ದೇವರನ್ನು ಬಿಟ್ಟು ಜೀವನವಿಲ್ಲ: ಅದಮಾರು ಶ್ರೀ
Team Udayavani, Apr 11, 2018, 9:07 AM IST
ಶಿರ್ವ: ಮಾನಸಿಕ ಕಾಯಿಲೆಗೆ ಋಷಿ ಮುನಿಗಳು ಕಂಡು ಕೊಂಡ ಆಸ್ಪತ್ರೆ ದೇವಾಲಯ. ದೇವರನ್ನು ಬಿಟ್ಟು ಜೀವನವಿಲ್ಲ. ದೇಗುಲ ದರ್ಶನದಿಂದ ನಂಬಿಕೆ, ಭಕ್ತಿ, ಶ್ರದ್ಧೆ ಜಾಸ್ತಿಯಾಗಿ ಮಾನಸಿಕ ತುಮುಲ ಕಡಿಮೆಯಾಗುತ್ತದೆ. ಭಕ್ತರ ಗಳಿಕೆಯ ಒಂದಂಶ ವಿನಿಯೋಗವಾಗಿ ಇಲ್ಲೊಂದು ಸಭಾಭವನ ನಿರ್ಮಾಣವಾಗಿದೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರು ಹೇಳಿದರು.
ಅವರು ಸೋಮವಾರ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸುಮಾರು 1.25 ಕೋ.ರೂ. ವೆಚ್ಚದಲ್ಲಿ ನಿರ್ಮಿತ ಶ್ರೀ ಸುಬ್ರಹ್ಮಣ್ಯ ಸಭಾಭವನದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ ಮಾತನಾಡಿ, ಊರಿನ ದೇವಸ್ಥಾನ ಮತ್ತು ಶಾಲೆಯನ್ನು ನೋಡಿ ಗ್ರಾಮಸ್ಥರ ಏಕತೆಯನ್ನು ನಿರ್ಧರಿಸಬಹುದು ಎಂದು ಹೇಳಿದರು.
ಭವನದ ಭೋಜನ ಶಾಲೆಯನ್ನು ಪುಣೆಯ ಉದ್ಯಮಿ ಮಾಜಿ ಕಾರ್ಪೊ ರೇಟರ್ ಶಿರ್ವ ಕೋಡು ಜಗದೀಶ್ ಶೆಟ್ಟಿ ಉದ್ಘಾಟಿಸಿ ದರು. ಸಭಾಭವನ ನಿರ್ಮಾಣ ದಲ್ಲಿ ಸಹಕರಿ ಸಿದ ದಾನಿಗಳ ನಾಮಫಲಕ ವನ್ನು ಬೆಳ್ಮಣ್‌ನ ಉದ್ಯಮಿ ಎಸ್.ಕೆ. ಸಾಲ್ಯಾನ್ ಮತ್ತು ನಿವೃತ್ತ ಶಿಕ್ಷಕ ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ ಅನಾವರಣ ಗೊಳಿಸಿದರು.
ಮುಖ್ಯ ಅತಿಥಿಗಳಾದ ವೇ|ಮೂ| ಹಯವದನ ತಂತ್ರಿ, ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ನಡಿಬೆಟ್ಟು
ನಿತ್ಯಾನಂದ ಹೆಗ್ಡೆ, ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ತುಕಾರಾಮ ಶೆಟ್ಟಿ, ಸಭಾಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಶಿರ್ವ ಕೋಡು ಮನೋಹರ ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿದರು.
ಸಮ್ಮಾನ: ಸಭಾಭವನ ನಿರ್ಮಾಣ ದಲ್ಲಿ ಸಹಕರಿಸಿದ ದಾನಿಗಳನ್ನು ಮತ್ತು ಗುತ್ತಿಗೆದಾರ ಸೃಷ್ಟಿ ಅಸೋಸಿಯೇಟ್ಸ್‌ನ
ಕುತ್ಯಾರು ಪ್ರಸಾದ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಅರ್ಚಕ ಶ್ರೀಧರ ಭಟ್ ಬೆಳ್ಮಣ್, ಪಡುಬೆಳ್ಮಣ್ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷ ಮಡುR ಮನೆ ರಘುವೀರ ರಾವ್, ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಬೋಳ ಪರಾರಿ ಪಟೇಲ್ ರಾಮದಾಸ್ ಶೆಟ್ಟಿ, ಅಡ್ವೆ ಪರಾರಿ ಕೃಷ್ಣ ಶೆಟ್ಟಿ, ಕೋಟೆ ಬೀಡು ರಘುರಾಮ ಶೆಟ್ಟಿ, ಉಪೇಂದ್ರ ಶೆಟ್ಟಿ ಬೆಂಗಳೂರು, ಸತ್ಯಶಂಕರ ಶೆಟ್ಟಿ ಸಚ್ಚೇರಿ ಪೇಟೆ, ಅಡ್ವೆ ವಸಂತಿ ಜಯರಾಮ ಶೆಟ್ಟಿ, ಶಿರ್ವ ಕೋಡು ವಿಜಯ ಭಾರತ್ ಹೆಗ್ಡೆ, ಅಟ್ಟಿಂಜೆ ಶಂಭು ಶೆಟ್ಟಿ, ಪ್ರಭಾಕರ ಶೆಟ್ಟಿ , ವೇದಿಕೆಯಲ್ಲಿದ್ದರು.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಜಯಶೀಲ ಹೆಗ್ಡೆ ಪ್ರಸ್ತಾವನೆ ಗೈದರು. ಕಾರ್ಯದರ್ಶಿ ರಿತೇಶ್ ಶೆಟ್ಟಿ ಸ್ವಾಗತಿಸಿ, ದಾನಿಗಳ ಪಟ್ಟಿ ವಾಚಿಸಿದರು. ನಿರ್ಮಾಣ ಸಮಿತಿ ಅಧ್ಯಕ್ಷ ಶಿರ್ವ ಕೋಡು ದಿನೇಶ್ ಹೆಗ್ಡೆ ವಂದಿಸಿದರು. ಕೆ.ಎಸ್. ರಮೇಶ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.