ಚುನಾವಣೆ: ದೂರು ಸ್ವೀಕಾರಕ್ಕೆ ಸಮಾಧಾನ, ಸುವಿಧಾ
Team Udayavani, Apr 11, 2018, 12:31 PM IST
ಪುತ್ತೂರು: ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳಿಗೆ ಸಮಾಧಾನ ಹಾಗೂ ಜನಪ್ರತಿನಿಧಿಗಳ ದೂರು ಗಳಿಗೆ ಸುವಿಧಾ ವೆಬ್‌ಸೈಟ್ ಚಾಲ್ತಿಯಲ್ಲಿ ಇರಲಿದೆ. ಯಾವುದೇ ದೂರುಗಳನ್ನು ನೇರವಾಗಿ ವೆಬ್‌ಸೈಟ್‌ಗೆ ಕಳುಹಿಸಬಹುದು ಎಂದು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಿಗೆ ಮಾಹಿತಿ ನೀಡುವ ಸಲುವಾಗಿ ಮಂಗಳವಾರ ಮಿನಿ ವಿಧಾನಸೌಧದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಮಾಧಾನ ವೆಬ್ ಸೈಟ್ ಮೂಲಕ ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಬಹುದು. ಕಚೇರಿಗೆ ಬಂದು ನೀಡಿದರೆ ನಾವೂ ಇದೇ ವೆಬ್‌ಸೈಟ್ ಮೂಲಕ ದೂರುಗಳನ್ನು ಅಪ್‌ಲೋಡ್ ಮಾಡುತ್ತೇವೆ. ಈ ದೂರುಗಳ ವಿಚಾರಣೆ ನಡೆಯುವ ವೇಳೆ ಯಾರಾದರೂ ಒತ್ತಡ ತಂದರೆ, ಅವರನ್ನು ಅನುಮಾನದ ದೃಷ್ಟಿಯಿಂದಲೇ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳು ದೂರು ಸಲ್ಲಿಸಲೆಂದೇ ಸುವಿಧಾ ವೆಬ್‌ಸೈಟ್ ಇರಲಿದೆ. ನಿಗದಿತ ಏಜೆಂಟ್ ಅಥವಾ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸಲು ಇಲ್ಲಿ ಅವಕಾಶ. ಕೈ ಬರಹದ ಪರವಾನಿಗೆಗೆ ಇಲ್ಲಿ ಅವಕಾಶವಿಲ್ಲ. ಸಮಾಧಾನ ಹಾಗೂ ಸುವಿಧಾದಲ್ಲಿ ದೂರು ಪಡೆದ ಕೂಡಲೇ ಸಂದೇಶ ನಿಮ್ಮ ಮೊಬೈಲಿಗೆ ಬರಲಿದೆ ಎಂದರು.
ಎ. 11ರಿಂದ ಮಾಹಿತಿ
ಮತಯಂತ್ರ ಇವಿಎಂ/ ವಿವಿ ಪ್ಯಾಟ್ ಬಳಕೆಯ ಬಗ್ಗೆ ಸಾರ್ವಜನಕರಿಗೆ ಜಾಗೃತಿ ಮೂಡಿಸುವ ಕೆಲಸ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಎ. 11ರಿಂದ 13ರ ತನಕ ನಡೆಯಲಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.