ಪ್ರೊ ಕಬಡ್ಡಿ: 9 ಫ್ರಾಂಚೈಸಿಗಳಿಂದ 21 ಆಟಗಾರರ ಉಳಿಕೆ
Team Udayavani, Apr 10, 2018, 7:05 AM IST
ನವದೆಹಲಿ: ಐದು ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿರುವ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಗೆ ಸಜ್ಜಾಗಿದೆ. ಅ.19 ರಿಂದ 6ನೇ ಆವೃತ್ತಿ ಆರಂಭವಾಗಲಿದೆ. ವಿಶೇಷ ಎಂದರೆ 9 ಫ್ರಾಂಚೈಸಿಗಳು 21 ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಂಡಿವೆ.
ಬೆಂಗಳೂರು ಬುಲ್ಸ್ ರೋಹಿತ್ ಕುಮಾರ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಉಳಿದಂತೆ ಪ್ರಮುಖವಾಗಿ ಬೆಂಗಾಲ್ ತಂಡ ಸುರ್ಜೀತ್ ಸಿಂಗ್, ಮಣಿಂದರ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ದಬಾಂಗ್ ದೆಹಲಿ ತಂಡ ಮಿರಾಜ್ ಶೇಖ್ ಅವರನ್ನು ಉಳಿಸಿಕೊಂಡಿದೆ. ಗುಜರಾತ್ ತಂಡ ಸಚಿನ್, ಸುನೀಲ್ ಕುಮಾರ್ ಮತ್ತು ಮಹೇಂದ್ರ ಗಣೇಶ್ ಅವರನ್ನು ಉಳಿಸಿಕೊಂಡಿದೆ. ಹರ್ಯಾಣ ತಂಡ ಕುಲದೀಪ್ ಸಿಂಗ್ ಅವರನ್ನು, ಪಾಟ್ನಾ ತಂಡ ಪ್ರದೀಪ್ ನರ್ವಾಲ್, ಜೈದೀಪ್, ಜವಾಹರ್ ಮತ್ತು ಮನೀಶ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.
ಪುನೇರಿ ತಂಡ ಸಂದೀಪ್ ನರ್ವಾಲ್, ರಾಜೇಶ್ ಮಂಡಲ್, ಜಿ.ಬಿ.ಮೋರೆ, ಗಿರೀಶ್ ಅವರನ್ನು ಉಳಿಸಿಕೊಂಡಿದೆ. ತಮಿಳ್ ತಂಡ ಅಜಯ್ ಠಾಕೂರ್, ಅಮಿತ್ ಹೂಡಾ, ಸಿ.ಅರುಣ್ ಅವರನ್ನು ಉಳಿಸಿಕೊಂಡಿದೆ. ತೆಲುಗು ತಂಡ ನಿಲೇಶ್, ಮೊಹಸೆನ್ ಅವರನ್ನು ಉಳಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್ಎಕ್ಸ್ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.