ಜೋಡಿ ಹಳಿ ಜತೆ ವಿದ್ಯುದೀಕರಣಕ್ಕೆ ಚಾಲನೆ: ಕೊಂಕಣ ರೈಲ್ವೇ ನಿಗಮ
Team Udayavani, Apr 10, 2018, 6:00 AM IST
ಮಂಗಳೂರು: ಮಂಗಳೂರು- ಮುಂಬಯಿ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ರೈಲ್ವೇ ಹಳಿ ದ್ವಿಗುಣ ಯೋಜನೆ ಹಾಗೂ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಚುರುಕುಗೊಂಡಿದೆ. ಈ ಎರಡೂ ಕಾಮಗಾರಿಗಳನ್ನು ಆರಂಭಿಸಿರುವ ಕೊಂಕಣ ರೈಲ್ವೇ ನಿಗಮವು 2019ರ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಒಟ್ಟು 741 ಕಿ.ಮೀ. ಹಳಿ ದ್ವಿಗುಣ ಕಾಮಗಾರಿ ರೋಹಾದಿಂದ ಮನ್‌ಗಾಂವ್‌ವರೆಗೆ ಬಿರುಸಿನಿಂದ ನಡೆಯುತ್ತಿದೆ. ಹಳಿ ದ್ವಿಗುಣದಿಂದ ರೈಲು ಸಂಚಾರ ದಟ್ಟಣೆ ಬಗೆಹರಿಯಲಿದೆ. ಇನ್ನಷ್ಟು ಸೇವೆ ಆರಂಭಿಸಬಹುದಾಗಿದ್ದು, ಆದಾಯವೂ ಹೆಚ್ಚಲಿದೆ.
ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಅವಳಿ ಹಳಿ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ನಿಗಮವು ಹೊಂದಿದೆ. ಈ ಮಧ್ಯೆ ದ. ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ಮಧ್ಯೆ 328 ಕಿ. ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮಂಗಳೂರು ಜಂಕ್ಷನ್ (ಕಂಕನಾಡಿ) ವರೆಗೆ ಪೂರ್ಣಗೊಂಡಿದ್ದು, ತೋಕೂರುವರೆಗೆ ಮುಂದುವರಿಯಲಿದೆ. ಅಲ್ಲಿಂದ ಮಹಾರಾಷ್ಟ್ರದ ರೋಹಾದವರೆಗೆ ಕೊಂಕಣ ರೈಲ್ವೇ ನಿಗಮವು ವಿದ್ಯುದೀಕರಣಗೊಳಿಸಲಿದೆ. ರೋಹಾದಿಂದ ವರ್ನಾವರೆಗೆ ಹಾಗೂ ವರ್ನಾದಿಂದ ತೋಕೂರು ಸೇರಿದಂತೆ ಎರಡು ಹಂತಗಳಲ್ಲಿ ಈ ಕಾಮಗಾರಿಯನ್ನು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಲಾಗಿದೆ. ಸುಮಾರು 950 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಎರಡೂ ಭಾಗಗಳಲ್ಲಿ ಪ್ರಗತಿಯಲ್ಲಿದೆ. ವಿದ್ಯುದೀಕರಣಕ್ಕಾಗಿ ರೈಲ್ವೇ ಹಳಿಯ ಪಕ್ಕದಲ್ಲಿ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದ್ದು, ಮುಂದೆ ಕಂಬಗಳನ್ನು ಕ್ರೇನ್‌ಗಳ ಸಹಾಯದಿಂದ ಜೋಡಿಸಲಾಗುವುದು. ರಾಜ್ಯ ಸರಕಾರವೂ ಇದಕ್ಕೆ ಅನುದಾನ ಒದಗಿಸಲಿದೆ.
ಪರಿಸರ ಪೂರಕ
ರೈಲಿಗೆ ಪೆಟ್ರೋಲಿಯಂ ಮೂಲದ ಇಂಧನದ ಬದಲು ವಿದ್ಯುತ್ಛಕ್ತಿಯ ಬಳಕೆ ಪರಿಸರ ಸ್ನೇಹಿ. ಡೀಸೆಲ್ ಚಾಲಿತ ರೈಲು ಎಂಜಿನ್ ಬಂದ ಬಳಿಕ ಕಲ್ಲಿದ್ದಲಿನ “ಉಗಿಬಂಡಿ’ ಇತಿಹಾಸಕ್ಕೆ ಸೇರಿತು. ಈಗ ಡೀಸೆಲ್ ಮತ್ತು ವಿದ್ಯುತ್‌ಚಾಲಿತ ಇಂಜಿನ್‌ಗಳು ಬಳಕೆಯಲ್ಲಿವೆ. ಡೀಸೆಲ್ ಇಂಜಿನ್‌ಗಳಿಂದ ಪರಿಸರ ಮಾಲಿನ್ಯವಾಗುತ್ತದೆ. ವಿದ್ಯುತ್ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಜತೆಗೆ ಇಂಧನವೂ ಉಳಿತಾಯವಾಗಿ ವೆಚ್ಚ ಕಡಿಮೆಯಾಗಲಿದೆ.
ಕೊಂಕಣ ರೈಲ್ವೇ ಮಾರ್ಗ ಮಂಗಳೂರಿನ ತೋಕೂರಿನಿಂದ ಮುಂಬಯಿಯ ರೋಹಾ ತನಕ 741 ಕಿ.ಮೀ. ಉದ್ದವಿದೆ. ಮಂಗಳೂರಿನಿಂದ ಮುಂಬಯಿಗೆ ನೇರ ರೈಲ್ವೇ ಸಂಪರ್ಕ ಕಲ್ಪಿಸಲೆಂದು ರೈಲು ಮಾರ್ಗ ನಿರ್ಮಿ ಸಲು 1990 ಅ. 15ರಂದು ಕೊಂಕಣ ರೈಲ್ವೇ ನಿಗಮವನ್ನು ರಚಿಸಲಾಗಿತ್ತು. ಪ್ರಧಾನಿ ವಿಪಿ ಸಿಂಗ್ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಕರಾವಳಿಯ ಜಾರ್ಜ್ ಫೆರ್ನಾಂಡಿಸ್ ಈ ಯೋಜನೆಯ ಜನಕ. ಜನತಾ ಪರಿವಾರದ ಮಧು ದಂಡವತೆ ಹಾಗೂ ರಾಮಕೃಷ್ಣ ಹೆಗಡೆ ಸಹಕರಿಸಿ ದ್ದರು. ಮಂಗಳೂರು -ಉಡುಪಿ ಮಧ್ಯೆ ಮೊದಲ ಪ್ಯಾಸೆಂಜರ್ ರೈಲು 1993ರಲ್ಲಿ ಆರಂಭ ವಾಗಿತ್ತು. ಸರಕು ತುಂಬಿದ ಟ್ರಕ್‌ಗಳ ಸಾಗಾಟ (ರೋ ರೋ) ನಿಗಮದ ಬಹು ಯಶಸ್ವಿ ಸೇವೆ.
741 ಕಿ.ಮೀ. ಹಳಿ ದ್ವಿಗುಣ
950 ಕೋಟಿ ರೂ. ಅಂದಾಜು ವೆಚ್ಚ
2019 ಕಾಮಗಾರಿ ಪೂರ್ಣ ಗುರಿ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Siddaramaiah: ಕರಾವಳಿಗೆ ಎರಡು ಸರಕಾರಿ ಮೆಡಿಕಲ್ ಕಾಲೇಜು
CM Siddaramaiah: ಜಾತಿಗಣತಿ ವರದಿ ಮುಂದಿನ ಸಂಪುಟ ಸಭೆಯಲ್ಲಿ ಮಂಡನೆ
Mangaluru: ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳಿಗೆ ಕೃಪಾಂಕ ನೀಡಲು ತೀರ್ಮಾನ : ಸಿಎಂ
Fraud: ಆನ್‌ಲೈನ್ ಟ್ರೇಡಿಂಗ್: ಮಹಿಳೆಗೆ 15.27 ಲಕ್ಷ ರೂ. ವಂಚನೆ
Mangaluru: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.