯಲ್ಲಿ ದೇವಾಲಯವೆಲ್ಲ ಘಮ ಘಮ ಸುವಾಸನೆಯಿಂದ ಮನ ತಣಿಸಿತು. 

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.