ವ್ಯಾಪಕ ಪ್ರಚಾರ-ಅಭಿಯಾನ
Team Udayavani, Apr 9, 2018, 4:14 PM IST
ದಾವಣಗೆರೆ: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಡನೆ ವಿಸ್ತೃತ ಚರ್ಚೆ… ಬಿಜೆಪಿ ನಾಯಕರ ಮುಂದುವರೆದ ಮುಷ್ಟಿ ಧಾನ್ಯ ಅಭಿಯಾನ…ಜೆಡಿಯು ರಾಜ್ಯ ಅಧ್ಯಕ್ಷರಿಂದ ಪ್ರಚಾರಕ್ಕೆ ಚಾಲನೆ… ಬೆಂಗಳೂರಲ್ಲಿ ಟಿಕೆಟ್‌ಗಾಗಿ ಮುಖಂಡರ ಇನ್ನಿಲ್ಲದ ಮನವೊಲಿಕೆಯ ಪ್ರಯತ್ನ… ಇವು ವೋಟಿನ ಬೇಟೆಗಾಗಿ ಭಾನುವಾರ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ನಾಯಕರ ರಾಜಕೀಯ ಚಟುವಟಿಕೆಗಳು. ಬೆಂಗಳೂರುನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಮಾರೋಪಕ್ಕೆ ಹೋಗದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಜನಸಂಪರ್ಕ ಕಚೇರಿಯಲ್ಲಿ ಶಾಮನೂರು, ನಿಟುವಳ್ಳಿ ಭಾಗದ ಮುಖಂಡರು, ಗಣ್ಯರು, ಕಾರ್ಯಕರ್ತರೊಡನೆ ಚುನಾವಣೆ ವಿಷಯವಾಗಿ ವಿಸ್ತೃತವಾಗಿ ಚರ್ಚಿಸಿದರು. ಸುಧೀರ್ಘ ಚರ್ಚೆಯ ನಂತರ ನಿಟುವಳ್ಳಿ ಇತರೆ
ಭಾಗದಲ್ಲಿ ಮುಖಂಡರ ಭೇಟಿ ಮುಂದುವರೆಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಬೆಳಗ್ಗೆ ವಿನೋಬ ನಗರ, ಯಲ್ಲಮ್ಮ ನಗರ ಇತರೆ ಭಾಗದಲ್ಲಿ ಮುಷ್ಟಿ ಧಾನ್ಯ ಅಭಿಯಾನ ನಡೆಸಿದರು. ಸಂಜೆ ನಿಟುವಳ್ಳಿ ಭಾಗದಲ್ಲಿ ಮುಷ್ಟಿ ಧಾನ್ಯಅಭಿಯಾನ ಮುಂದುವರೆಸಿದರು. ಸಂಸದ ಜಿ.ಎಂ. ಸಿದ್ದೇಶ್ವರ್ ಇತರೆ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಜನಾಶೀರ್ವಾದ ಯಾತ್ರೆ ಸಮಾರೋಪ ಮತ್ತು ಇತರೆ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದರು. ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಹುಲಿಕಟ್ಟೆ, ಹಾರಕನಾಳ್ ಭಾಗದಲ್ಲಿ ಪ್ರಚಾರ ನಡೆಸಿದರು. ಬಿಜೆಪಿ ಟಿಕೆಟ್‌ಗೆ ಪಟ್ಟು ಬಿಡದ ಪ್ರಯತ್ನ ಮುಂದುವರೆಸಿರುವ ಎನ್. ಕೊಟ್ರೇಶ್ ಬೆಂಗಳೂರುನಲ್ಲಿ ಉಳಿದುಕೊಂಡಿದ್ದಾರೆ.
ಶಾಸಕ ಎಚ್.ಪಿ. ರಾಜೇಶ್ ಜಗಳೂರು ಪಟ್ಟಣದಲ್ಲಿ ಲಕ್ಷಮ್ಮ ಒಳಗೊಂಡಂತೆ ಇತರೆ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ಗೋಸಾಯಿ ಕಾಲೋನಿ, ವಾರ್ಡ್ ನಂಬರ್ 10,11, 12, 13 ಇತರೆಡೆ ಪ್ರಚಾರ ನಡೆಸಿದರು. ಬಿಜೆಪಿಯ ಸಂಭವನೀಯ ಅಭ್ಯರ್ಥಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಪ್ರಚಾರ ಕೈಗೊಂಡರು.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಬೆಂಗಳೂರಿನಿಂದ ವಾಪಾಸ್ಸಾದ ನಂತರ ತಮ್ಮ ಅಕ್ಕಿ ಮಿಲ್ ನಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೇಲಿಮಲ್ಲೂರು, ಕೋಟೆಮಲ್ಲೂರು, ಘಂಟಾಪುರ ಇತರೆಡೆ ಮುಷ್ಟಿ ಧಾನ್ಯ ಅಭಿಯಾನ ಮುಂದುವರೆಸಿದರು. ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ಶೆಟ್ಟಿಹಳ್ಳಿ ಒಳಗೊಂಡಂತೆ ಇತರೆಡೆ ಪ್ರಚಾರ ನಡೆಸಿದರು.
ಮಾಜಿ ಶಾಸಕ, ಬಿಜೆಪಿಯ ಸಂಭವನೀಯ ಅಭ್ಯರ್ಥಿ ಮಾಡಾಳ್ ವಿರುಪಾಕ್ಷಪ್ಪ, ಸಂತೇಬೆನ್ನೂರು ಭಾಗದಲ್ಲಿ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಕೆಲವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಜೆಡಿಎಸ್ ಅಭ್ಯರ್ಥಿ ಹೊದಿಗೆರೆ ರಮೇಶ್ ಚನ್ನಗಿರಿ ಪಟ್ಟಣದ ಪೊಲೀಸ್ ಸಮುತ್ಛಯ ಇತರೆ ಭಾಗದಲ್ಲಿ ಪ್ರಚಾರ ನಡೆಸಿದರು. ಜೆಡಿಯು ರಾಜ್ಯ ಅಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಸೂಳೆಕೆರೆ(ಶಾಂತಿಸಾಗರ)ದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ, ಬಹಿರಂಗ ಸಭೆ ನಡೆಸಿದರು.
ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ಬೆಂಗಳೂರುನಲ್ಲಿ ಉಳಿದುಕೊಂಡು ಟಿಕೆಟ್ ಪ್ರಯತ್ನ ಮುಂದುವರೆಸಿದರು. ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾಯಕೊಂಡ ಗ್ರಾಮದ ಮುಖಂಡರ ಮನೆಗೆ ಭೇಟಿ ನೀಡಿ, ಕೆಲ ಕಾಲ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಟಿಕೆಟ್ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. ಮಾಯಕೊಂಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿರುವ ಎಚ್. ಆನಂದಪ್ಪ, ಕೆ.ಎಚ್. ಬಸವರಾಜ್ ಇತರರು ಆನಗೋಡು ಗ್ರಾಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರೊಂದಿಗೆ ಮುಷ್ಟಿ ಧಾನ್ಯ ಅಭಿಯಾನ ನಡೆಸಿದರು.
ಹರಿಹರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಎಸ್. ರಾಮಪ್ಪ, ಬೆಳಗ್ಗೆ ಕುಮಾರನಹಳ್ಳಿ, ಮಲೇಬೆನ್ನೂರುನಲ್ಲಿ ಪ್ರಚಾರ ನಡೆಸಿದರು. ಸಾಯಂಕಾಲ ಹರಿಹರ ಪಟ್ಟಣದ ಇಂದಿರಾನಗರ, ವಿದ್ಯಾನಗರ ಇತರೆಡೆ ಪ್ರಚಾರ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.