ತಾಯಿಂದ ದೂರ ಹೋದ ಶಿಂಷಾ, ಕಾವೇರಿ, ಮುತ್ತತ್ತಿ


Team Udayavani, Apr 8, 2018, 6:00 AM IST

14.jpg

ಮರಿಗಳು ಸ್ವಾವಲಂಬಿಗಳಾಗುವ ತನಕ ತನ್ನದಲ್ಲದ ಮರಿಗಳನ್ನು ಕೊಲ್ಲುವ ಬೇರೆ ಗಂಡು ಚಿರತೆಗಳಿಂದ ಕಾಪಾಡಬೇಕು. ಹೀಗೆ ಹಲವಾರು ಕುತ್ತುಗಳು. ಇವೆಲ್ಲವನ್ನೂ ಮೆಟ್ಟಿ ಮರಿಗಳನ್ನು ಬೆಳಸಿದ ಈ ಚಿರತೆ ತಾಯಿ ಬಹು ಕಷ್ಟಪಟ್ಟಿರಬೇಕು. ಇಂತಹ ಹೆಣ್ಣು ಚಿರತೆಗಳೇ ಇವುಗಳ ಸಂತತಿ ಬೆಳೆಯಲು ಬಹು ಮಹತ್ವದ ಪಾತ್ರ ನಿರ್ವಹಿಸಿವೆ.

ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ ಎಂದರೆ ಈಗ ಎಲ್ಲರ ಹತ್ತಿರವೂ ಉತ್ತರವಿದೆ. ಹಾಗೆಯೇ, ಯಾವ ರಾಜ್ಯದಲ್ಲಿ ಎಷ್ಟಿವೆ, ನಮ್ಮ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ, ಇನ್ನಿತರ ಉತ್ತರಗಳನ್ನು ವಿಜ್ಞಾನ ಆಗಲೇ ದೊರಕಿಸಿಕೊಟ್ಟಿದೆ. ಆದರೆ ಕರ್ನಾಟಕದಲ್ಲಿ ಎಷ್ಟು ಚಿರತೆಗಳಿವೆ ಎಂದರೆ ನಮ್ಮಲ್ಲಿ ಉತ್ತರವಿಲ್ಲ. ಹಾಗೆಯೇ ಅವುಗಳ ಸಂಖ್ಯೆ ಯಾವ ಯಾವ ಪ್ರದೇಶದಲ್ಲಿ ಎಷ್ಟಿದೆ, ಸಂಖ್ಯೆಯಲ್ಲಿನ ಏರುಪೇರಿಗೆ ಕಾರಣಗಳೇನು? ಅವುಗಳ ನೆಲಹರವಿನಲ್ಲಿ ವ್ಯತ್ಯಾಸವಿದೆಯೇ? ಹೀಗೆ ಹಲವು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ. ಅವುಗಳ ಇರುವಿಕೆ ದೊಡ್ಡ ಕಾಡುಗಳಿಂದ ಹಿಡಿದು, ಗುಡ್ಡಗಾಡು ಪ್ರದೇಶ, ಒಣ ಕುರುಚಲು ಕಾಡುಗಳು, ನಿತ್ಯಹರಿದ್ವರ್ಣದ ಕಾಡುಗಳು ಹೀಗೆ ಹಲವು ವಿಧವಾದ ಆವಾಸ ಸ್ಥಾನಗಳ ವ್ಯಾಪ್ತಿಯಲ್ಲಿ ಹರಡಿದೆ. ಹಾಗಾಗಿ ಚಿರತೆಯನ್ನು ನನ್ನ ವೈಜ್ಞಾನಿಕ ಅಧ್ಯಯನದ ಕೇಂದ್ರಬಿಂದುವಾಗಿಟ್ಟುಕೊಂಡೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಚಿರತೆಗಳಿಗೆ ಸಂಬಂಧಪಟ್ಟ ವಿಷಯವಾಗಿ ಅಧ್ಯಯನವನ್ನು ಪ್ರಾರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ನಮಗೆ ತಿಳಿಯಬೇಕಾಗಿದ್ದ ಅಂಶವೆಂದರೆ ನಮ್ಮಲ್ಲಿ ಎಷ್ಟು ಚಿರತೆಗಳಿವೆ ಮತ್ತು ಅವುಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳಿಗೆ ಸಾಧ್ಯವಾದ ಕಾರಣಗಳನ್ನು ಪ್ರಾಥಮಿಕವಾಗಿ ಪರಿಶೀಲಿಸಬೇಕಾಗಿತ್ತು. 

ಈ ನಿಟ್ಟಿನಲ್ಲಿ ಚಿರತೆಗಳ ವಿಚಾರದಲ್ಲಿ ನಮಗಿರುವ ಒಂದು ಅನುಕೂಲವೆಂದರೆ ಅವುಗಳ ಮೈಮೇಲಿರುವ ಗುಲಾಬಿ ಹೂವಿನ ದಳಗಳ ಆಕಾರದ ಚುಕ್ಕೆಗಳು. ಈ ಚುಕ್ಕೆಗಳ ಆಧಾರದ ಮೇಲೆ ವೈಯಕ್ತಿಕ ಚಿರತೆಗಳನ್ನು ಗುರುತಿಸಬಹುದು. ಹೀಗೆ ಮೈಮೇಲಿನ ಗುರುತುಗಳನ್ನು ಆಧರಿಸಿ ಜಿರಾಫೆ, ಕತ್ತೆ ಕಿರುಬ, ತಿಮಿಂಗಿಲ, ಹಂದಿ ಮೀನು (ಡಾಲ್ಫಿನ್‌), ಹುಲಿ, ಕೆಲ ಜಾತಿಯ ಹಲ್ಲಿಗಳು, ಹೀಗೆ ಮೈಮೇಲೆ ನೈಸರ್ಗಿಕವಾಗಿ ಗುರುತುಗಳುಳ್ಳ ಹಲವಾರು ಪ್ರಭೇದದ ವನ್ಯಜೀವಿಗಳಲ್ಲಿ ವೈಯಕ್ತಿಕ ಪ್ರಾಣಿಗಳನ್ನು ಗುರುತಿಸ ಬಹುದು. ಈ ವಿಧಾನದಿಂದ ಪ್ರಾಣಿಗಳ ಸಂಖ್ಯೆಯನ್ನರಿಯಲು ಪ್ರಚಲಿತವಾಗಿ ಉಪಯೋಗಿಸುವ ಸಾಧನವೆಂದರೆ ಕ್ಯಾಮೆರಾ ಟ್ರಾಪ್‌ಗ್ಳು. ಇವುಗಳನ್ನು  ಪ್ರಾಣಿಗಳು ಹಾದುಹೋಗುವ ದಾರಿಗಳಲ್ಲಿ ಅಳವಡಿಸಿ, ಈ ಸ್ವಯಂಚಾಲಿತ ಕ್ಯಾಮೆರಾಗಳು ಪ್ರಾಣಿಗಳ ಚಿತ್ರಗಳನ್ನು ತೆಗೆದ ನಂತರ, ಆ ಚಿತ್ರಗಳನ್ನು ಹೋಲಿಸಿ ಅವುಗಳನ್ನು  ವೈಯಕ್ತಿಕವಾಗಿ ಗುರುತಿಸಬಹುದು. ಇದೇ ವೈಜ್ಞಾನಿಕ ತಂತ್ರವನ್ನು ನಾನು ಚಿರತೆಗಳ ಸಂಖ್ಯೆಯ ಅಧ್ಯಯನಕ್ಕಾಗಿ ಬಳಸಲು ನಿರ್ಧರಿಸಿದೆ. ಈ ಅಧ್ಯಯನದಿಂದ ಈಗಾಗಲೇ ಚಿರತೆಗಳ ಬಗ್ಗೆ ಹಲವಾರು ಕುತೂಹಲಕಾರಿ ಅಂಶಗಳು ತಿಳಿದುಬರುತ್ತಿವೆ. 

ಕಾವೇರಿ ವನ್ಯಜೀವಿಧಾಮದ ಭೀಮೇಶ್ವರಿ ಪ್ರದೇಶದಲ್ಲಿ 2014ರ ಜನವರಿಯ ಒಂದು ಮಧ್ಯರಾತ್ರಿ ನಮ್ಮ ಕ್ಯಾಮೆರಾಟ್ರಾಪ್‌ನಲ್ಲಿ ಒಂದು ತಾಯಿ ಚಿರತೆಯೊಟ್ಟಿಗೆ ಮೂರು ಮರಿಗಳು ಸಿಕ್ಕಿದ್ದವು. ಯಥೇತ್ಛವಾಗಿರುವ ಸುಂದರವಾದ ಕಾರಚ್ಚಿ ಮರ ಮತ್ತು ಅವುಗಳ ಮಧ್ಯೆ ಹುಲುಸಾಗಿ ಬೆಳೆದ ಹುಲ್ಲು, ಇದರ ಮಧ್ಯೆ ಹಾದು ಹೋಗುವ ಕಾಡಿನ ಮಧ್ಯೆಯಿರುವ ರಸ್ತೆಯಲ್ಲಿ ಈ ಕುಟುಂಬ ನಮಗೆ ತಮ್ಮ ಇರುವಿಕೆಯನ್ನು ತಿಳಿಸಿಕೊಟ್ಟವು. ಬಹು ಸಂತೋಷವಾಯಿತು. ಸುಮಾರು ಆರು ತಿಂಗಳ ಮರಿಗಳು ಕ್ಯಾಮೆರಾಟ್ರಾಪ್‌ ಮುಂದೆ ನೆಗೆದಾಡಿದ್ದವು. ಅವುಗಳಿಗೆ ಸ್ವಲ್ಪ ಗಾಬರಿ ಕೂಡ ಆಗಿರಬಹುದು. 

ಆ ವಯಸ್ಸಿನಲ್ಲಿ ಸಾಕಷ್ಟು ಬಾರಿ ಅವುಗಳ ಲಿಂಗವನ್ನು ಸಹ ಗುರುತಿಸಲು ಕಷ್ಟ. ಮೂರರಲ್ಲಿ ಎರಡು ಹೆಣ್ಣು ಮರಿಗಳೆಂದು ಸಾಬೀತಾಯಿತು. ನಮ್ಮ ದತ್ತಾಂಶವನ್ನು ವಿಶ್ಲೇಷಿಸಿ, ಕ್ಯಾಮೆರಾಟ್ರಾಪ್‌ನಲ್ಲಿ ಸಿಕ್ಕ ಚಿರತೆಗಳಿಗೆಲ್ಲ ಒಂದೊಂದು ವಿಶಿಷ್ಟ ವಾದ ಸಂಖ್ಯೆಯನ್ನು ಕೊಟ್ಟು ಕೆಲಸ ಮುಗಿಸಿದ್ದೆವು. ವನ್ಯ ಮಾರ್ಜಾಲಗಳ ಮರಿಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಇಷ್ಟು ಸಣ್ಣ ವಯಸ್ಸಿನ ಮರಿಗಳನ್ನು, ಅವುಗಳ ಸಂಖ್ಯಾ ವಿಶ್ಲೇಷಣೆಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಉಳಿಯುವಿಕೆ, ಮತ್ತಿತರ ಜೀವನ ಕ್ರಮದ ವಿಚಾರಗಳನ್ನು ಅರಿಯಲು ಅವುಗಳಿಗೆ ಕೂಡ ವಿಶಿಷ್ಟ ಸಂಖ್ಯೆಯನ್ನು ನೀಡಿ ಮುಂದಿನ ವರ್ಷಗಳಲ್ಲಿ ಅದೇ ಪ್ರದೇಶದಲ್ಲಿ ಕ್ಯಾಮೆರಾಟ್ರಾಪ್‌ ಮಾಡಿದಾಗ ಅವುಗಳು ಉಳಿದಿವೆಯೇ ಎಂದು ನೋಡಲು ದತ್ತಾಂಶ ಉಪಯೋಗವಾಗುತ್ತದೆ.   

2016ರ ಜನವರಿಯಲ್ಲಿ ಮತ್ತೆ ಅದೇ ಪ್ರದೇಶದಲ್ಲಿ ಕ್ಯಾಮೆರಾ ಟ್ರಾಪ್‌ ಕೆಲಸ ಪುನರ್‌ ಪ್ರಾರಂಭಿಸಿದೆವು. ಈ ವನ್ಯಜೀವಿಧಾಮ ದಲ್ಲಿ ಒಂದು ಬಾರಿ ಕ್ಯಾಮೆರಾಟ್ರಾಪ್‌ ಸಂಪೂರ್ಣಗೊಳಿಸ ಬೇಕಾದರೆ ಸುಮಾರು ಮೂರರಿಂದ ನಾಲ್ಕು ತಿಂಗಳ ಸಮಯ ಬೇಕಾಗುತ್ತದೆ. ಈ ಕೆಲಸವನ್ನು ಸಂಪೂರ್ಣಗೊಳಿಸಿದ ಮೇಲೆ ಚಿತ್ರಗಳನ್ನು ವನ್ಯಜೀವಿ ಪ್ರಭೇದದ ಅನುಸಾರವಾಗಿ ವಿಂಗಡಿಸಿ, ಕೂಲಂಕಷವಾಗಿ ದತ್ತಾಂಶವನ್ನು ಪರೀಕ್ಷಿಸಿ, ನಿರ್ದಿಷ್ಟ ಚಿರತೆಗಳನ್ನು ಗುರುತಿಸಿ, ತದನಂತರ ಸಂಖ್ಯಾಶಾಸ್ತ್ರದ ಸಹಾಯದಿಂದ ಅವುಗಳ ಸಂಖ್ಯೆ ಮತ್ತು ಸಾಂದ್ರತೆಯನ್ನು ಕಂಡು ಹಿಡಿಯಲು ಸಾಧ್ಯ. ಈ ಪ್ರಕ್ರಿಯೆ ಕೂಡ ಸುಮಾರು ತಿಂಗಳುಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. 

2016ರ ಚಿತ್ರಗಳನ್ನು 2014ರಲ್ಲಿ ತೆಗೆದ ಚಿರತೆಗಳ ಚಿತ್ರಗಳಿಗೆ ಹೋಲಿಸುತ್ತಿರುವಾಗ ಕುತೂಹಲಕರ ವಿಚಾರಗಳು ಹೊರ ಬರಲು ಪ್ರಾರಂಭಿಸಿದವು. ಅದರಲ್ಲಿ ಬಹು ಸಂತೋಷಕರವಾದ ವಿಚಾರವೆಂದರೆ 2014ರ ಜನವರಿಯಲ್ಲಿ ಸಿಕ್ಕದ್ದ ಮೂರೂ ಮರಿಗಳು ಬದುಕಿ ಉಳಿದಿದ್ದವು ಎನ್ನುವುದು. ಅದರಲ್ಲಿ ಮೊದಲನೇ ಹೆಣ್ಣು ಮರಿ ಆಶ್ಚರ್ಯಕರವಾಗಿ ಕಾಡಿನ ವಾಯುವ್ಯ ಮೂಲೆಯಲ್ಲಿದ್ದ ಧನಗೂರು ಪ್ರದೇಶವನ್ನು ಸೇರಿಬಿಟ್ಟಿತ್ತು. ಅಲ್ಲಿಗೆ ಹೋಗಲು ಈ ಚಿರತೆ ಶಿಂಷಾ ನದಿಯನ್ನು ಯಾವಾಗಲೋ ದಾಟಿತ್ತು. ಕೊರಕಲು, ಕಣಿವೆಯಿರುವ ನದಿಯನ್ನು ಹೇಗೆ ದಾಟಿತ್ತು ಎಂಬುದು ನಮಗ್ಯಾರಿಗೂ ತಿಳಿಯದ,  ಊಹಿಸಲಸಾಧ್ಯವಾದ ವಿಷಯ. ಬಹುಶಃ ತಾನು ಹುಟ್ಟಿದ ಪ್ರದೇಶದಲ್ಲಿ ನೆಲಹರುವಿಗೆ ಹೆಚ್ಚಿನ ಪೈಪೋಟಿಯಿದ್ದ ಕಾರಣ ಕಾಡಿನ ಮೂಲೆಯನ್ನು ಸೇರಿತ್ತೇನೋ? ಇದಕ್ಕೆ ನಾವು ಸಿಯು-74 ಎಂದು ನಾಮಾಂಕಿತ ಮಾಡಿದ್ದರೂ, ನದಿಯನ್ನು ದಾಟಿದ್ದ ಕಾರಣ ಅದಕ್ಕೆ ಶಿಂಷಾ ಎಂದು ಕೂಡ ಕರೆಯಲು ಪ್ರಾರಂಭಿಸಿದೆವು. 

ಎರಡನೆಯ ಹೆಣ್ಣು ಮರಿ ತನ್ನ ಒಡಹುಟ್ಟಿದ ಶಿಂಷಾದ ಅಭಿಮುಖವಾಗಿ, ತನ್ನ ಹುಟ್ಟು ನೆಲೆಯಿಂದ ಪೂರ್ವ ದಿಕ್ಕಿನಲ್ಲಿ ಸಂಚರಿಸಿ ಹೈರಾ, ಗಾಳಿಬೊರೆ ಪ್ರದೇಶದಲ್ಲಿ ತನ್ನ ನೆಲೆ ಮಾಡಿ ಕೊಂಡಿತ್ತು. ಇದು ಕಾವೇರಿ ನದಿ ತಟದಲ್ಲಿಯೇ ಕೆಲ ಬಾರಿ ನಮಗೆ ಸಿಕ್ಕಿದ ಪ್ರಯುಕ್ತ ಇದಕ್ಕೆ ಕಾವೇರಿ ಎಂದು ನಾಮಕರಣ ಮಾಡಿದರೂ ನಮ್ಮ ದಾಖಲೆಗಳಲ್ಲಿ ಅದು ಸಿಯು-68 ಆಯಿತು. ನಮ್ಮ ಸಂತೋಷಕ್ಕೆ ಮೂರನೇ ಮರಿ ಕೂಡ ಬದುಕಿತ್ತು. ಮುಂಚೆ ಅದರ ಲಿಂಗವನ್ನು ಪತ್ತೆ ಮಾಡಲು ಆಗಿರಲಿಲ್ಲ, ಆದರೆ 2016ರ ಚಿತ್ರಗಳಿಂದ ಅದು ಗಂಡೆಂದು ತಿಳಿಯಿತು. ಈ ಚಿರತೆ ಇನ್ನೂ ಹೆಚ್ಚಿನ ಸಾಹಸ ಮಾಡಿ ತಾನು ಹುಟ್ಟಿದ್ದ ಜಾಗದಿಂದ ದಕ್ಷಿಣಕ್ಕೆ ಸಂಚರಿಸಿ, ಕಾವೇರಿ ನದಿಯನ್ನೇ ದಾಟಿ, ಕೊಳ್ಳೇಗಾಲ ತಾಲೂಕಿನ ಮತ್ತಿಪುರದ ಹತ್ತಿರವಿದ್ದ ಕಾಡು ಸೇರಿಬಿಟ್ಟಿತ್ತು. 2014ರಲ್ಲಿ ಚಿಕ್ಕ ಮುದ್ದಾದ ಮರಿಯಾಗಿದ್ದ ಈ ಚಿರತೆ ಇಂದು ದೊಡ್ಡ, ಬಲಿಷ್ಠ ಪ್ರಾಣಿಯಾಗಿತ್ತು. ಮಿರ ಮಿರ ಮಿಂಚುವ ಅದರ ತುಪ್ಪಳ, ಅದಕ್ಕೆ ಇನ್ನೂ ಹೆಚ್ಚು ಶೋಭೆಯನ್ನು ತಂದುಕೊಟ್ಟಿತ್ತು. ಬೇಸಿಗೆ ಸಮಯದಲ್ಲಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದ್ದ ಸಮಯದಲ್ಲಿ, ನದಿಯಲ್ಲಿನ ಬಂಡೆಗಳಿಂದ ಬಂಡೆಗೆ ಮೇಲೆ ಹಾರಿ, ನದಿ ದಾಟಿರುವ ಸಾಧ್ಯತೆಯಿದೆ. ಕಾವೇರಿ ವನ್ಯಜೀವಿಧಾಮದ ದಕ್ಷಿಣ ಭಾಗದಲ್ಲಿ ತನ್ನ ಹುಟ್ಟು ಪ್ರದೇಶದಿಂದ ಸುಮಾರು 20 ಕಿಲೋಮೀಟರು ದೂರದಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಈಗ ಸ್ಥಾಪಿಸಿಕೊಂಡಿತ್ತು. ಇದನ್ನು ನಾವು ಮುತ್ತತ್ತಿ ಎಂದು ಕರೆದೆವು. 

ಚಿರತೆ ಮರಿಗಳು ಒಂದರಿಂದ ಒಂದೂವರೆ ವರ್ಷಗಳಲ್ಲಿ ತಮ್ಮ ತಾಯಿಯನ್ನು ತೊರೆದು ತಮ್ಮದೇ ಸ್ವಂತ ಪ್ರಪಂಚವನ್ನು ಕಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಗಂಡು ಚಿರತೆ ಮರಿಗಳು ತಾಯಿಯ ಮೇಲೆ ಸ್ವಲ್ಪ$ಹೆಚ್ಚು ದಿನಗಳು ಅವಲಂಬಿತವಾಗಿರಬಹುದು. ಬಹುಶಃ ಮನುಷ್ಯ ಪ್ರಪಂಚದ ಹಾಗಿರಬೇಕು. ಎರಡು ವರ್ಷದಲ್ಲಿ ಮರಿಗಳೆಲ್ಲ ದೊಡ್ಡವಾಗಿ ತಮ್ಮ ತಾಯಿಯ ಕಾರ್ಯವ್ಯಾಪ್ತಿಯ ಪ್ರದೇಶದಿಂದ ಮನುಷ್ಯರಂತೆ ದೂರ ಹೋಗಿ, ತಮ್ಮದೇ ಬದುಕನ್ನು ಕಟ್ಟಿಕೊಂಡಿದ್ದವು. ಹೀಗೆ ಈ ಮರಿಗಳು ತಮ್ಮ ಒಡ ಹುಟ್ಟಿದವರಿಂದ ದೂರ ಹೋಗುವುದು ಸಹ ವಿಜ್ಞಾನದ ದೃಷ್ಟಿಯಿಂದ ಮುಖ್ಯ. ತಮ್ಮ ತಾಯಿ, ಮತ್ತು ಒಡ ಹುಟ್ಟಿದವರಿರುವ ಪ್ರದೇಶದಲ್ಲೇ ಇವುಗಳು ಕೂಡ ತಮ್ಮ ನೆಲಹರುವನ್ನು ಸ್ಥಾಪಿಸಿಕೊಂಡರೆ ಹತ್ತಿರದ ಸಂಬಂಧಿಗಳಲ್ಲೇ ಸಂತಾನಾಭಿವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಅನುವಂಶಿಕ ತೊಂದರೆಗಳಾಗುವ ಸಂಭವವಿರುತ್ತದೆ.    

ಇವುಗಳ ತಾಯಿಯಾದ ಸಿಯು-12 ಇಂದು ಬದುಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾವೇರಿ ವನ್ಯಜೀವಿ ಧಾಮದ ಚಿರತೆಗಳ ಸಂರಕ್ಷಣೆಯಲ್ಲಿ ತನ್ನ ಪಾತ್ರವನ್ನು ಚೊಕ್ಕಟವಾಗಿ ನಿರ್ವಹಿಸಿ ತನ್ನ ಸಂತತಿಯನ್ನು ಮುಂದೆ ತರಲು ತನಗಿದ್ದ ಮೂರು ಮರಿಗಳನ್ನು ಜೋಪಾನ ಮಾಡಿ, ಕಾಡಿನಲ್ಲಿರುವ ಎಲ್ಲಾ ಅಡೆತಡೆಗಳನ್ನು ಮೆಟ್ಟಿ, ಮರಿಗಳಿಗೆ ಬೇಕಾಗುವ ಆಹಾರವನ್ನು ಒದಗಿಸಿ, ಸಲುಹಿ, ಬೀಳ್ಕೊಟ್ಟಿದೆ. ಚಿರತೆಗಳು ಮೂರು ಮರಿಗಳನ್ನು ದೊಡ್ಡದು ಮಾಡುವುದು ಸುಲಭದ ಕೆಲಸವಲ್ಲ. ಅವುಗಳಿಗೆ ಬೇಕಾದ ಆಹಾರವನ್ನು ಅವುಗಳ ಬೆಳವಣಿಗೆಗೆ ಅನುಗುಣವಾಗಿ ಬೇಟೆಯಾಡಿ ತರಬೇಕು, ಮರಿಗಳು ಸಣ್ಣವಿರುವಾಗ ಕಾಡ್ಗಿಚ್ಚು, ಹೆಬ್ಟಾವು ಇನ್ನಿತರ ಅಪಾಯಗಳಿಂದ ಸುರಕ್ಷಿತಗೊಳಿಸಬೇಕು, ಮರಿಗಳು ಸ್ವಾವಲಂಬಿಗಳಾಗುವ ತನಕ ತನ್ನದಲ್ಲದ ಮರಿಗಳನ್ನು ಕೊಲ್ಲುವ ಬೇರೆ ಗಂಡು ಚಿರತೆಗಳಿಂದ ಕಾಪಾಡಬೇಕು. ಹೀಗೆ ಹಲವಾರು ಕುತ್ತುಗಳು. ಇವೆಲ್ಲವನ್ನೂ ಮೆಟ್ಟಿ ಮರಿಗಳನ್ನು ಬೆಳಸಿದ ಈ ಚಿರತೆ ತಾಯಿ ಬಹು ಕಷ್ಟಪಟ್ಟಿರಬೇಕು. ಇಂತಹ ಹೆಣ್ಣು ಚಿರತೆಗಳೇ ಇವುಗಳ ಸಂತತಿ ಬೆಳೆಯಲು ಬಹು ಮಹತ್ವದ ಪಾತ್ರ ನಿರ್ವಹಿಸಿವೆ.

ಪ್ರಾಣಿ ಪ್ರಪಂಚದಲ್ಲಿ ಅವುಗಳ ಸಂತತಿ ಉಳಿದು ಬೆಳೆಯಲು ಹೆಣ್ಣು ಪ್ರಾಣಿಗಳ ಪಾತ್ರ ಬಹುಮುಖ್ಯ. ಅವುಗಳು ಮರಿ ಮಾಡಿ, ಹೆಚ್ಚು ಹೆಚ್ಚು ಮರಿಗಳು ಪ್ರೌಢಾವಸ್ಥೆಗೆ ತಲುಪುತ್ತಿವೆಯೆಂದರೆ ಆ ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರ, ರಕ್ಷಣೆ ಸಿಗುತ್ತಿದೆ ಎಂದು ಅರ್ಥ.  

ಲೇಖನ ಕುರಿತ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ: bit.ly/2qdZwt4

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.