ಗಿಫ್ಟ್ ಕಂಡ ಅಮ್ಮ ಅಪ್ಪಿ ಮುತ್ತಿಟ್ಟಳು!


Team Udayavani, Apr 10, 2018, 4:26 PM IST

gift-kanda.jpg

ಅಂತೂ ಡಿಗ್ರಿ ಮುಗಿದಿತ್ತು. ಸ್ನಾತಕೋತ್ತರ ಪದವಿ ಮಾಡೋಣ ಎಂದು ನಿರ್ಧರಿಸುವ ಹೊತ್ತಿಗೆ ಅದರ ಅಡ್ಮಿಷನ್‌ ಮುಗಿದಿತ್ತು. ಅಯ್ಯೋ, ಈಗ ಮಾಡುವುದೇನು? ಒಂದು ವರ್ಷ ಮನೆಯಲ್ಲಿಯೇ ಇರಬೇಕಲ್ಲಾ ಅನ್ನಿಸಿ ಬೇಸರವಾಗಿತ್ತು. ಮನೆಯಲ್ಲಿ ಸುಮ್ಮನೆ ಇರಲಾಗದ್ದರಿಂದ, ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಹೇಳಿದೆ. “ನಿನ್ನ ಇಷ್ಟ’ ಎಂದು ಮನೆಯಲ್ಲಿ ಒಪ್ಪಿಗೆಕೊಟ್ಟರು.

ನಾನು ಓದಿರುವ ಪದವಿಗೆ ಎಲ್ಲಾದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸವಿತ್ತು. ಆದರೆ, ಕೆಲಸ ಹುಡುಕಿಕೊಂಡು ಹೋದೆ ಕಡೆಯಲ್ಲೆಲ್ಲ ಕಂಪ್ಯೂಟರ್‌ ಜಾnನ ಕೇಳುತ್ತಿದ್ದರು. ಹೀಗೇ ಕೆಲವು ದಿನಗಳ ಹುಡುಕಾಟದ ನಂತರ ಬಿಗ್‌ಬಜಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಜನರಿದ್ದರು. ನನಗೋ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ.

ಗ್ರಾಹಕರೊಂದಿಗೆ ಯಾವ ರೀತಿ ಮಾತನಾಡಬೇಕೆಂದು ಗೊತ್ತಿರದ ನನಗೆ ಕೆಲವೊಮ್ಮೆ ಈ ಕೆಲಸದ ಸಹವಾಸವೇ ಸಾಕಪ್ಪಾ ಅನ್ನಿಸುತ್ತಿತ್ತು. ಆದರೆ, ಕೆಲಸ ಬಿಟ್ಟು ಬೇರೇನು ಮಾಡುವುದೆಂದೇ ತೋಚುತ್ತಿರಲಿಲ್ಲ. ಹೀಗಿದ್ದಾಗಲೇ ಹೊಸ ಸ್ನೇಹಿತರ ಪರಿಚಯದಿಂದ, ಗ್ರಾಹಕರ ಜೊತೆ ಹೇಗೆ ಮಾತನಾಡಿ ಗಮನ ಸೆಳೆಯಬೇಕು ಎಂದು ಕಲಿತುಕೊಂಡೆ.

ಒಂದು ದಿನ ಹಣಕಾಸಿನಲ್ಲಿ ವ್ಯತ್ಯಾಸ ಬಂದುದರಿಂದ ಮ್ಯಾನೆಜರ್‌, “ತಿಂಗಳ ಸಂಬಳದಲ್ಲಿ ಕಟ್‌ ಮಾಡುತ್ತೇನೆ’ ಎಂದು ವಾರ್ನ್ ಮಾಡಿದ್ದರು. ಅಯ್ಯೋ, ನನ್ನ ಸಂಬಳದಲ್ಲಿ ಎಲ್ಲಿ ಕಟ್‌ ಮಾಡುತ್ತಾರೋ ಎಂದು ಯೋಚಿಸುತ್ತಾ ದಿನ ಕಳೆದಾಗಲೇ ತಿಂಗಳ ಕೊನೆ ದಿನ ಬಂತು. ಮೊದಲ ಸಂಬಳ ಪಡೆಯುತ್ತಿದ್ದೇನೆಂಬ ಖುಷಿ ಒಂದು ಕಡೆಯಾದರೆ, ಎಲ್ಲಿ ದುಡ್ಡು ಕಟ್‌ ಮಾಡಿಬಿಟ್ಟಿದ್ದಾರೋ ಎಂಬ ಭಯ ಇನ್ನೊಂದೆಡೆ.

ಆದರೆ, ಮ್ಯಾನೇಜರ್‌ ಪೂರ್ತಿ 8500 ರೂ. ಸಂಬಳವನ್ನು ಕೈಗೆ ಕೊಟ್ಟಾಗ ಜಗತ್ತನ್ನು ಗೆದ್ದ ಖುಷಿ! ಮೊದಲ ಸಂಪಾದನೆಯಲ್ಲಿ ಏನು ಮಾಡೋದು ಎಂದು ಯೋಚಿಸುವಷ್ಟರಲ್ಲಿ, ಅಮ್ಮ ಯುಗಾದಿಗೆ ಸೀರೆ ಖರೀದಿಸುವ ಕನಸು ಕಟ್ಟಿದ್ದು ನೆನಪಾಯ್ತು. ಮೊದಲ ಸಂಬಳದಲ್ಲಿ ಅಮ್ಮ ಆಸೆ ಪಟ್ಟಿದ್ದ ಸೀರೆಯನ್ನೇ ಕೊಡಿಸಿದೆ. ಮಗಳು ಸೀರೆ ಕೊಡಿಸಿದಳೆಂಬ ಖುಷಿಯಲ್ಲಿ ಅಮ್ಮ ನನ್ನನ್ನು ಅಪ್ಪಿಕೊಂಡು ಖುಷಿಪಟ್ಟಳು. 

* ಮಧುವರ್ಷಿಣಿ.ಎಲ್‌.ಎಂ, ಶಂಕರಘಟ್ಟ     

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.