14 ಚರ್ಮದ ಕ್ರೀಮ್ ಗಳಿಗೆ ನಿಷೇಧ
Team Udayavani, Apr 9, 2018, 10:40 AM IST
ಹೊಸದಿಲ್ಲಿ: ಚರ್ಮಕ್ಕೆ ಲೇಪಿಸುವ 14 ರೀತಿಯ ಕ್ರೀಮ್ ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧಿಸಿದೆ. ಸ್ಟಿರಾಯ್ಡ್ ಮತ್ತು ಆ್ಯಂಟಿಬಯಾಟಿಕ್‌ಗಳನ್ನು ಬಳಸುವ ಚರ್ಮದ ಕ್ರೀಮ್‌ಗಳನ್ನು ಮಾತ್ರ ನಿಷೇಧಿಸಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಬ್ರಾಂಡ್‌ಗಳು ಮುಂದುವರಿಯಲಿವೆ. ಈ ಚರ್ಮದ ಕ್ರೀಮ್‌ಗಳಲ್ಲಿ ಯಾವುದೇ ಸ್ಟಿರಾಯ್ಡ್ ಆ್ಯಂಟಿಬಯಾಟಿಕ್‌ಗಳನ್ನು ಬಳಸುತ್ತಿಲ್ಲ ಎಂದು ಕಂಪನಿಗಳು ಹೇಳಿಕೊಂಡಿವೆ. ಅಲ್ಕೋಲೊ ಮೆಟಸೋನ್, ಬೆಕ್ಲೊಮೆಥಾಸೋನ್, ಡೆಸೊನೈಡ್, ಡೆಸೋಕ್ಸಿಮೆಟಸೋನ್ ಮತ್ತು ಫ್ಲೂಸಿನೋನೈಡ್ ಸೇರಿದಂತೆ ಒಟ್ಟು 14 ರಾಸಾಯನಿಕಗಳನ್ನು ಇನ್ನು ವೈದ್ಯರ ಶಿಫಾರಸು ರಹಿತವಾಗಿ ಮಾರಾಟ ಮಾಡುವ ಚರ್ಮದ ಕ್ರೀಮ್‌ಗಳಲ್ಲಿ ಬಳಸುವಂತಿಲ್ಲ. ಆದರೆ ಈ ಸ್ಟೆರಾಯ್ಡಗಳನ್ನು ಹೊಂದಿರುವ ಔಷಧಗಳನ್ನು ವೈದ್ಯರ ಶಿಫಾರಸು ಮೇರೆಗೆ ಪಡೆಯಬಹುದಾಗಿದೆ.
ರಾಜ್ಯಗಳಿಗೆ ಸೂಚನೆ: ಆಯುಷ್ಮಾನ್ ಭಾರತ ಜಾರಿಗೆ ಪೂರ್ವಭಾವಿಯಾಗಿ ವೈದ್ಯಕೀಯ ಸೇವೆ ಕಾಯ್ದೆಯನ್ನು ರಾಜ್ಯಗಳು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.