ಲಸಿಕೆಗಳು: ಹೊಸ ಬೆಳವಣಿಗೆಗಳೇನು?


Team Udayavani, Apr 8, 2018, 6:00 AM IST

Vaccines–0707.jpg

ಹಿಂದಿನ ವಾರದಿಂದ – ಡಿಪಿಟಿ ಮತ್ತು ಹೆಪಟೈಟಿಸ್‌ ಬಿ 1, 2 ಮತ್ತು 3ರ ಜಾಗದಲ್ಲಿ ಪೆಂಟಾವೇಲೆಂಟ್‌ ಲಸಿಕೆಯನ್ನು ಪರಿಚಯಿಸಲಾಗಿದೆ. 
– ಆರಂಭಿಕವಾಗಿ ರೊಟಾವೈರಸ್‌ ಲಸಿಕೆಯನ್ನು 4 ರಾಜ್ಯಗಳಲ್ಲಿ ಪರಿಚಯಿಸಲಾಗಿದೆ – ಆಂಧ್ರಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಒಡಿಶಾ.
– ಐಪಿವಿ – ಆಯ್ದ ರಾಜ್ಯಗಳಲ್ಲಿ ಆಂಶಿಕ ಡೋಸ್‌ (0.1 ಎಂಎಲ್‌) ಅನ್ನು ಇಂಟ್ರಾಡರ್ಮಲ್‌ ಆಗಿ 6 ವಾರ ಮತ್ತು 14 ವಾರಗಳಲ್ಲಿ ನೀಡುವುದನ್ನು ಪರಿಚಯಿಸಲಾಗಿದೆ.
– ಯುಐಪಿ ವೇಳಾಪಟ್ಟಿಯಲ್ಲಿ ಮೀಸಲ್ಸ್‌ ಲಸಿಕೆಯ ಜಾಗದಲ್ಲಿ ಎಂಆರ್‌ ಲಸಿಕೆ ನೀಡಿಕೆಯನ್ನು ಶಿಫಾರಸು ಮಾಡಲಾಗಿದೆ ಮತ್ತು ಅನುಮೋದಿಸಲಾಗಿದೆ. ಮೊದಲ ಡೋಸ್‌ ನೀಡಿಕೆ 12 ತಿಂಗಳುಗಳಿಗಿಂತ ಹೆಚ್ಚು ವಿಳಂಬವಾಗಿದ್ದಲ್ಲಿ 2 ಎಂಆರ್‌ ಡೋಸ್‌ಗಳ ನಡುವೆ 1 ತಿಂಗಳು ಅಂತರವಿರಬೇಕು.
– ಜೆಇ ಲಸಿಕೆಯನ್ನು ಜಪಾನೀಸ್‌ ಎನ್‌ಸೆಫ‌ಲೈಟಿಸ್‌ ಸೋಂಕು ಇರುವ ಆಯ್ದ ರಾಜ್ಯಗಳಲ್ಲಿ ಪರಿ ಚಯಿಸಲಾಗಿದೆ. ಮೊದಲ ಡೋಸ್‌ ನೀಡಿಕೆ 12 ತಿಂಗಳುಗಳಿಗಿಂತ ಹೆಚ್ಚು ವಿಳಂಬವಾಗಿದ್ದಲ್ಲಿ 2 ಜೆಇ ಡೋಸ್‌ಗಳ ನಡುವೆ 3 ತಿಂಗಳು ಅಂತರವಿರಬೇಕು.

ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯು ಪ್ರತಿಸ್ಪಂದಿಸುವ ಮೂಲಕ ಆಯಾ ಕಾಯಿಲೆಯ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬೆಳೆಯಿಸಿಕೊಳ್ಳುವಂತೆ ಎಲ್ಲ ಲಸಿಕೆಗಳು ಪ್ರೇರೇಪಿಸುತ್ತವೆ. ಆದ್ದರಿಂದ ರೋಗ ನಿರೋಧಕ ಶಕ್ತಿಯ ಪ್ರತಿಕ್ರಿಯೆಯಾಗಿ ಸ್ಥಳೀಯ ಪ್ರತಿಸ್ಪಂದನೆ, ಜ್ವರ ಮತ್ತು ಕೆಲವು ದೈಹಿಕ ಚಿಹ್ನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ; ಇದಲ್ಲದೆ ಕೆಲವು ಲಸಿಕೆಗಳ ಉಪಾಂಗಗಳು (ಸ್ಥಿರಕಾರಿಗಳು ಅಥವಾ ಕಾಯ್ದಿಡುವ ವಸ್ತುಗಳು) ಕೂಡ ಪ್ರತಿಕ್ರಿಯೆಗೆ ಕಾರಣವಾಗುವುದುಂಟು. ಸ್ಥಳೀಯ ಪ್ರತಿಕ್ರಿಯೆಗಳಲ್ಲಿ ಇಂಜೆಕ್ಷನ್‌ ಚುಚ್ಚಿದ ಭಾಗದಲ್ಲಿ ನೋವು, ಬಾವು ಮತ್ತು/ ಅಥವಾ ಕೆಂಪಾಗುವುದು ಸೇರಿದ್ದು, ಇದು ಶೇ. 10ರಷ್ಟು ಲಸಿಕೆಗಳಿಗೆ ಪ್ರತಿಕ್ರಿಯೆಯಾಗಿ ಉಂಟಾಗುವುದು ನಿರೀಕ್ಷಿತ. ಬಿಸಿಜಿ ಇಂಜೆಕ್ಷನ್‌ ಒಂದು ನಿರ್ದಿಷ್ಟ ವಿಧವಾದ ಸ್ಥಳೀಯ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತದೆ; ಲಸಿಕೆ ನೀಡಿದ ಬಳಿಕ ಎರಡು ಅಥವಾ ಹೆಚ್ಚು ವಾರಗಳ ಬಳಿಕ ಇಂಜೆಕ್ಷನ್‌ ಚುಚ್ಚಿದ ಜಾಗ ಉಬ್ಬುತ್ತದೆ, ಆ ಬಳಿಕ ಅದು ಹುಣ್ಣಾಗಿ ಹಲವು ತಿಂಗಳುಗಳ ಬಳಿಕ ಗುಣವಾಗುತ್ತದಾದರೂ ಗಾಯದ ಗುರುತನ್ನು ಉಳಿಸುತ್ತದೆ. ತೀವ್ರ ತರಹದ ಪ್ರತಿಕ್ರಿಯೆಗಳು ಅಪರೂಪವಾಗಿದ್ದು, ಉಂಟಾದರೂ ಇಂಜೆಕ್ಷನ್‌ ಚುಚ್ಚಿದ ಬಳಿಕ ಅರ್ಧ ತಾಸಿನ ಒಳಗೆ ಉಂಟಾಗುತ್ತವೆ. ಹೀಗಾಗಿ ಇಂಜೆಕ್ಷನ್‌ ಪಡೆದ ಬಳಿಕ ಕನಿಷ್ಟ 30 ನಿಮಿಷಗಳ ಕಾಲ ಇಂಜೆಕ್ಷನ್‌ ನೀಡಿದಲ್ಲಿಯೇ (ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಕ್ಲಿನಿಕ್‌) ಉಳಿಯುವುದು ಉತ್ತಮ. ಜೀವ ರಕ್ಷಕ ಔಷಧಿಗಳಾದ ಅಡ್ರಿನಾಲಿನ್‌ ಇಂಜೆಕ್ಷನ್‌, ಹೈಡ್ರೊಕಾರ್ಟಿಸೋನ್‌ ಇಂಜೆಕ್ಷನ್‌, ಸಮರ್ಪಕ ಆಮ್ಲಜನಕ ಒದಗಣೆ ಸೌಲಭ್ಯಗಳು ಸದಾಕಾಲ ಇರುವ ಆರೋಗ್ಯ ಸೇವಾ ಕೇಂದ್ರಗಳಲ್ಲಿಯೇ ಲಸಿಕೆ ಹಾಕಿಸಿಕೊಳ್ಳುವುದು ವಿಹಿತ. ಮಗುವಿಗೆ ಪೆಂಟಾವೇಲೆಂಟ್‌ ಇಂಜೆ ಕ್ಷನ್‌ ನೀಡಿದ ಬಳಿಕ ಅದು ಯಾವ ರೀತಿಯ ಸಮಾಧಾನಕ್ಕೂ ಬಗ್ಗದೆ ಅಳಲಾರಂಭಿ ಸಿದರೆ ಮಗುವನ್ನು ವೈದ್ಯರ ನಿಗಾಕ್ಕಾಗಿ ಆಸ್ಪತ್ರೆಗೆ ದಾಖಲಿಸುವುದು ಸೂಕ್ತ. 

ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಲಸಿಕೆ ನೀಡುವುದು ಎಷ್ಟೇ ಪ್ರಾಮುಖ್ಯವಾಗಿದ್ದರೂ ತಾಯಿ ತನ್ನ ಮಗುವನ್ನು ನಿರೀಕ್ಷಿತ ತಿಂಗಳು ಅಥವಾ ವರ್ಷದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕರೆ ತಾರದೆ ಇರಬಹುದು. ಸರಿಯಾದ ವಯಸ್ಸಿನಲ್ಲಿ ಸರಿಯಾದ ಲಸಿಕೆಯನ್ನು ಹಾಕಿಸಿಕೊಳ್ಳುವುದು ಸದಾ ಉತ್ತಮ; ಆದರೆ 1ರಿಂದ 5 ವರ್ಷ ವಯೋಮಾನದ ಮಗು ಈ ಹಿಂದೆ ಯಾವ ಲಸಿಕೆಯನ್ನೂ ಹಾಕಿಸಿಕೊಳ್ಳದೆ ಇದ್ದರೆ, ಆಗ ಅಂತಹ ಮಗುವಿಗೆ ಬಿಸಿಜಿ, ಹೆಪಟೈಟಿಸ್‌ ಬಿ, ರೊಟಾ ವೈರಸ್‌ ಮತ್ತು ಪೋಲಿಯೋ ಲಸಿಕೆಗಳನ್ನು ಪಡೆಯುವುದಿಲ್ಲ. ಆದರೆ ಡಿಪಿಟಿ 1, ಒಪಿವಿ 1, ಎಂಆರ್‌1 (ಮತ್ತು ಜೆಇ ಸಾಂಕ್ರಾಮಿಕ ಇರುವ ಪ್ರಾಂತಗಳಲ್ಲಿ ಜೆಇ ಲಸಿಕೆ) ಮತ್ತು ವಿಟಮಿನ್‌ ಎಯ 2 ಮಿ. ಲೀ. ದ್ರಾವಣವನ್ನು ಹಾಗೂ ಒಂದು ತಿಂಗಳ ವಿರಾಮದ ಬಳಿಕ ಡಿಪಿಟಿ 2, ಒಪಿವಿ 2 ಮತ್ತು ಎಂಆರ್‌2ಗಳನ್ನು ಹಾಕಿಸಬೇಕು ಹಾಗೂ ಇನ್ನೊಂದು ತಿಂಗಳು ಬಿಟ್ಟು ಡಿಪಿಟಿ 3, ಒಪಿವಿ 3 ಹಾಕಿಸಬೇಕು. ಡಿಪಿಟಿ 3 ಮತ್ತು ಒಪಿವಿ 3ಗಳ ಅನಂತರ 6 ತಿಂಗಳುಗಳು ಕಳೆದ ಮೇಲೆ ಡಿಪಿಟಿ ಮತ್ತು ಒಪಿವಿಗಳ ಬೂಸ್ಟರ್‌ ಡೋಸ್‌ ಒದಗಿಸಬೇಕು. ಮಗುವಿಗೆ 5 ವರ್ಷ ವಯಸ್ಸಾಗುವ ತನಕ ಪ್ರತೀ 6 ತಿಂಗಳಿಗೊಮ್ಮೆ 2 ಮಿ. ಲೀ. ವಿಟಮಿನ್‌ ಎ ನೀಡಬೇಕು. 

ಬಿಸಿಜಿ, ಒಪಿವಿ ಮತ್ತು ಹೆಪಟೈಟಿಸ್‌ ಬಿ ಇಂಜೆಕ್ಷನ್‌ಗಳನ್ನು ಹೆರಿಗೆಯಾದ ಕೂಡಲೇ (24 ತಾಸುಗಳ ಒಳಗೆ) ನೀಡಬೇಕು. ಹೆಪಟೈಟಿಸ್‌ ಬಿಯ ಈ ಡೋಸ್‌ ಅನ್ನು ಶೂನ್ಯ ಡೋಸ್‌ ಎಂದು ಕರೆಯಲಾಗುತ್ತಿದ್ದು, ಇದು ತಾಯಿ ಹಾಗೂ ಕಲುಷಿತ ಸಲಕರಣೆಗಳಿಂದ ಕಾಯಿಲೆಯ ಪ್ರಸಾರವನ್ನು ತಡೆಯುತ್ತದೆ. ಬಿಸಿಜಿ ಇಂಜೆಕ್ಷನ್‌ ಅನ್ನು ಸಾಧ್ಯವಾದಷ್ಟು ಬೇಗನೆ ನೀಡಬೇಕು, ಆದರೆ ಒಂದು ವರ್ಷಕ್ಕಿಂತ ತಡವಾಗಿ ಅಲ್ಲ, ಏಕೆಂದರೆ ಒಂದು ವರ್ಷ ವಯಸ್ಸು ಪೂರ್ಣಗೊಳ್ಳುವ ಹೊತ್ತಿಗೆ ಬಹುತೇಕ ಮಕ್ಕಳು ನೈಸರ್ಗಿಕವಾಗಿ ಕ್ಷಯ ಸೋಂಕನ್ನು ಪಡೆದಿರುತ್ತಾರೆ. ಈ ಸೋಂಕು ಉಂಟಾದ ಬಳಿಕ ಬಿಸಿಜಿ ನೀಡಿದರೆ ಇಂಜೆಕ್ಷನ್‌ ಬಳಿಕ ತೀವ್ರತರಹದ ಪ್ರತಿಕ್ರಿಯೆ ಉಂಟಾಗುವ ಅಪಾಯವಿದೆ. ಮಗುವಿಗೆ ಒಂದು ವರ್ಷದ ಬಳಿಕ ಬಿಸಿಜಿ ಇಂಜೆಕ್ಷನ್‌ ನೀಡಬೇಕಿದ್ದರೆ ಮಗುವನ್ನು ಕ್ಷಯ ಸೋಂಕಿನ ಸ್ಥಿತಿಯನ್ನು ತಿಳಿಸುವ ಮಾಂಟೋಕ್ಸ್‌ ತಪಾಸಣೆಗೆ ಒಳಪಡಿಸಬೇಕು. ತಪಾಸಣೆಯ ಫ‌ಲಿತಾಂಶ ನೆಗೆಟಿವ್‌ ಆಗಿದ್ದರೆ ಆಗ ಮಗುವಿಗೆ 14 ವಯಸ್ಸಾಗುವ ವರೆಗೆ ಬಿಸಿಜಿ ಇಂಜೆಕ್ಷನ್‌ ನೀಡಬಹುದು. 

ಐದರಿಂದ ಏಳು ವಯಸ್ಸಿನೊಳಗಣ, ಇದುವರೆಗೆ ಯಾವ ಲಸಿಕೆಯನ್ನೂ ಪಡೆದಿಲ್ಲದ ಮಗುವಿಗೆ ಡಿಪಿಟಿ 1, ಡಿಪಿಟಿ 2, ಡಿಪಿಟಿ 3 ಇಂಜೆಕ್ಷನ್‌ಗಳನ್ನು ತಲಾ ಒಂದು ತಿಂಗಳು ಅಂತರದಲ್ಲಿ ನೀಡಬೇಕು ಹಾಗೂ ಡಿಪಿಟಿ 3 ಇಂಜೆಕ್ಷನ್‌ ಬಳಿಕ ಕನಿಷ್ಠ 6 ತಿಂಗಳುಗಳ ವಿರಾಮದ ಬಳಿಕ ಒಂದು ಬೂಸ್ಟರ್‌ ಡೋಸ್‌ ನೀಡಬೇಕು; ಇದನ್ನು 7 ವಯಸ್ಸಿನೊಳಗೆ ಮಾತ್ರ ನೀಡಬಹುದು. 

ಸೋಂಕು ರುಬೆಲ್ಲಾ ಕಾಯಿಲೆ (ಕಂಟೇಜಿಯಸ್‌ ರುಬೆಲ್ಲಾ ಸಿಂಡ್ರೋಮ್‌-ಸಿಆರ್‌ಎಸ್‌) ಸಾಮಾನ್ಯವಾಗಿ ಜರ್ಮನ್‌ ಮೀಸೆಲ್ಸ್‌ ಅಥವಾ ಸಿತಾಳೆ ಸಿಡುಬು, ಗೋರ, ನೀರು ಕೋಟ್ಲೆ ಎಂಬುದಾಗಿ ಕರೆಯಲ್ಪಡುತ್ತದೆ. ಇದು ಪ್ರತೀ ವರ್ಷ ಭಾರತದಲ್ಲಿ ಜನಿಸುವ 25,000 ಮಕ್ಕಳನ್ನು ಬಾಧಿಸುತ್ತದೆ ಎಂದು ಅಂದಾಜಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಮಹಿಳೆಗೆ ಗರ್ಭ ಧರಿಸಿದ ಆರಂಭಿಕ ಹಂತದಲ್ಲಿ ರುಬೆಲ್ಲಾ ಸೋಂಕು ಉಂಟಾದರೆ ಅಂತಹ ಮಹಿಳೆಗೆ ಜನಿಸುವ ಮಗು ಅಂಧತ್ವ, ಕಿವುಡು, ಹೃದಯ ವೈಕಲ್ಯಗಳು, ಮಂದಮತಿ, ಪಿತ್ತಕೋಶ ಮತ್ತು ಇತರ ಆಂತರಿಕ ಅಂಗಾಂಗ ವೈಕಲ್ಯಗಳನ್ನು ಹೊಂದಿರುವ ಅಪಾಯವಿದೆ. 9-12 ತಿಂಗಳುಗಳು ಮತ್ತು 16-24 ತಿಂಗಳುಗಳು ಅಥವಾ 15 ವರ್ಷ ವಯಸ್ಸಿಗಿಂತ ಮುನ್ನ ಒಂದು ತಿಂಗಳ ವಿರಾಮ ಸಹಿತ 2 ಡೋಸ್‌ ಎಂಆರ್‌ ಲಸಿಕೆ ಪಡೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಉಂಟಾಗುವ ಈ ಅಪಾಯವನ್ನು ಬಹಳ ಸುಲಭವಾಗಿ ನಿವಾರಿಸಿಕೊಳ್ಳಬಹುದಾಗಿದೆ. 

ಹೆತ್ತವರು ಅಥವಾ ಪಾಲಕರು ಸ್ವಇಚ್ಛೆಯಿಂದ ತಮ್ಮ ಮಕ್ಕಳಿಗೆ ಹಾಕಿಸಿಕೊಳ್ಳಬಹುದಾದ (ರಾಷ್ಟ್ರೀಯ ಲಸಿಕೆ ಯೋಜನೆಯಲ್ಲಿ ಒಳಗೊಳ್ಳದ) ಲಸಿಕೆಗಳಲ್ಲಿ ದಿ ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ (ಎಚ್‌ಪಿವಿ) ಲಸಿಕೆಯು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಬಹಳ ಮುಖ್ಯವಾದುದಾಗಿದೆ. 

ಎಚ್‌ಪಿವಿ -16 ಮತ್ತು -18 ಎಂಬ ಎರಡು ವೈರಸ್‌ ಪ್ರಭೇದಗಳು ಶೇ.80ರಿಂದ ಶೇ.85ರಷ್ಟು ಗರ್ಭಕೋಶ ಕ್ಯಾನ್ಸರ್‌ ಪ್ರಕರಣಗಳನ್ನು ಉಂಟು ಮಾಡುತ್ತವೆ. ಇದನ್ನು ತಡೆಯುವ ಎಚ್‌ಪಿವಿ ಲಸಿಕೆಗಳು ಲಭ್ಯವಿದ್ದು, 9ರಿಂದ 13ನೇ ವಯಸ್ಸಿನ ನಡುವೆ ಮಕ್ಕಳಿಗೆ ಹಾಕಿಸಿಕೊಳ್ಳಬಹುದಾಗಿದೆ. ಭಾರತದಲ್ಲಿ ಅಂದಾಜು 1.32 ಲಕ್ಷ ಹೊಸ ಗರ್ಭಕೋಶ ಕ್ಯಾನ್ಸರ್‌ ಪ್ರಕರಣಗಳು ಪ್ರತೀವರ್ಷ ಪತ್ತೆಯಾಗುತ್ತಿದ್ದು, ಸರಿಸುಮಾರು 75,000 ಮರಣಗಳು ಉಂಟಾಗುತ್ತಿವೆ. 

ಪ್ರಸ್ತುತ ದೇಶದಲ್ಲಿ ರಾಷ್ಟ್ರೀಯ ಲಸಿಕೆ ಯೋಜನೆಯಡಿ ಶೇ.70ರಿಂದ ಶೇ.80ರಷ್ಟು ಮಕ್ಕಳು ಮಾತ್ರ ಒಳಗೊಳ್ಳುತ್ತಿದ್ದಾರೆ. ಬಾಕಿಯುಳಿದ ಮಕ್ಕಳು ಎಲ್ಲ ಲಸಿಕೆಗಳನ್ನು ಪಡೆದುಕೊಳ್ಳುವುದಿಲ್ಲ ಹಾಗೂ ಸೋಂಕು ಮತ್ತು ಕಾಯಿಲೆಗಳಿಗೆ ಒಳಗಾಗಿ ಅವುಗಳು ಸಮುದಾಯದಲ್ಲಿ ಪ್ರಸಾರವಾಗಲು ಕಾರಣರಾಗುತ್ತಿದ್ದಾರೆ. ಹೀಗಾಗಿ ಎಲ್ಲ ತಾಯ್ತಂದೆಯರು ಮತ್ತು ಭವಿಷ್ಯದಲ್ಲಿ ಮಕ್ಕಳನ್ನು ಪಡೆಯುವ ಎಲ್ಲರೂ ಲಸಿಕೆಗಳ ಪ್ರಾಮುಖ್ಯವನ್ನು ಮನದಟ್ಟು ಮಾಡಿಕೊಳ್ಳುವುದು ಹಾಗೂ ತಮ್ಮ ಮಕ್ಕಳು ಎಲ್ಲ ಲಸಿಕೆಗಳನ್ನು ಸರಿಯಾದ ಸಮಯದಲ್ಲಿ ಪಡೆಯುವಂತೆ ಮತ್ತು ಸಂಪೂರ್ಣ ರೋಗ ನಿರೋಧಕ ಶಕ್ತಿಯನ್ನು ಹೊಂದಿ ಆರೋಗ್ಯವಂತ ನಾಗರಿಕರಾಗುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ.

– ಎಂಆರ್‌ ಲಸಿಕೆಯನ್ನು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಮೀಸಲ್ಸ್‌ ಲಸಿಕೆಯ ಸ್ಥಾನದಲ್ಲಿ ನೀಡಲು ಶಿಫಾರಸು ಮಾಡಲಾಗಿದೆ ಮತ್ತು ಅಂಗೀಕೃತವಾಗಿದೆ. ಮೊದಲ ಡೋಸ್‌ 12 ತಿಂಗಳುಗಳಿಗಿಂತ ವಿಳಂಬವಾಗಿದ್ದಲ್ಲಿ ಎರಡು ಎಂಆರ್‌ ಡೋಸ್‌ಗಳ ನಡುವೆ 1 ತಿಂಗಳು ಅಂತರ ಇರಬೇಕು. 
– ಜೆಇ ಲಸಿಕೆಯನ್ನು ಆಯ್ದ ಸೋಂಕು ಪೀಡಿತ ಜಿಲ್ಲೆಗಳಲ್ಲಿ ಪರಿಚಯಿಸಲಾಗಿದೆ. ಮೊದಲ ಡೋಸ್‌ 12 ತಿಂಗಳುಗಳಿಗಿಂತ ಹೆಚ್ಚು ವಿಳಂಬಿಸಿದ್ದಲ್ಲಿ ಎರಡು ಜೆಇ ಇಂಜೆಕ್ಷನ್‌ಗಳ ನಡುವೆ ಕನಿಷ್ಠ 3 ತಿಂಗಳು ವಿರಾಮ ಇರಬೇಕು.
– ವಿಟಮಿನ್‌ ಎಯ 2ರಿಂದ 9ನೇ ಡೋಸ್‌ಗಳನ್ನು 1-5 ವಯಸ್ಸಿನ ಮಕ್ಕಳಿಗೆ ವಾರ್ಷಿಕ ಎರಡು ಸುತ್ತುಗಳಲ್ಲಿ ಐಸಿಡಿಎಸ್‌ ಸಹಯೋಗದೊಂದಿಗೆ ನೀಡಬಹುದು. 
– ಎನ್‌ಟಿಎಜಿಐ ಶಿಫಾರಸು ಮಾಡಿರುವ ನ್ಯುಮೊಕಾಕಕಲ್‌ ಕಾಂಜುಗೇಟ್‌ ವ್ಯಾಕ್ಸಿನ್‌ (ಪಿಸಿವಿ) ಇದುವರೆಗೆ ಲಸಿಕೆ ಕಾರ್ಯಕ್ರಮದಲ್ಲಿ ಇಲ್ಲ; ವೇಳಾಪಟ್ಟಿ 6 ಮತ್ತು 14ನೇ ವಾರಗಳಲ್ಲಿ ಹಾಗೂ 9ನೇ ತಿಂಗಳಲ್ಲಿ ಬೂಸ್ಟರ್‌ ಡೋಸ್‌.
– ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ (ಎಚ್‌ಪಿವಿ) ಲಸಿಕೆಯು ಪ್ರಸ್ತುತ ಲಸಿಕೆ ಕಾರ್ಯಕ್ರಮದಲ್ಲಿ ಇಲ್ಲ.

ಟಾಪ್ ನ್ಯೂಸ್

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.