ಕಣ್ಣಿನ ಕ್ಯಾನ್ಸರ್‌ಪೀಡಿತ ಬಾಲಕನ ಚಿಕಿತ್ಸೆಗೆ ನೆರವಿಗಾಗಿ ಮನವಿ
Team Udayavani, Apr 9, 2018, 1:13 PM IST
ಮರವಂತೆ: ಕೂಲಿ ಕೆಲಸಕ್ಕಾಗಿ ಹಾವೇರಿಯಿಂದ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮಕ್ಕೆ ಬಂದು ನೆಲೆಸಿದ ಯಲ್ಲಪ್ಪಾ ಬಿ. ಅಗಡಿ ಮತ್ತು ಈರಮ್ಮ ದಂಪತಿಯ ಏಕೈಕ ಪುತ್ರ ಹರೀಶ್(2) ಕಣ್ಣಿನ ಕ್ಯಾನ್ಸರ್‌ಗೆ ತುತ್ತಾಗಿದ್ದಾನೆ.
ತೀರಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಈ ಬಡ ಕುಟುಂಬಕ್ಕೆ ಮಗುವಿನ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ
ಹಣವನ್ನು ಭರಿಸುವುದೇ ದೊಡ್ಡ ಚಿಂತೆಯಾಗಿದ್ದು, ದಾನಿಗಳು ಹಾಗೂ ಸಾರ್ವಜನಿಕರ ಮಾನವೀಯ ನೆರವಿಗಾಗಿ
ದಂಪತಿ ಮನವಿ ಮಾಡಿಕೊಂಡಿದ್ದಾರೆ. ಸೇನಾಪುರ ರೈಲ್ವೇ ನಿಲ್ದಾಣದ ಸಮೀಪ ಜೋಪಡಿಯಲ್ಲಿ ಹಾವೇರಿಯ
ಹಲವು ಕೂಲಿಕಾರ್ಮಿಕ ಮಂದಿ ಜತೆ ವಾಸವಾಗಿರುವ ಯಲ್ಲಪ್ಪಾ ಬಿ. ಅಗಡಿ ದಂಪತಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಾರೆ. ಇದೀಗ ಅವರ ಪುತ್ರ ಹರೀಶ್ ಎಡಗಣ್ಣಿಗೆ ಕ್ಯಾನ್ಸರ್ ಬಾಧಿಸಿದ್ದು, ಮಂಗಳೂರಿನ
ಕೆಎಂಸಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ರೂ. ಅಗತ್ಯವಾಗಿದ್ದು, ಬಡ
ಕುಟುಂಬ ಕಂಗಾಲಾಗಿದೆ.
ಆದ್ದರಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ಹಾಗೂ ಸಾರ್ವಜನಿಕರು ಉದಾರ ಮನಸ್ಸಿನಿಂದ
ಧನಸಹಾಯ ಮಾಡಿದ್ದಲ್ಲಿ ಮಗುವಿನ ಚಿಕಿತ್ಸೆಗೆ ನೆರವಾಗುತ್ತದೆ. ಸಹಾಯ ಮಾಡಲಿಚ್ಛಿಸುವವರು ಯಲ್ಲಪ್ಪಾ ಬಿ.
ಅಗಡಿ ಅವರ ಹೆಸರಿನಲ್ಲಿ ಅಗಡಿಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾದ ಉಳಿತಾಯ ಖಾತೆ ಸಂಖ್ಯೆ
3052500113882801(ಐಎಫ್‌ಎಸ್‌ಸಿ ಕೆಎಆರ್‌ಬಿ0000305)ಕ್ಕೆ ಸಲ್ಲಿಸುವಂತೆ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.