ಕೇರಳದ ಗಾಂಜಾ ಗ್ಯಾಂಗ್‌ ಪೊಲೀಸರ ಬಲೆಗೆ


Team Udayavani, Apr 8, 2018, 12:15 PM IST

kerala-ganja.jpg

ಬೆಂಗಳೂರು: ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿ ಭಾಗದ‌ ನಕ್ಸಲ್‌ ಪ್ರದೇಶಗಳಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಕೇರಳದ ಮಾದಕ ವಸ್ತು ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಳೆದ 3-4 ವರ್ಷಗಳಿಂದ ನಗರದಲ್ಲಿ ಸಕ್ರಿಯವಾಗಿದ್ದ ಕೇರಳದ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 108 ಕೆ.ಜಿ. ಗಾಂಜಾಯಿದ್ದ 7 ಬ್ಯಾಗ್‌, ಎಲೆಕ್ಟ್ರಾನಿಕ್‌ ತಕ್ಕಡಿ, ಎರಡು ಕಾರು, 9 ಮೊಬೈಲ್‌, ಹತ್ತಾರು ಎಟಿಎಂ ಕಾರ್ಡ್‌ ಮತ್ತು ಮನೆಯ ಒಳಗಡೆ ಪಾಟ್‌ಗಳಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮೂಲಕ ಕರ್ನಾಟಕಕ್ಕೆ ಅವ್ಯಾಹತವಾಗಿ ಗಾಂಜಾ ಪೂರೈಸುತ್ತಿದ್ದ ಪ್ರಮುಖ ತಂಡವನ್ನು ಪತ್ತೆ ಹಚ್ಚಿದಂತಾಗಿದ್ದು, ದಂಧೆಯ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ದಂಧೆಯ ಮಾಸ್ಟರ್‌ ಮೈಂಡ್‌ ಕೇರಳದ ತ್ರಿಶೂರ್‌ ಜಿಲ್ಲೆಯ ನೈನೇಶ್‌ (36),ಈತನ ಸಹಚರರಾದ ಅನಸ್‌ (26), ಟಿ.ಡಿ. ಪ್ರಜಿಲ್‌ ದಾಸ್‌(27), ಸಾಜನ್‌ ದಾಸ್‌(22), ಶಾಫಿ ಕುಂಜು ಮರಕ್ಕರ್‌ (29), ಸಿ.ಕೆ.ಅಕ್ಷಯ್‌ ಕುಮಾರ್‌ (22), ಶಿನಾಜ್‌ (27), ನಜೀಬ್‌ (25)ಹಾಗೂ ಮುಸ್ತಾಕ್‌ (20) ಬಂಧಿತರು.

ಮಾದಕ ವಸ್ತು ಮಾರಾಟದಿಂದ ಬಂದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ಆಗಾಗ್ಗೆ ಪ್ರವಾಸಿ ತಾಣಗಳಿಗೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಹೇಳಿದರು. ಕೇರಳ ಮೂಲದ ನೈನೇಶ್‌ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಇಂದಿರಾನಗರದ ಈಶ್ವರನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.

ಆರೋಪಿ, ತನ್ನ ಇತರೆ ಸಹಚರ ಜತೆ ಸೇರಿ ಒಡಿಶಾ ಮತ್ತು ಆಂಧ್ರಪ್ರದೇಶದ ಶ್ರೀಕಾಕುಳಂ ಗಡಿ ಭಾಗದ ನಕ್ಸಲ್‌ ಪೀಡಿತ ಪ್ರದೇಶ ಗಾಜುವಾಕ ಗಾಂಜಾ ಬೆಳೆದು ಪೂರೈಸುತ್ತಿದ್ದ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ವ್ಯವಹಾರ ನಡೆಸುತ್ತಿದ್ದ. ಆನ್‌ಲೈನ್‌ ಮೂಲಕ ಹಣ ಪಾವತಿಸಿ ಇನೋವಾ, ಬೆಲೆನೋ ವಾಹನಗಳಲ್ಲಿ ನಗರ ಪ್ರವೇಶಿಸುತ್ತಿದ್ದ ಎಂದು ಮಾಹಿತಿ ನೀಡಿದರು.

ಬಳಿಕ ತನ್ನ ಕೊಠಡಿಯಲ್ಲಿ 5-10 ಗ್ರಾಂ ತೂಕದ ಸಣ್ಣ-ಸಣ್ಣ ಪೊಟ್ಟಣದಲ್ಲಿ ತುಂಬಿಸಿ ಈಜಿಪುರ, ಮುರುಗೇಶ್‌ಪಾಳ್ಯ, ಬಾಣಸವಾಡಿ, ಹೆಣ್ಣೂರು, ಕೆ.ಆರ್‌.ಪುರ, ರಾಮಮೂರ್ತಿನಗರ ಸೇರಿದಂತೆ ನಗರದ ಪ್ರತಿಷ್ಠಿತ ಕಾಲೇಜುಗಳು, ಗಾಂಜಾ ವ್ಯಸನಿಗಳಿಗೆ 500-1000 ರೂ.ವರೆಗೆ ಮಾರುತ್ತಿದ್ದ.

ಈ ಸಂಬಂಧ ಕೆಲ ತಿಂಗಳಿನಿಂದ ಆರೋಪಿಯ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದ ಸಿಸಿಬಿ ಪೊಲೀಸರು ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಮಾರುತಿ ಶಿಫ್ಟ್ ಹಾಗೂ ಇನೋವಾ ಕಾರಿನಲ್ಲಿ ಆರೋಪಿಗಳು ಮನೆ ಬಳಿ ಬಂದಾಗ ಮಹಿಳಾ ಮತ್ತು ಮಾದಕ ದ್ರವ್ಯ ವಿಭಾಗದ ಎಸಿಪಿ ವೆಂಕಟೇಶ್‌ ಪ್ರಸನ್ನ ನೇತೃತ್ವದ ತಂಡ ಬಂಧಿಸಿದೆ ಎಂದು ಅವರು ವಿವರಿಸಿದರು.

15 ದಿನಕ್ಕೊಮೆ ಕ್ವಿಂಟಾಲ್‌ ಗಾಂಜಾ: ಗಾಂಜಾ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ನೈನೇಶ್‌ ಪ್ರತಿ 15 ದಿನಕ್ಕೊಮ್ಮೆ ಗಾಜುವಾಕದಿಂದ ತನ್ನ ಸಹಚರರೊಂದಿಗೆ ನಗರಕ್ಕೆ ಕ್ವಿಂಟಾಲ್‌ನಷ್ಟು ಗಾಂಜಾ ತರುತ್ತಿದ್ದ. ಗಾಂಜಾ ಸೊಪ್ಪನ್ನು ಚೌಕಾಕಾರದಲ್ಲಿ ಕತ್ತರಿಸಿ ಬಿಳಿ ಬಣ್ಣದ ಬ್ಯಾಗ್‌ನಲ್ಲಿ ಪ್ಯಾಕ್‌ ಮಾಡುತ್ತಿದ್ದರು.

ಬಳಿಕ ವಾಹನದಲ್ಲಿ ಗಾಂಜಾ ವಾಸನೆ ಬಾರದಂತೆ ಸುಗಂಧದ್ರವ್ಯಗಳನ್ನು ವಾಹನ ಹಾಗೂ ಬ್ಯಾಗ್‌ಗಳಿಗೆ ಸಿಂಪಡಿಸುತ್ತಿದ್ದರು. ಅಷ್ಟೇ ಅಲ್ಲದೇ, ಹೊಸೂರು ಚೆಕ್‌ ಪೋಸ್ಟ್‌ ಬಳಿ ಬರುತ್ತಿದ್ದಂತೆ ಟಿವಿಎಸ್‌ ಕ್ರಾಸ್‌ ರಸ್ತೆ ಮೂಲಕ ಆನೇಕಲ್‌, ಬೇಗೂರು ಮಾರ್ಗವಾಗಿ ಇಂದಿರಾನಗರದ ಮನೆ ತಲುಪುತ್ತಿದ್ದ. ಕಾರು ಜಪ್ತಿ ವೇಳೆ ನಾಲ್ಕೈದು ಸುಗಂಧ ದ್ರವ್ಯ ಬಾಟಲಿಗಳು ಪತ್ತೆಯಾಗಿವೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

1 ಕೆ.ಜಿ.ಗೆ 5 ಲಕ್ಷ ರೂ.: ಕಳೆದ ಆರೇಳು ವರ್ಷಗಳಿಂದ ದಂಧೆಯಲ್ಲಿ ನೈನೇಶ್‌ ಸಕ್ರಿಯವಾಗಿದ್ದಾನೆ. ಗಾಂಜಾ ಪೂರೈಸುತ್ತಿದ್ದ ಒಡಿಶಾ ಮೂಲದ ವ್ಯಕ್ತಿಗೆ ಆನ್‌ಲೈನ್‌ಲ್ಲಿ ಪ್ರತಿ ಕೆ.ಜಿಗೆ 5 ಲಕ್ಷ ರೂ. ನೀಡುತ್ತಿದ್ದ. ಒಡಿಶಾದ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ಹಣ ಜಮೆ ಆಗುತ್ತಿದ್ದಂತೆ ತನ್ನ ಸಹಚರರ ಮೂಲಕ ಗಾಂಜಾ ಕಳುಹಿಸುತ್ತಿದ್ದ. ಹೀಗಾಗಿ ಮೂಲ ಆರೋಪಿ ಪತ್ತೆಗೆ ತಂಡ ರಚಿಸಲಾಗಿದೆ. ಆತನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

ಮನೆಯಲ್ಲಿ ಗಾಂಜಾ ಗಿಡ ಪತ್ತೆ: ಎರಡು ತಿಂಗಳ ಹಿಂದೆ ಒಡಿಶಾದಿಂದ ಗಾಂಜಾ ತಂದಿದ್ದ ಆರೋಪಿ, ಗಾಂಜಾ ಬೀಜ ತಂದಿದ್ದು, ಅದನ್ನು ಮನೆಯ ಹೂಕುಂಡಗಳಲ್ಲಿ ಬೆಳೆಸುತ್ತಿದ್ದ. ಸಾಮಾನ್ಯವಾಗಿ ಗಾಂಜಾ ಗಿಡಗಳಲ್ಲಿ ಹೂ ಬಂದರೆ ಮಾತ್ರ ವಾಸನೆ ಹೊರ ಹೊಮ್ಮುತ್ತದೆ. ಹೀಗಾಗಿ ಇದನ್ನು ಒಂದು ಹಂತದವರೆಗೆ ಬೆಳೆಸಿ ಇಲ್ಲಿಂದಲೇ ನೇರವಾಗಿ ಪೂರೈಸಲು ಸಿದ್ದತೆ ನಡೆಸಿದ್ದ ಎಂದು ಅಧಿಕಾರಿ ವಿವರಿಸಿದರು.

ಮನೆ ಖಾಲಿಗೆ ಸೂಚನೆ: ನೈನೇಶ್‌ನ ಚಲನವಲನಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮನೆ ಮಾಲೀಕರು ಈ ಹಿಂದೆ ಮನೆ ಖಾಲಿ ಮಾಡುವಂತೆ ನೈನೇಶ್‌ಗೆ ಸೂಚಿಸಿದ್ದರು. ಆದರೆ, ಆರೋಪಿ ಬೆಂಗಳೂರಿನಲ್ಲಿ ನನಗೆ ಯಾರೂ ಪರಿಚಯವಿಲ್ಲ. ಏಕಾಏಕಿ ಮನೆ ಖಾಲಿ ಮಾಡಲು ಸಾಧ್ಯವಿಲ್ಲ. 3-4 ತಿಂಗಳ ಬಳಿಕ ಖಾಲಿ ಮಾಡುವುದಾಗಿ ಮನವಿ ಮಾಡಿಕೊಂಡಿದ್ದ. 

ಈ ಮಧ್ಯೆ ವರ್ಷದ ಹಿಂದೆ ಇಂದಿರಾನಗರದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಈತನ ಸಹಚರನನ್ನು ಬಂಧಿಸಲಾಗಿತ್ತು. ಆಗ ಈತ ತಲೆಮರೆಸಿಕೊಂಡಿದ್ದ. ಅಂದಿನಿಂದ ಈತನ ಬೆನ್ನು ಬಿದ್ದಿದ್ದ ತಂಡ ನೈನೇಶ್‌ ಮೊಬೈಲ್‌ ನಂಬರ್‌, ಮನೆ ವಿಳಾಸ ಪತ್ತೆ ಹಚ್ಚಿ ಕೊನೆಗೂ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಫ‌ುಟ್‌ಬಾಲ್‌ ಆಟಗಾರ: ಆರೋಪಿಗಳ ಪೈಕಿ ಶಾಫಿ ಕುಂಜು ಮರಕ್ಕರ್‌ ಸುಮಾರು 6.2 ಅಡಿ ಎತ್ತರವಿದ್ದು, ಫ‌ುಟ್‌ಬಾಲ್‌ ಆಟಗಾರ. ಕೇರಳದಲ್ಲಿ ರಾಜ್ಯ ಮಟ್ಟದ ಫ‌ುಟ್‌ಬಾಲ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾನೆ. ಈ ಮಧ್ಯೆ ನೈನೇಶ್‌ನ ಪರಿಚಯವಾಗಿ ಹಣಕ್ಕಾಗಿ ದಂಧೆಯಲ್ಲಿ ತೊಡಗಿದ್ದಾನೆ. ಈ ಹಿಂದೆ ಕ್ರೀಡಾಪಟುಗಳಿಗೂ ಗಾಂಜಾ ಮಾರಾಟ ಮಾಡಿರುವ ಸಾಧ್ಯತೆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

1 ಲಕ್ಷ ರೂ. ನಗದು ಬಹುಮಾನ: ಮಾದಕ ವಸ್ತು ಮಾರಾಟ ಜಾಲ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ತಂಡಕ್ಕೆ ಆಯುಕ್ತ ಟಿ.ಸುನಿಲ್‌ ಕುಮಾರ್‌ ಒಂದು ಲಕ್ಷ ರೂ. ಬಹುಮಾನ ಘೋಷಿಸಿದರು. ಕಳೆದ 8 ತಿಂಗಳಿಂದ 154 ಪ್ರಕರಣ ಪತ್ತೆ ಹಚ್ಚಿ 500ಕ್ಕಿಂತ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಟಿ.ಸುನೀಲ್‌ ಕುಮಾರ್‌ ಹೇಳಿದರು.

ನಕ್ಸಲ್‌ ಸಂಪರ್ಕ?: ಆರೋಪಿ ನೈನೇಶ್‌ಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವುದರಿಂದ ಈತನಿಗೂ ನಕ್ಸಲ್‌ ಸಂಪರ್ಕವಿರುವ ಸಾಧ್ಯತೆಯಿದೆ. ಗಾಂಜಾ ಪೂರೈಸುತ್ತಿದ್ದ ವ್ಯಕ್ತಿ ನಕ್ಸಲೀಯನಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯ ನೆರವು ಕೋರಲಾಗುವುದು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಟಾಪ್ ನ್ಯೂಸ್

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.