ಮೆಟ್ರೋ ಪ್ರಯಾಣಿಕರೊಂದಿಗೆ ಸೆಲ್ಫಿ
Team Udayavani, Apr 9, 2018, 12:07 PM IST
ಬೆಂಗಳೂರು: ಸಾಮಾನ್ಯ ಪ್ರಯಾಣಿಕರೊಂದಿಗೆ ನಮ್ಮ ಮೆಟ್ರೋ ಪ್ರಯಾಣ, ಸಾರ್ವಜನಿಕರೊಂದಿಗೆ ಸೆಲ್ಫಿ, ಪುಸ್ತಕಗಳ ಶಾಪಿಂಗ್, ಮಗುವಿನೊಂದಿಗೆ ಫೋಟೋಗೆ ಫೋಸ್… ನಗರದಲ್ಲಿ ಆಯೋಜಿಸಿದ್ದ “ಜನಾಶೀರ್ವಾದ ಯಾತ್ರೆ’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನಗರದಲ್ಲಿ ಭಾನುವಾರ ಕಾಣಿಸಿಕೊಂಡಿದ್ದು ಹೀಗೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯ ಮೆಟ್ರೋ ನಿಲ್ದಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿ ರಾಜ್ಯದ ನಾಯಕರೊಂದಿಗೆ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ರಾಹುಲ್‌ಗಾಂಧಿ, ಮೊದಲಿಗೆ ಮೆಟ್ರೋ ಟಿಕೆಟ್ ಕೌಂಟರ್ ಬಳಿ ಪಕ್ಷ ನಾಯಕರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ಮುಖ್ಯಮಂತ್ರಿಗಳೇ ಎಲ್ಲರಿಗೂ ಟಿಕೆಟ್ ಖರೀದಿಸಿದ್ದು ವಿಶೇಷವಾಗಿತ್ತು.
ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು. ರಾಹುಲ್ ರೈಲಿನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಸಂತಸಗೊಂಡ ಪ್ರಯಾಣಿಕರು ರಾಹುಲ್ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಹಾತ್ಮಗಾಂಧಿ ರಸ್ತೆಗೆ ಬಂದಿಳಿದ ಎಐಸಿಸಿ ಅಧ್ಯಕ್ಷ, ಚರ್ಚ್‌ಸ್ಟ್ರೀಟ್‌ನಲ್ಲಿರುವ ಬುಕ್‌ವರ್ಮ್ ಪುಸ್ತಕ ಮಳಿಗೆಯಲ್ಲಿ ಸುಮಾರು 10 ನಿಮಿಷ ಸುತ್ತಾಡಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಎ ಹಿಸ್ಟರಿ ಆಫ್ ಗಾಡ್’, “ದ ಗೋಟ್ ಥೀಫ್, “ಇಕಿಗೈ’, “ಥಿಚ್ ನಾತ್ ಹನ್Ø’ ಸೇರಿ ಒಟ್ಟು ಐದು ಪುಸ್ತಕಗಳನ್ನು ಖರೀದಿಸಿ, ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದರು.
ರಾಹುಲ್ ಗಾಂಧಿಯವರನ್ನು ನೋಡಲು ನೂರಾರು ಜನರು ಮಳಿಗೆಯ ಮುಂಭಾಗದಲ್ಲಿ ಜಮಾಯಿಸಿದ್ದರು. ಮಳಿಗೆಯಿಂದ ಹೊರ ಬಂದ ರಾಹುಲ್ ಅಲ್ಲಿಯೇ ನಿಂತಿದ್ದ ಪುಟ್ಟ ಬಾಲಕನನ್ನು ಎತ್ತಿಕೊಂಡು ತಮ್ಮ ಕಾರಿನ ಮುಂಭಾಗದಲ್ಲಿ ಕೂರಿಸಿಕೊಂಡು ಫೋಟೋಗೆ ಪೋಸು ನೀಡಿದರು. ಇದೇ ವೇಳೆ ಹಲವು ರಾಹುಲ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.
ರಾಹುಲ್ ಗಮನ ಸೆಳೆದದ್ದು ಹೀಗೆ…
-ವೇದಿಕೆ ಏರದೆ ಪೌರ ಕಾರ್ಮಿಕರ ಎದುರೇ ಕುಳಿತು ಸಂವಾದ
-ಪೌರಕಾರ್ಮಿಕ ಮಹಿಳೆಯರ ಜತೆ ಫೋಟೋ ಸೆಷನ್
-ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಸೆಲ್ಫಿ ಸಮಯ
-ಮೆಟ್ರೋ ರೈಲು ಪ್ರಯಾಣದ ವೇಳೆ ಪ್ರಯಾಣಿಕರೊಂದಿಗೆ ಮಾತುಕತೆ
-ಚರ್ಚ್ ಸ್ಟ್ರೀಟ್‌ನ ಪುಸ್ತಕ ಮಳಿಗೆಯಲ್ಲಿ ಸುತ್ತಾಟ, ಸಿಎಂರಿಂದ ಪುಸ್ತಕ ಉಡುಗೊರೆ
-ಬಾಲಕನ ಎತ್ತಿಕೊಂಡು ತಮ್ಮ ಕಾರಿನ ಎದುರು ಫೋಟೋಗೆ ಪೋಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.