2 ಲಕ್ಷಕ್ಕೆ ತನ್ನ ಗಂಡು ಮಗು ಮಾರಿದ ಮಹಿಳೆ ಸಹಿತ ನಾಲ್ವರು ಅರೆಸ್ಟ್
Team Udayavani, Apr 7, 2018, 11:31 AM IST
ಪಣಜಿ : ತನ್ನ 11 ತಿಂಗಳ ಗಂಡು ಮಗುವನ್ನು ಎರಡು ಲಕ್ಷ ರೂ.ಗಳಿಗೆ ಮಾರಿದ 32ರ ಹರೆಯದ ಮಹಿಳೆಯನ್ನು ಗೋವೆಯ ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಮಾರಿದ ಮಹಿಳೆಯನ್ನು ಶೈಲಾ ಪಾಟೀಲ್ ಎಂದು ಗುರುತಿಸಲಾಗಿದೆ. ಮಗುವನ್ನು ಖರೀದಿಸಿದ ಅಮ್ ಮೋರ್ಜೆ 32, ಶೈಲಾ ಪಾಟೀಲಳ ಸ್ನೇಹಿತ ಯೋಗೇಶ್ ಗೊಸಾವಿ 42 ಮತ್ತು ಅನಂತ ದಾಮಾಜಿ 34 ಎಂಬವರನ್ನು ಕೂಡ ಪೊಲೀಸರು ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.
ಶೈಲಾ ಪಾಟೀಲಳ ಪತಿ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ದೂರು ನೀಡಿದ್ದರು. ತಾನು ಊರಿಂದ ದೂರ ಹೋಗಿದ್ದಾಗ ಪತ್ನಿ ಈ ಕೃತ್ಯ ಎಸಗಿದ್ದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ. ಅರೋಪಿಗಳೆಲ್ಲರೂ ಪೆರ್ನೆ ಪ್ರದೇಶದ ನಿವಾಸಿಗಳಾಗಿದ್ದಾರೆ.
ಹಣದ ಆವಶ್ಯಕತೆ ಇದ್ದ ಶೈಲಾ ಪಾಟೀಲ್ ತನ್ನ ಪತಿಗೆ ಗೊತ್ತಾಗದಂತೆ ತನ್ನ 11 ತಿಂಗಳ ಗಂಡು ಮಗುವನ್ನು ಮಾರಿದ್ದಳು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೋಂಡಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಮದಕಾಯಿಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.