ಪ್ರತ್ಯೇಕ ಅವಘಡದಲ್ಲಿ 16 ಮಂದಿ ದಾರುಣ ಸಾವು

Team Udayavani, Apr 9, 2018, 6:15 AM IST

At-least-16-people-were-kil.jpg

ಬೆಂಗಳೂರು: ಧಾರವಾಡ, ರಾಮನಗರ,ಬೆಳಗಾವಿ, ಅಂಕೋಲ ಹಾಗೂ ಹರಪನಹಳ್ಳಿಯಲ್ಲಿ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಈಜಲು ಹೋದ 8 ವಿದ್ಯಾರ್ಥಿಗಳು ಸೇರಿ 12 ಮಂದಿ ನೀರುಪಾಲಾಗಿದ್ದಾರೆ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಚಿಕ್ಕೇನಹಳ್ಳಿ ಕೆರೆಯ ನೀರಿನಲ್ಲಿ ಭಾನುವಾರ ಇಬ್ಬರು ಮಕ್ಕಳು ಸೇರಿ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಕುಮಾರಸ್ವಾಮಿ ಲೇಔಟ್‌ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಶೇಖರ್‌ (30) ಈತನ ಪತ್ನಿ ಚನ್ನಪಟ್ಟಣ ಮೂಲದ ಸುಮಾ (26), ಇವರ ಅಕ್ಕನ ಮಕ್ಕಳಾದ ಹಂಸ (10), ಧನುಷ್‌ (7) ಮೃತಪಟ್ಟವರು.

ಶೇಖರ್‌, ಸುಮಾ ಮತ್ತು ಧನುಷ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಂಪತಿಗಳು ಭಾನುವಾರ ಚಿಕ್ಕೇನಹಳ್ಳಿಯಲ್ಲಿರುವ ಸುಮಾ ಅವರ ಅಕ್ಕನ ಮನೆಗೆ ಬಂದಿದ್ದರು.

ಗ್ರಾಮದಲ್ಲಿರುವ ನಾಗಪ್ಪ ದೇವಾಲಯ ನೋಡಿಕೊಂಡು ಕೆರೆಯಲ್ಲಿ ಈಜಲು ಹೋಗಿದ್ದಾರೆ. ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದಾಗ ರಕ್ಷಿಸಲು ಹೋದ ಶೇಖರ್‌ ಮತ್ತು ಸುಮಾ ನೀರು ಪಾಲಾಗಿದ್ದಾರೆ.

ಹೊಂಡಕ್ಕಿಳಿದ ಮೂವರು ನೀರು ಪಾಲು: ಬೆಳಗಾವಿ ತಾಲೂಕಿನ ಮಣ್ಣೂರು ಗ್ರಾಮದ ಹೊರವಲಯದಲ್ಲಿರುವ ಕ್ವಾರಿ ಕೊರೆದಿದ್ದ ಹೊಂಡದಲ್ಲಿ ಭಾನುವಾರ ಮಧ್ಯಾಹ್ನ ಪ್ಲಾಸ್ಟಿಕ್‌ ಡಬ್ಬಿ ಕಟ್ಟಿಕೊಂಡು ಈಜಲು ಹೋದ 3ವಿದ್ಯಾರ್ಥಿಗಳು ಮುಳುಗಿ ನೀರು ಪಾಲಾಗಿದ್ದಾರೆ.

ಮಣ್ಣೂರ ಗ್ರಾಮದ ಸಾಹೀಲ್‌ ಮನೋಹರ ಬಾಳೇಕುಂದ್ರಿ (14), ಆಕಾಶ ಕಲ್ಲಪ್ಪ ಚೌಗುಲಾ(14) ಹಾಗೂ ಕುಷನ್‌ ಕಲ್ಲಪ್ಪ ಚೌಗುಲೆ(11) ನೀರು ಪಾಲಾದವರು.

ಎಮ್ಮೆಗಳನ್ನು ಮೇಯಿಸಲು ಊರ ಹೊರಗಿನ ಹೊಲದ ಕಡೆಗೆ ಹೋಗಿದ್ದರು. ಅಲ್ಲಿ ಕ್ವಾರಿ ಕೊರೆದಿರುವ ಹೊಂಡದಲ್ಲಿ ಈಜಲು
ಕೆಳಗಿಳಿದರು. ಈಜು ಬಾರದ್ದಕ್ಕೆ ಪ್ಲಾಸ್ಟಿಕ್‌ ಡಬ್ಬಿ ಕಟ್ಟಿಕೊಂಡು ನೀರಿಗೆ ಧುಮುಕಿದ್ದರು. ಈ ವೇಳೆ,ಮೂವರು ಮುಳುಗಿ ಪ್ರಾಣ ಬಿಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ಶನಿವಾರ ಸಂಜೆ ಗೆಳೆಯರೊಂದಿಗೆ ಹಡಗಲಿ ರಸ್ತೆಯಲ್ಲಿರುವ ಸಿದ್ದಾಪುರ ಕೆರೆಗೆ ಈಜಲು ಹೋದ ಸೈಯ್ಯದ್‌ ಅಫಾನ್‌(11) ಸಾವನ್ನಪ್ಪಿದ್ದಾನೆ.

ತಂದೆ, ಇಬ್ಬರು ಮಕ್ಕಳು ಸಾವು: ಅಂಕೋಲಾ ತಾಲೂಕಿನ ಹಟ್ಟಿಕೇರಿಯ ತಾರಿಬೊಳೆ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಾರಿಬೊಳೆ ನಿವಾಸಿಗಳಾದ ರಮೇಶ ಅಂಬಿಗ(50), ಮಕ್ಕಳಾದ ಪಿಯುಸಿ ವಿದ್ಯಾರ್ಥಿ ರವಿ ರಮೇಶ ಅಂಬಿಗ (17) ಹಾಗೂ 7ನೇ ತರಗತಿ ವಿದ್ಯಾರ್ಥಿ ನವೀನ ರಮೇಶ ಅಂಬಿಗ (13)ಮೃತರು. ಭಾನುವಾರ ಬೆಳಗ್ಗೆ ಇವರು ಹಟ್ಟಿಕೇರಿ ನದಿಗೆ ಮೀನುಗಾರಿಕೆಗೆ ತೆರಳಿದ್ದರು.

ಮೃತ ತಾಯಿಗೆ ಪಿಂಡ ಪ್ರದಾನ ಮಾಡಲು ಆಗಮಿಸಿದ್ದ ಹಗರಿಬೊಮ್ಮನಹಳ್ಳಿ ನಿವಾಸಿ ಅನಿಲ್‌ಕುಮಾರ್‌ (42) ಹಂಪಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಭಾನುವಾರ ನಡೆದಿದೆ.

ರಸ್ತೆ ಅಪಘಾತದಲ್ಲಿ ನಾಲ್ವರ ಸಾವು
ಸಾರಿಗೆ ಬಸ್‌ ಹಾಗೂ ಟವೇರಾ ವಾಹನದ ಮಧ್ಯೆ ಮುಖಾಮುಖೀ ಡಿಕ್ಕಿ ಸಂಭವಿಸಿ ಟವೇರಾ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ
ಮೃತಪಟ್ಟ ಘಟನೆ ಧಾರವಾಡ-ಹಳಿಯಾಳ ಮಾರ್ಗದ ಮುರಕಟ್ಟಿ ಕ್ರಾಸ್‌ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಧಾರವಾಡ ನಗರದ ಕಂಠಿ ಓಣಿ ನಿವಾಸಿಗಳಾದ ಇಮ್ರಾನ್‌ ಜಲೀಲಸಾಬ ಮಕಾನದಾರ(38), ಪತ್ನಿ ಆಫ್ರಿನ್‌ ಇಮ್ರಾನ್‌ ಮಕಾನದಾರ (28), ಮಗಳು ಆಯಷಾ (2), ಚಾಲಕ ತಾಲೂಕಿನ ಲೋಕುರ ಗ್ರಾಮದ ಸಂತೋಷ ತಳವಾರ(22) ಮೃತಪಟ್ಟವರು.

ಟಾಪ್ ನ್ಯೂಸ್

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Tejasvi-surya

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

priyank

Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ

Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದರಿ: ಮೋದಿಗೆ ಸಿಎಂ ಪ್ರಶ್ನೆ

Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.