ಬೀದಿ ಜಗಳ ಅಂದ್ರೆ ಐಪಿಎಲ್‌ ಅಲ್ಲ!


Team Udayavani, Apr 10, 2018, 4:26 PM IST

bidi-jagala.jpg

ಬರೀ ಮಾತಿನ ಜಗಳದ ಜೊತೆಗೆ ಸಣ್ಣ ಮಟ್ಟಿನ ಬಡಿದಾಟಗಳಿದ್ದರೆ ನೋಡುಗರಿಗೆ ಹಬ್ಬವೋ ಹಬ್ಬ. ಹೊಸ ಸಿನಿಮಾವನ್ನು ನೋಡುತ್ತಿರುವಂತೆ ಮಗ್ನರಾಗಿ ಹೋಗಿರ್ತಾರೆ, ನಿಂತಲ್ಲಿಯೇ ಹೊಡಿ- ಬಡಿ ಎಂದು ಹೇಳಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜಗಳಗಳು ಸಣ್ಣದಾಗಿಯೇ ಮುಗಿದು ಹೋದರೆ, ಸುತ್ತಲೂ ನಿಂತಿರುವ ವೀಕ್ಷಕರಿಗೆ ಸಚಿನ್‌ ತೆಂಡೂಲ್ಕರ್‌ 99 ರನ್‌ಗೆ ಔಟಾದಾಗ ಆಗುವಷ್ಟೇ ನಿರಾಸೆಯಾಗುತ್ತದೆ…

ರಸ್ತೆಯಲ್ಲಿ ನಿಂತು ಜಗಳವಾಡ್ತಿರೋ ನಾಲ್ಕು ಜನ. ಇಬ್ಬರೊಂದು ಕಡೆ ಮತ್ತಿಬ್ಬರಿನ್ನೊಂದು ಕಡೆ. ಸುತ್ತಲೂ ನಿಂತು ನೋಡುವ ಅಂದರೆ, ಅಕ್ಕ ಪಕ್ಕದ ಮನೆ ಬಾಗಿಲಿನಲ್ಲಿ ಹೆಂಗಸರು, ಟೀ ಅಂಗಡಿಯಲ್ಲಿ ಸಿಗರೇಟು ಸೇದುವ ಹುಡುಗರು, ಜಗಳ ಇನ್ನೂ ಜೋರಾದ ಮೇಲೆ ಬಿಡಿಸಿದರಾಯ್ತು ಅಂತ ಕಾಯ್ತಿರೋ ಕೆಲ ಹಿರಿಯರು, ಸರಿಯಾಗಿ ಕಾಣಿ¤ಲ್ಲವೆಂದು ಮನೆಯ ತಾರಸಿ ಹತ್ತಿ ನೋಡುವ ಕೆಲವರು… ಹೀಗೆ ಬೀದಿ ಜಗಳದ ವೀಕ್ಷಕರಲ್ಲೂ ವೈವಿಧ್ಯತೆ ಉಂಟು.

ಒಂದೂರಿನ ಬೇರೆ ಬೇರೆ ಮನೆಯ ವ್ಯಕ್ತಿಗಳಿಗೋ ಅಥವಾ ಒಂದೇ ಮನೆಯ ಸದಸ್ಯರಿಗೋ ಇರುವ ಮನಃಸ್ತಾಪಗಳು ಅತಿರೇಕಕ್ಕೇರಿ ರಸ್ತೆಗೆ ಬಂದು ಬಡಿದಾಡಿದಾಗ ಅದು ಬೀದಿ ಜಗಳವಾಗುತ್ತೆ. ಕೆಲವರಿಗೆ ಜಗಳ ಕಾಯುವುದೇ ಒಂದು ಹವ್ಯಾಸವೂ ಆಗಿರುತ್ತೆ, ಸುಖಾಸುಮ್ಮನೆ ಕಸದ ನೆಪ ಮಾಡಿಕೊಂಡೋ, ಚರಂಡಿ ಕಟ್ಟಿದೆಯೆಂದೋ ಅಕ್ಕಪಕ್ಕದವರೊಡನೆ ಜಗಳವಾಡದಿದ್ದರೆ ಏನೋ ಕಳಕೊಂಡಂತೆ ಚಡಪಡಿಸ್ತಾರೆ. ಆದರೆ, ಸುತ್ತಲಿನ ಜನರಿಗೆ ಮಾತ್ರ ಬೀದಿ ಜಗಳ ಒಳ್ಳೆಯ ಮನರಂಜನೆಯ ವಸ್ತು. ಈ ಬೀದಿ ಜಗಳಗಳಿಗೆ ಹೆಚ್ಚಿನ ಕಟ್ಟುಪಾಡುಗಳಿಲ್ಲ, ಹಳ್ಳಿ- ಸಿಟಿ ಎಲ್ಲಾ ಕಡೆಯೂ ಹುಟ್ಟಿಕೊಳ್ಳುತ್ತವೆ.

ಇವುಗಳ ಕಾರಣವೂ ಅಷ್ಟೇ, ವಿಚಿತ್ರವಾಗಿರುತ್ತವೆ. ನೀರು ಹಿಡಿಯಲು ನಿಲ್ಲುವ ಸರದಿಯ ವಿಷಯ, ಜೋರಾಗಿರುವ ಟಿ.ವಿ. ಶಬ್ದ, ಮಕ್ಕಳ ನಡುವಿನ ಜಗಳ, ನೀರು ಚೆಲ್ಲಾಟದ ವಿಷಯ ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತದೆ. ಬೀದಿ ಜಗಳದ ಪರಿಮಿತಿ ಕ್ಷುಲ್ಲಕ ಕಾರಣದಿಂದ ಹಿಡಿದು ಆಸ್ತಿ ವಿವಾದದಂಥ ವಿಷಯಗಳ ವರೆಗೂ ಸಾಗುತ್ತದೆ. ವಿಷಯ ಏನೇ ಇರಲಿ ಕಿರುಚಾಟಕ್ಕೆ ಕಿವಿಯಾಗುವವರು ಮಾತ್ರ ಹಲವರು.

ಜಗಳ ಸಣ್ಣದಾಗಿ ಶುರುವಾದರೂ ಬರು ಬರುತ್ತಾ ಜೋರಾಗಿ, ಅಪ್ಪಟ ಸಂಸ್ಕೃತ ಪದಗಳ ಹರಿದುಬರಲು ಶುರುವಾಗುತ್ತದೆ. ಒಮ್ಮೊಮ್ಮೆ ಸಣ್ಣ ಹಂತದಲ್ಲೇ ಜಗಳ ಮುಗಿಯುವಂತಿದ್ದರೂ “ಅಕ್ಕ-ಪಕ್ಕದವರು ಹಾಗಂತೆ-ಹೀಗಂತೆ’ ಎನ್ನುವ ಮಾತುಗಳಿಂದ ಮತ್ತಷ್ಟು ಮುಂದುವರಿಯುತ್ತದೆ. ಅದರಲ್ಲೂ ಹೆಂಗಸರು ಜಗಳಕ್ಕೆ ನಿಂತರಂತೂ ಮುಗಿದೇ ಹೋಯ್ತು, ಸೆರಗು ಸುತ್ತಿ ಸೊಂಟಕ್ಕೆ ಸಿಕ್ಕಿಸಿದರೆಂದರೆ ಅರಚಾಟ ಆಕಾಶಕ್ಕೆ ಮುಟ್ಟುತ್ತದೆ. ಜಗಳವಾಡುವವರಿಗೆ ಹಿಂದೆ ಸಾಥ್‌ ಕೊಡಲು ಇನ್ನೂ ಕೆಲವರು ಸೇರಿಕೊಂಡರಂತೂ ಜಗಳ ಮತ್ತಷ್ಟು ರಂಗೇರುತ್ತದೆ.

ಬರೀ ಮಾತಿನ ಜಗಳದ ಜೊತೆಗೆ ಸಣ್ಣ ಮಟ್ಟಿನ ಬಡಿದಾಟಗಳಿದ್ದರೆ ನೋಡುಗರಿಗೆ ಹಬ್ಬವೋ ಹಬ್ಬ. ಹೊಸ ಸಿನಿಮಾವನ್ನು ನೋಡುತ್ತಿರುವಂತೆ ಮಗ್ನರಾಗಿ ಹೋಗಿರ್ತಾರೆ, ನಿಂತಲ್ಲಿಯೇ ಹೊಡಿ- ಬಡಿ ಎಂದು ಹೇಳಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಜಗಳಗಳು ಸಣ್ಣದಾಗಿಯೇ ಮುಗಿದು ಹೋದರೆ, ಸುತ್ತಲೂ ನಿಂತಿರುವ ವೀಕ್ಷಕರಿಗೆ ಸಚಿನ್‌ ತೆಂಡೂಲ್ಕರ್‌ 99 ರನ್‌ಗೆ ಔಟಾದಾಗ ಆಗುವಷ್ಟೇ ನಿರಾಸೆಯಾಗುತ್ತದೆ.

ಥೂ ಒಂದು ಹೊಡೆದಾಟವಿಲ್ಲದ ಈ ಜಗಳವೂ ಒಂದು ಜಗಳಾನ ಅಂತ ಅಂದುಕೊಳ್ಳುವವರೂ ಇದ್ದಾರೆ. ಬೀದಿ ಜಗಳಗಳಿಂದ ಕೊನೆಗೆ ಯಾರಿಗೂ ಏನೂ ಸಿಗುವುದಿಲ್ಲ, ಮತ್ತದೇ ಸಮಸ್ಯೆ ಕಾಣಿಸಿಕೊಂಡಾಗ ಮತ್ತೆ ಜಗಳ ಹುಟ್ಟಿಕೊಳ್ಳುತ್ತದಷ್ಟೇ. ಬೀದಿ ಜಗಳಗಳ ಪರಿಣಾಮ ಎಷ್ಟೆಂದರೆ, ಜಗಳ ನೋಡಿ ತಿರುಗಿ ಹೋಗುವಾಗ ವಿಷಯವೇ ತಿಳಿಯದವರೂ ಅದರ ಬಗ್ಗೆ ಮಾತಾಡ್ತಾರೆ, ತಮಗೆ ತಿಳಿದವರಿಗೆ ಬೆಂಬಲಿಸ್ತಾರೆ. “ಛೇ, ಇವನು ಎರಡೇಟು ಹೊಡೆದಿದ್ರೆ, ಎಲ್ಲಾ ಸರಿ ಇರೋದು’ ಅಂತ ಒಬ್ಬ ಅಂದ್ರೆ ಪಕ್ಕದವನು,

“ಇಲ್ಲ ತಪ್ಪೆಲ್ಲ ಅವನದ್ದೇ. ಅವನಿಗೇ ನಾಲ್ಕೇಟು ಬೀಳಬೇಕಿತ್ತು’ ಅಂತಾನೆ. ಅವರಲ್ಲಿಯೂ ವಾದ ಶುರುವಾಗಿ ವಿಷಯವೇ ತಿಳಿಯದೆ, ವ್ಯಕ್ತಿಗಳೂ ತಿಳಿದರದೇ ಯಾರದೋ ವಿಷಯವಾಗಿ ಇವರಲ್ಲಿ ಜಗಳ ಶುರುವಾಗಿರುತ್ತೆ, ಅದೊಂದು ರೀತಿ ಬೆಂಕಿ ಕಿಡಿಯಂತೆ. ಜಗಳಗಳ ವೀಕ್ಷಣೆಯಿಂದ ಲಾಭವಿಲ್ಲವಾದರೂ ನಷ್ಟವೂ ಏನಿಲ್ಲ ನಿಮ್ಮ ಅಮೂಲ್ಯ ಸಮಯದ ಹೊರತು. ಕೆಲವು ಸಲ ಇಂಥ ಜಗಳಗಳೂ ನಮಗೆ ಜೀವನ ಪಾಠ ಕಲಿಸುತ್ತವೆ. ಆದರೆ, ಹೆಚ್ಚಿನ ಬಾರಿ ಬೀದಿ ಜಗಳಗಳು ನಮಗೆ ಕೇವಲ ಮನರಂಜನೆಯಷ್ಟೇ. 

ಗಾಂಧೀಜಿಯ ಕೋತಿಗಳಂತೆ ಸುಮ್ಮನಿರಿ, ಇಲ್ಲಾಂದ್ರೆ…: ಬೀದಿ ಜಗಳಗಳನ್ನು ಪರಿಹರಿಸಲು ಸಾಧ್ಯವಾದರೆ, ಅಂತಹ ಸ್ಥಾನದಲ್ಲಿ ನೀವಿದ್ದರೆ ಅದನ್ನು ಪರಿಹರಿಸಬೇಕು ಇಲ್ಲವೇ ಗಾಂಧೀಜಿಯ ಮೂರು ಕೋತಿಗಳಂತೆ ಸುಮ್ಮನಿರಬೇಕು. ಬೀದಿ ಜಗಳಗಳಿಂದ ವೀಕ್ಷಕರಿಗೆ ಏನೂ ತೊಂದರೆ ಇಲ್ಲವಾದರೂ ಮಕ್ಕಳನ್ನು ಇಂಥವುಗಳಿಂದ ದೂರವಿಡುವುದು ಒಳ್ಳೆಯದು. ಅಲ್ಲಿ ಬಳಸುವ ಭಾಷೆ ಮತ್ತು ಭಾವನೆಗಳ ಅತಿರೇಕತೆ ಅವರ ಮನಸಿನ ಮೇಲೆ ಪ್ರಭಾವ ಬೀರಬಹುದು.

* ನೂತನರಾಗ

ಟಾಪ್ ನ್ಯೂಸ್

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.