ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ವಿಳಂಬ

Team Udayavani, Apr 10, 2018, 7:00 AM IST

JDS.jpg

ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಳೆದ ಫೆಬ್ರವರಿಯಲ್ಲಿ 126 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್‌ ಎರಡನೇ ಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿದ್ದು, ಸೌರಮಾನ ಯುಗಾದಿ ನಂತರವೇ ( ಏ. 14) ಪಟ್ಟಿ ಬಿಡುಗಡೆಯಾಗಲಿದೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ವಿಕಾಸ ಯಾತ್ರೆ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಏ. 13ರಂದು ವಿಕಾಸ ಯಾತ್ರೆ ಕೊನೆಗೊಳ್ಳಲಿದ್ದು, ನಂತರ ಚರ್ಚಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಫೆಬ್ರವರಿ 18ರಂದೇ 126 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಡಿಎಸ್‌ ಬಿಡುಗಡೆ ಮಾಡಿತ್ತು. ಈ ಪೈಕಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದ ಮುದ್ದೇಬಿಹಾಳದ ಅಭ್ಯರ್ಥಿ ಎ.ಎಸ್‌.ಪಾಟೀಲ್‌ ನಡಹಳ್ಳಿ ಮತ್ತೆ ಪಕ್ಷ ತೊರೆದು ಬಿಜೆಪಿ ಸೇರಿದ್ದರಿಂದ ಪ್ರಸ್ತುತ 125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದಾದ ಬಳಿಕ ಯುಗಾದಿ ವೇಳೆಗೆ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು.

ಆದರೆ, ನಂತರದಲ್ಲಿ ಅವರು ರಾಜ್ಯಾದ್ಯಂತ ವಿಕಾಸ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜತೆ ಹೊಂದಾಣಿಕೆ ಮಾಡಿಕೊಂಡ ಜೆಡಿಎಸ್‌, ಆ ಪಕ್ಷಕ್ಕೆ ಸುಮಾರು 20 ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಿತ್ತು. ಈಗಾಗಲೇ ಈ ಕ್ಷೇತ್ರಗಳು ಅಂತಿಮಗೊಂಡಿದೆಯಾದರೂ ಇನ್ನು ಸುಮಾರು 75 ಅಭ್ಯರ್ಥಿಗಳನ್ನು ಜೆಡಿಎಸ್‌ ಘೋಷಿಸಬೇಕಾಗಿದೆ.

ಹಾಲಿ ಶಾಸಕರು ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಹಂತದ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಕುಮಾರಸ್ವಾಮಿ ಅವರು ವಿಕಾಸ ಯಾತ್ರೆ ಮುಗಿಸಿಕೊಂಡು ಬಂದ ಕೂಡಲೇ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾದು ನೋಡುವ ತಂತ್ರ:
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜೆಡಿಎಸ್‌ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಅಸಮಾಧಾನಗೊಂಡ ಆ ಪಕ್ಷದವರು ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾದರೆ ಅಂಥವರಿಗೆ ಅವಕಾಶ ನೀಡಲು ನಿರ್ಧರಿಸಿದೆ. ಈ ಕಾರಣಕ್ಕಾಗಿಯೇ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಎರಡನೇ ಪಟ್ಟಿ ವೇಳೆ ಅನ್ಯ ಪಕ್ಷಗಳಿಂದ ಬರುವವರ ಕುರಿತು ಸ್ಪಷ್ಟತೆ ಸಿಗದೇ ಇದ್ದಲ್ಲಿ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.