ಶುದ್ಧ ಹಸ್ತದ ಮಾದರಿ ಶಾಸಕಿಯಾಗಿ ಹೆಸರು ಗಳಿಸಿದ ತೃಪ್ತಿ

Team Udayavani, Apr 11, 2018, 11:52 AM IST

11-April-8.jpg

ಪುತ್ತೂರು: ಪಕ್ಷದ ಮೇಲೆ ನನಗೆ ಹಾಗೂ ಪತ್ನಿಗಿದ್ದ ಅಪಾರ ಪ್ರೀತಿ, ಕಾಳಜಿ ಹಾಗೂ ಆ ಸಮಯದಲ್ಲಿ ಪಕ್ಷಕ್ಕೆ ತೊಂದರೆಯಲ್ಲಿದೆಯಲ್ಲಾ ಎಂಬ ಭೀತಿ ಆಕೆ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು ಎನ್ನುತ್ತಾರೆ 2008ರಿಂದ 2013ರ ತನಕ ಪುತ್ತೂರು ಶಾಸಕರಾಗಿ ಕಾರ್ಯನಿರ್ವಹಿಸಿದ ಮಲ್ಲಿಕಾ ಪ್ರಸಾದ್‌ ಅವರ ಪತಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ| ಎಂ.ಕೆ. ಪ್ರಸಾದ್‌.

ಶಕುಂತಳಾ ಟಿ. ಶೆಟ್ಟಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿ ಸಲು ಸಿದ್ಧತೆ ನಡೆಸಿದರು. ಅವರೆದುರು ಮಹಿಳಾ ಅಭ್ಯರ್ಥಿಯ ಸ್ಪರ್ಧೆ ಬಿಜೆಪಿಗೆ ಅನಿವಾರ್ಯವಾಗಿತ್ತು. ಎಲ್ಲರೂ ಸೇರಿ ಮಲ್ಲಿಕಾಪ್ರಸಾದ್‌ ಸ್ಪರ್ಧೆಗೆ ನಿರ್ಧರಿಸಿದೆವು. ಅದುವರೆಗೆ ಆರೆಸ್ಸೆಸ್‌, ಬಿಜೆಪಿ ಮಹಿಳಾ ಮೋರ್ಚಾದಲ್ಲಿ ತೊಡಗಿಸಿಕೊಂಡಿದ್ದ ಆಕೆ ರಾಜಕೀಯಕ್ಕೆ ಅನಿರೀಕ್ಷಿತರಾಗಿ ಧುಮುಕಿ ಶಾಸಕಿಯೂ ಆದರು.

ಅಭಿವೃದ್ಧಿಯ ಹೆಮ್ಮೆ
ರಾಜಕೀಯ ಅನುಭವ ಇಲ್ಲದಿದ್ದರೂ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಿದ್ದಾರೆ. ಪ್ರಮುಖವಾದ ಕಬಕ-ವಿಟ್ಲ ರಸ್ತೆ, ನೂಜಿಬೈಲು-ಪೆರ್ನಾಜೆ ರಸ್ತೆ, ಮುಂಡೂರು-ತಿಂಗಳಾಡಿ ರಸ್ತೆ, ಬೊಳುವಾರು-ಪಟ್ನೂರು ರಸ್ತೆ, ಬೊಳುವಾರು-ಪಡೀಲ್‌ ರಸ್ತೆ, ನಗರದ ಮುಖ್ಯರಸ್ತೆ ದ್ವಿಪಥ ಕಾಮಗಾರಿ, ಪುತ್ತೂರು ಬಸ್‌ ನಿಲ್ದಾಣ, ಕೆಎಸ್‌ ಆರ್‌ಟಿಸಿ ವಿಭಾಗ ಕಚೇರಿ, ಮಿನಿ ವಿಧಾನಸೌಧ, ಸರಕಾರಿ ಮಹಿಳಾ ಪ.ಪೂ. ಕಾಲೇಜಿಗೆ ಕಟ್ಟಡ, ಶಾಲೆಗಳಿಗೆ ಸೌಕರ್ಯ, ಮಾಟ್ನೂರು ಸೇತುವೆ, ಭೂ ಮಂಜೂರಾತಿ ಸೇರಿದಂತೆ ನಿರಂತರ ಅಭಿವೃದ್ಧಿ ಕೆಲಸಗಳನ್ನು ಆಕೆಯ ಅವಧಿಯಲ್ಲಿ ನಡೆಸಲಾಗಿದೆ. ಸೀಮೆಯ ಪ್ರಧಾನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವವೂ ಅದೇ ಅವಧಿಯಲ್ಲಿ ಯಶಸ್ವಿಯಾಗಿ ನಡೆದಿತ್ತು.

ಶುದ್ಧಹಸ್ತದ ತೃಪ್ತಿ
ಪತ್ನಿಯನ್ನು ನಾನು ಆರ್ಥಿಕ ಉದ್ದೇಶಕ್ಕಾಗಿ ಚುನಾವಣೆಗೆ ನಿಲ್ಲಿಸಿರಲಿಲ್ಲ. ರಾಜಕೀಯ ಬದುಕಿನ ಖರ್ಚುಗಳನ್ನು ನನ್ನ ಕೈಯಿಂದಲೇ ಭರಿಸಿದ್ದೇನೆ. ರಾಜಕೀಯದಲ್ಲಿ ನಾನಾಗಲಿ, ಪತ್ನಿಯಾಗಲಿ ಒಂದು ಪೈಸೆಯನ್ನೂ ಮಾಡಿಲ್ಲ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಶುದ್ಧಹಸ್ತದಿಂದ ಕೆಲಸ ಮಾಡಿದ ತೃಪ್ತಿ ನಮಗೆಲ್ಲರಿಗೂ ಇದೆ. ಮಲ್ಲಿಕಾ ಶುದ್ಧಹಸ್ತದ ಶಾಸಕಿ ಎಂದು ಕಾರ್ಯಕರ್ತರು, ವಿರೋಧಿಗಳೂ ಹೇಳುವಾಗ ಅತ್ಯಂತ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ಡಾ| ಎಂ.ಕೆ. ಪ್ರಸಾದ್‌.

ಇನ್ನು ಸ್ಪರ್ಧೆ ಇಲ್ಲ 
ಒಂದು ಅವಧಿಯ ಶಾಸಕತ್ವದ ಬಳಿಕ ಆರ್ಥಿಕ ಹಾಗೂ ವೈಯಕ್ತಿಕವಾಗಿ ಆದ ತೊಂದರೆಯಿಂದ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ ಮತ್ತು ಪಕ್ಷದ ಮುಂದಿನ ಅಭ್ಯರ್ಥಿಗೆ ಮನಃಪೂರ್ವಕ ಸಹಕಾರ ನೀಡಿದ್ದೇವೆ. ನನ್ನ ಪತ್ನಿ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ. ಹಲವು ದಶಕಗಳಿಂದ ಪಕ್ಷಕ್ಕೆ ನಿಷ್ಠರಾಗಿ ಸಂಕಷ್ಟದ ಸಮಯದಲ್ಲಿ ಹೆಗಲುಕೊಟ್ಟು ಪ್ರಾಮಾಣಿಕವಾಗಿ ಶ್ರಮಿಸಿದ ಖುಷಿ ಇದೆ.

ರಾಜೇಶ್‌ ಪಟ್ಟೆ 

ಟಾಪ್ ನ್ಯೂಸ್

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.