ತೇಜಸ್ವಿನ್ ಶಂಕರ್ ಫೈನಲ್ ಜಂಪ್
Team Udayavani, Apr 10, 2018, 6:10 AM IST
ಗೋಲ್ಡ್ಕೋಸ್ಟ್: ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್ ಶಂಕರ್ ಕಾಮನ್ವೆಲ್ತ್ ಗೇಮ್ಸ್ ಹೈಜಂಪ್ ಸ್ಪರ್ಧೆಯ ಫೈನಲ್ಗೆ ನೆಗೆದಿದ್ದಾರೆ. ಸೋಮವಾರದ ಅರ್ಹತಾ ಸುತ್ತಿನಲ್ಲಿ ಅವರು “ಎ’ ವಿಭಾಗದಲ್ಲಿ ಜಂಟಿ 5ನೆಯವರಾಗಿ ಹಾಗೂ ಒಟ್ಟಾರೆ 9ನೆಯವರಾಗಿ ಕಾಣಿಸಿಕೊಂಡರು.
2.10 ಮೀ. ನೆಗೆತದೊಂದಿಗೆ ಸ್ಪರ್ಧೆ ಆರಂಭಿಸಿದ ಶಂಕರ್, ಅಂತಿಮವಾಗಿ 2.21 ಮೀ. ನೆಗೆತದೊಂದಿಗೆ ಅರ್ಹತಾ ಸುತ್ತು ಮುಗಿಸಿದರು. ಸ್ಪರ್ಧೆಯಲ್ಲಿದ್ದ ಯಾರಿಂದಲೂ ಕೂಟದ ನಿಗದಿತ ಗುರಿಯಾದ 2.27 ಮೀ. ದೂರವನ್ನು ತಲುಪಲಾಗಲಿಲ್ಲ. ಟಾಪ್-12 ಸ್ಪರ್ಧಿಗಳ ಗರಿಷ್ಠ ನೆಗೆತದ ದೂರ 2.21 ಮೀ. ಆಗಿತ್ತು. ಹೈಜಂಪ್ ಫೈನಲ್ ಎ. 14ರಂದು ನಡೆಯಲಿದೆ.
21ರ ಹರೆಯದ ತೇಜಸ್ವಿನ್ ಶಂಕರ್ ಯುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ ತಿಂಗಳು ನಡೆದ “ಫೆಡರೇಶನ್ ಕಪ್’ ಚಾಂಪಿಯನ್ಶಿಪ್ನಲ್ಲಿ 2.28 ಮೀ. ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿ ಗೋಲ್ಡ್ಕೋಸ್ಟ್ ಕೂಟಕ್ಕೆ ಅರ್ಹತೆ ಪಡೆದಿದ್ದರು.
ಆಸ್ಟ್ರೇಲಿಯದ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಅವರ ಕಿರಿಯ ಸಹೋದರ ಬ್ರ್ಯಾಂಡನ್ ಸ್ಟಾರ್ಕ್ ಕೂಡ ಹೈಜಂಪ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದು, ತವರಿನ ವೀಕ್ಷಕರಿಂದ ಅಪಾರ ಬೆಂಬಲ ಸಂಪಾದಿಸಿದರು. ಬ್ರ್ಯಾಂಡನ್ ಯುತ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧಕನೂ ಆಗಿದ್ದಾರೆ.
ಹಿಮಾ ಸೆಮಿಫೈನಲ್ ಓಟ
ವನಿತೆಯರ 400 ಮೀ. ಹೀಟ್ಸ್ನಲ್ಲಿ ಭಾರತದ ಹಿಮಾ ದಾಸ್ ಸೆಮಿಫೈನಲ್ ತಲಪುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 52.11 ಸೆಕೆಂಡ್ಗಳಲ್ಲಿ ಈ ದೂರವನ್ನು ಕ್ರಮಿಸಿ 8ನೇ ಸ್ಥಾನಿಯಾದರು.
ಆದರೆ ಕರ್ನಾಟಕದ ಭರವಸೆಯ ಓಟಗಾರ್ತಿ ಎಂ.ಆರ್. ಪೂವಮ್ಮ ಹೀಟ್ಸ್ನಲ್ಲಿ 24ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿ ನಿರಾಸೆ ಮೂಡಿಸಿದರು. ಈ ದೂರವನ್ನು ಕ್ರಮಿಸಲು ಪೂವಮ್ಮ 53.72 ಸೆಕೆಂಡ್ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.