ದೇವರಿಗೆ ತಕ್ಕಂತೆ ದೇಗುಲದ ಆಕಾರ
Team Udayavani, Apr 9, 2018, 6:00 AM IST
ಯಾವುದೇ ಒಂದು ಭೂ ಪ್ರದೇಶಕ್ಕೆ ಯಜ್ಞ, ಹವನಾದಿಗಳಿಗೆ ಅವಶ್ಯವಾದ ಸಮೀರ, ದರ್ಬೆಗಳನ್ನು ಬೆಳೆಯುವ ಭೌಗೋಳಿಕ ಗುಣ; ರಸವಂತಿಕೆಯ ಹೂ ಹಣ್ಣುಗಳು ಫಲ ಬಿಡುವಂತೆ ಇದ್ದಾಗ ಅದನ್ನು “ಭದ್ರಾ’ ಎಂಬುದಾಗಿ ಗುರುತಿಸಲಾಗುತ್ತದೆ. ಈ ರೀತಿಯ ಭೂಮಿಯಿದ್ದಾಗ ಪ್ರಾಕೃತಿಕವಾಗಿ ಒದಗುವ ಸಂಪನ್ನತೆಯನ್ನು ಗಮನಿಸಿ ಯಾವುದೇ ದೇವಾಲಯಗಳನ್ನು ಕಟ್ಟಲು ಅನುಕೂಲವಾಗುತ್ತದೆ.
ದೇವಾಲಯದ ವೈವಿಧ್ಯ, ವಿಶೇಷತೆಗಳು ವಾಸ್ತು ವಿಶೇಷಜ್ಞರಾದ ವರಾಹಮಿಹಿರರ ಪ್ರಕಾರ ದೇವಾಲಯಗಳಲ್ಲಿ ಸುಮಾರು ಇಪ್ಪತ್ತು ಪ್ರಕಾರದ ವೈವಿಧ್ಯ ವಿಶೇಷಗಳಿವೆ. ವರಾಹ ಮಿಹಿರಾಚಾರ್ಯರು ಈ ಎಲ್ಲಾ ಪ್ರಭೇದಗಳನ್ನು ಒಟ್ಟಂದದಲ್ಲಿ ಜೀವ ಜೀವದ ಪೋಷಣೆಗೆ, ಉತ್ಸಾಹ ಚೈತನ್ಯಗಳಿಗೆ ಕಾರಣವಾಗುವ ಹಾಗೆ ವಿಂಗಡಿಸುತ್ತಾರೆ. ಪ್ರತಿ ಊರಿನ ಮಣ್ಣು ,ನೀರು, ಹವಾಮಾನಗಳನ್ನು ಅನುಸರಿಸಿ ಆಚಾರ್ಯರು ಈ ವಿಂಗಡಣೆ ಮಾಡಿದ್ದಾರೆ. ದೇವಾಲಯಗಳಲ್ಲಿ ಮೇರು, ಮಂದರ, ಕೈಲಾಸ, ವಿಮಾನ ಛಂದ, ನಂದನ, ಸಮುದ್ರ, ಪದ್ಮ, ಗರುಡ, ನಂದಿ ವರ್ಧನ, ಕುಂಜರ, ಗುಹರಾಜ, ವೃಕ್ಷ, ಹಂಸ, ಸರ್ವತೋಭದ್ಯ, ಘಟ, ಸಿಂಹ, ವೃತ್ತ, ಚತುಷೊRàಣ, ಷೋಡಶಾಸಿŒ, ಅಷ್ಟಾಸ್ತಿ ಎಂದು ವಿಂಗಡಣೆ ಮಾಡಿದ್ದಾರೆ.
ಪ್ರತಿ ದೇವರುಗಳ ಆಧಾರದಲ್ಲಿ ಈ ಇಪ್ಪತ್ತು ಮಾದರಿಗಳಲ್ಲಿ ಒಂದನ್ನು ಆಯ್ಕೆ ನಡೆಸಬೇಕಾಗುತ್ತದೆ. ಹರನ ದೇವಾಲಯ, ವಿಷ್ಣುವಿನ ದೇವಾಲಯ, ವರಾಹ ಸ್ವಾಮಿ, ನರಸಿಂಹ, ಲಕ್ಷ್ಮೀ ದುರ್ಗ, ಶ್ರೀರಾಮ, ಕೃಷ್ಣ, ಹನುಮ, ಪರಮೇಶ್ವರಿ, ವಾಸವಿ, ಶಾರದಾ, ಗಣೇಶ, ಸ್ಕಂದ, ಸೂರ್ಯ, ಕಾಳಿ, ವೆಂಕಟೇಶ್ವರ, ನಾಗ ಇತ್ಯಾದಿ ಇತ್ಯಾದಿಗಳಲ್ಲಿ ಯಾವ ದೇವಾಲಯ ಎಂಬುದನ್ನು ನಿರ್ಧರಿಸಿ ದೇವಾಲಯದ ಅಂಗ, ಆಕಾರಗಳ ಕುರಿತು ನಿರ್ಣಯ ಕೈಗೊಳ್ಳಬೇಕು. ಶಿವನಿಗೆ ಸೂಕ್ತವಾದದ್ದು ಮಹಾವಿಷ್ಣುಗೆ ಸೂಕ್ತವಾಗುವ ರೀತಿಯಲ್ಲಿ ಇರಲಾರದು. ಶಿವನ, ವಿಷ್ಣುವಿನ ಕೈಂಕರ್ಯಗಳ ಭಿನ್ನ ನಿಲುವುಗಳನ್ನು ಆಧರಿಸಿ ಪ್ರಭೇದಗಳನ್ನು ನಿಗದಿ ಮಾಡಲಾಗುವುದು.
ಸಮುದ್ರ ಕಿನಾರೆಯ ಗುಂಟವನ್ನು ಕಲ್ಪಿಸಿಕೊಳ್ಳಿ. ಹೊಳೆಯ ದಡ ಎಂದೂ ತಿಳಿದುಕೊಳ್ಳಿ. ಈ ಕಡಲ ಅಥವಾ ಹೊಳೆಯ ದಕ್ಷಿಣಭಾಗದಲ್ಲಿ ಭತ್ತ ಮತ್ತು ಧಾನ್ಯಗಳನ್ನು ಬೆಳೆಯುವ ವಿಶೇಷತೆ ಇರಬೇಕು. ಪಶ್ಚಿಮದಲ್ಲಿ ಯಜ್ಞ, ಹವನಾದಿಗಳಿಗೆ ಅವಶ್ಯವಾದ ಸಮೀರ, ಹುಲ್ಲು ದರ್ಬೆಗಳನ್ನು ಬೆಳೆಯುವ ಭೌಗೋಳಿಕ ಗುಣಗಳು ಅಡಕಗೊಂಡಿರಬೇಕು. ರಸವಂತಿಕೆಯ ಹೂ ಹಣ್ಣುಗಳು ಕೂಡಾ ಫಲ ಬಿಡುವಂತೆ ಇರಬೇಕು. ಇಂಥ ಭೂಮಿ “ಭದ್ರಾ’ ಎಂಬುದಾಗಿ ಗುರುತಿಸಲ್ಪಡುತ್ತದೆ. ಈ ರೀತಿಯ ಭೂಮಿಯಿದ್ದಾಗ ಪ್ರಾಕೃತಿಕವಾಗಿ ಒದಗುವ ಸಂಪನ್ನತೆಯನ್ನು ಗಮನಿಸಿ ಯಾವುದೇ ದೇವಾಲಯಗಳನ್ನು ಕಟ್ಟಲು ಅನುಕೂಲವಾಗುತ್ತದೆ. ಅಲೌಕಿಕತೆ ತಂತಾನೇ ತನ್ನ ನೆಲೆಯನ್ನು ಪಡೆಯುತ್ತದೆ.
ಅರಳಿ, ಆಲ, ಮುತ್ತುಗ, ಹೊನ್ನೆ, ಅಶೋಕ, ಮಾವು, ಹಲಸು, ಮುಂತಾಗಿ ಹಲವು ಹತ್ತು ಹದಿನೆಂಟು ವಿಶಿಷ್ಟ ವೃಕ್ಷಗಳು, ಕರವೀರ, ಸಂಪಿಗೆ, ಜಾಜಿ, ಮಲ್ಲಿಗೆ, ಮುತ್ತುಗ, ದ್ರೋಣ ಪುಷ್ಪಗಳು ದೇವಾಲಯದ ನೆಲೆಗೆ, ಅವಶ್ಯವಾದ ಅಧ್ಯಾತ್ಮದ ಮೊಳಕೆಗಳಿಗೆ ಸೂಕ್ತ “ಪೂರ್ಣತೆ’ಯನ್ನು ಒದಗಿಸುವ ದಿವ್ಯ ಅಂಶಗಳಾಗುತ್ತವೆ. ಒಟ್ಟಿನಲ್ಲಿ ನೆಲದ ಫಲವಂತಿಕೆಯಿಂದ ದೈವತ್ವದ ಆವರಣಗಳಿಗೆ ಸಿದ್ಧಿ ಸಿಗುತ್ತದೆ.
ಅದೇ ಎಕ್ಕದ ಗಿಡಗಳು, ಬಿದಿರು, ಕಳ್ಳಿಗಿಡಗಳು, ಜೊಂಡು ಹುಲ್ಲುಗಳು, ತಾಳೆ ಮರಗಳು, ಮುಳ್ಳುಕಂಟಿಗಳು, ಕುರುಚಲು ದಿಬ್ಬಗಳು, ಅಂಟು ದ್ರವ್ಯದ ಗಿಡ್ಡ ಪೊದೆಗಳಿರುವ ಸಸ್ಯದ ತಾಣಗಳ ಜಾಗ ದಿವ್ಯಕ್ಕೆ ಏಣಿಯನ್ನಿಡದು. ಇಂಥಾ ಸ್ಥಳಗಳಲ್ಲಿ ದೇಗುಲಕ್ಕೆ ಶಿಖರ ಹೊಂದಿಸಲಾರದು. ಇಂಥ ಭೂಮಿಯನ್ನು “ಧೂಮ್ರಾ’ ಎಂದು ಹೆಸರಿಸಿ ಕೈ ಬಿಡುತ್ತಾರೆ. ಈ ಭೂಮಿಯು ಹದ್ದು, ಗಿಡುಗ, ಇಲಿ, ಹಂದಿ, ಕಾಗೆ, ನರಿ, ತೋಳಗಳ ತಾಣವಾಗುವುದರಿಂದ ದೈವತ್ವದ ಸೆಲೆಗೆ ಒಂದು ಸುಸಂಬದ್ಧ ಸಂಚಲನ ಒದಗಿ ಬರುವುದೇ ಇಲ್ಲ. ಹಾಗಾಗಿ, ಯಾವುದೇ ದೇವಾಲಯ ನಿರ್ಮಾಣಕ್ಕೂ ಮುನ್ನ ಆ ಭೂಪ್ರದೇಶದ ವೈಶಿಷ್ಟéವನ್ನು ಮೊದಲು ಗಮನಿಸಲಾಗುತ್ತದೆ.
ಮೊ: 8147824707
– ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.