ಹಾಕಿ: ಭಾರತ ಸೆಮಿಫೈನಲಿಗೆ
Team Udayavani, Apr 11, 2018, 7:00 AM IST
ಗೋಲ್ಡ್ ಕೋಸ್ಟ್: ಗೇಮ್ಸ್ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಭಾರತವು ಸೆಮಿಫೈನಲ್ ಹಂತಕ್ಕೇರಿದೆ. “ಬಿ’ ಬಣದ ಪಂದ್ಯದಲ್ಲಿ ಭಾರತವು ತನಗಿಂತ ಕೆಳಗಿನ ರ್ಯಾಂಕಿನ ಮಲೇಶ್ಯವನ್ನು 2-1 ಗೋಲುಗಳಿಂದ ಮಣಿಸಿತು.
ಡ್ರ್ಯಾಕ್ಫ್ಲಿಕ್ ತಜ್ಞ ಹರ್ಮನ್ಪ್ರೀತ್ ಸಿಂಗ್ ಅವರ ಅವಳಿ ಗೋಲುಗಳ ನೆರವಿನಿಂದ ಭಾರತ ಮೇಲುಗೈ ಸಾಧಿಸಿತು. ಮಲೇಶ್ಯ ಪರ ಫೈಜಲ್ ಸಾರಿ ಗೋಲನ್ನು ಹೊಡೆದಿದ್ದರು. ಮಲೇಶ್ಯದ ಆಟವನ್ನು ಗಮನಿಸಿದರೆ ಭಾರತ ಭಾರೀ ಅಂತರದಿಂದ ಗೆಲ್ಲಬೇಕಿತ್ತು. ನೀರಸವಾಗಿ ಆಡಿದ ಭಾರತ ಹಲವು ಗೋಲು ಹೊಡೆಯುವ ಅವಕಾಶವನ್ನು ಕೈಚೆಲ್ಲಿತು. ಪೆನಾಲ್ಟಿ ಕಾರ್ನರ್ ವಿಷಯದಲ್ಲೂ ಭಾರತ ಪರಿಣಾಮಕಾರಿಯಾಗಿ ಆಡಿಲ್ಲ. ಭಾರತ ತಂಡಕ್ಕೆ 9 ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದ್ದರೂ ಕೇವಲ ಎರಡನ್ನು ಮಾತ್ರ ಗೋಲಾಗಿ ಪರಿವರ್ತಿಸಲು ಯಶಸ್ವಿಯಾಗಿತ್ತು.
ಪಂದ್ಯ ಆರಂಭವಾದ ಮೂರನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಕೌರ್ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲನ್ನು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಆಬಳಿಕ ಗೋಲು ಸಮಬಲಕ್ಕೆ ಮಲೇಶ್ಯ ಸಾಕಷ್ಟು ಪ್ರಯತ್ನಪಟ್ಟಿತು. ಆರನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮಲೇಶ್ಯದ ರಝೀ ರಹೀಂ ಗೋಲು ಹೊಡೆಯಲು ವಿಫಲರಾಗಿ ನಿರಾಶೆಗೆ ಒಳಗಾದರು. 16ನೇ ನಿಮಿಷದಲ್ಲಿ ಫೈಜಲ್ ಗೋಲನ್ನು ಹೊಡೆಯುವ ಮೂಲಕ ಮಲೇಶ್ಯ ಸಮಬಲ ಸಾಧಿಸಿತು.
ಗೋಲ್ಕೀಪರ್ ಶ್ರೀಜೇಶ್ ಅವರ ಅಮೋಘ ನಿರ್ವಹಣೆಯಿಂದ ಭಾರತ ಈ ಪಂದ್ಯದಲ್ಲಿ ಗೆಲುವಿನ ನಗೆ ಚೆಲ್ಲಿತು. ಅವರು ಮಲೇಶ್ಯದ ಹಲವು ಗೋಲು ಹೊಡೆಯುವ ಪ್ರಯತ್ನಗಳನ್ನು ಯಶಸ್ವಿಯಾಗಿ ತಡೆದಿದ್ದರು. ಬಣದ ಅಂತಿಮ ಪಂದ್ಯದಲ್ಲಿ ಭಾರತ ಬುಧವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.