ದಲಿತ ವಿರೋಧಿ ಬಿಜೆಪಿ ಮಾತಿಗೆ ಮರುಳಾಗಬೇಡಿ
Team Udayavani, Apr 11, 2018, 12:38 PM IST
ಮೈಸೂರು: ದಲಿತ ವಿರೋಧಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ಬಣ್ಣದ ಮಾತಿಗೆ ಮರುಳಾಗದೆ ದಲಿತರ ಪರ ಅಭಿವೃದ್ಧಿ ಕಾರ್ಯಕ್ರಮ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ವರುಣಾ ಕ್ಷೇತ್ರದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರ ಅಭಿವೃದ್ಧಿಗೆ ಖರ್ಚು ಮಾಡಿದ ಹಣ 22 ಸಾವಿರ ಕೋಟಿ ರೂ.. ಕಾಂಗ್ರೆಸ್ ಸರ್ಕಾರ ಐದು ವರ್ಷದಲ್ಲಿ 88 ಸಾವಿರ ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲಾ ಪರಿಶಿಷ್ಟ ಜಾತಿ, ಪಂಗಡದವರ ಕಾಲೋನಿಗಳ ರಸ್ತೆಗಳು ಕಾಂಕ್ರೀಟ್ ಆಗಿವೆ. 1 ಕೋಟಿ ರೂ.ವರೆಗೆ ಗುತ್ತಿಗೆಯಲ್ಲಿ ಮೀಸಲು, ಗಂಗಾಕಲ್ಯಾಣ ಯೋಜನೆಯಲ್ಲಿ 2 ಲಕ್ಷ ರೂ.ವರೆಗೆ ಸಬ್ಸಿಡಿ, ಹನಿ ನೀರಾವರಿಗೆ ಸಬ್ಸಿಡಿ, ಪ್ರತಿ ಹೋಬಳಿಯಲ್ಲಿ ಮೋರಾರ್ಜಿ ದೇಸಾಯಿ ಶಾಲೆ, ಅಂಬೇಡ್ಕರ್ ವಸತಿ ನಿಲಯಗಳು ರಾಜಾದ್ಯಂತ ಅಂಬೇಡ್ಕರ್, ಬಾಬು ಜಗಜೀವನರಾಂ,
ವಾಲ್ಮೀಕಿ ಭವನಗಳ ನಿರ್ಮಾಣ, ವಿವಿಧ ನಿಗಮಗಳಲ್ಲಿದ್ದ ಸಾಲಮನ್ನಾ, ಭೂಮಿ ಖರೀದಿಸಲು ಹಣಕಾಸಿನ ನೆರವು 5 ಲಕ್ಷದಿಂದ 15 ಲಕ್ಷ ರೂ.ಗೆ ಏರಿಕೆ, ಉಚಿತ ಲ್ಯಾಪ್‌ಟಾಪ್, ಕಾರಿಗೆ 5 ಲಕ್ಷದವರೆಗೆ ಸಬ್ಸಿಡಿ, ಮನೆ ಕಟ್ಟಲು 1.50 ಲಕ್ಷ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಸ್ಕಾಲರ್‌ಶಿಪ್ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ನೀವೆಲ್ಲರು ಬೆಂಬಲಿಸಬೇಕು
ಹಾಗೂ ದಿಕ್ಕು ತಪ್ಪಿಸುವವರ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು. ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ಕೆಲವು ಸಲ ಮುಖಂಡರಿಗೆ ಗೊತ್ತಿಧ್ದೋ ಗೊತ್ತಿಲ್ಲದೆಯೋ ತಪ್ಪಾಗಿರಬಹುದು. ತಾವೆಲ್ಲ ಒಂದೇ ಕುಟುಂಬದವರಿದ್ದ ಹಾಗೆ, ವೈಯಕ್ತಿಕವಾಗಿ ಸಹಾಯ ಮಾಡಲು ಆಗದಿರಲೂಬಹುದು. ಅದನ್ನೆಲ್ಲಾ ಮರೆತು ತಮ್ಮ ಸಂಬಂಧಿಕರಿಗೆ, ನೆಂಟರಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ತಿಳಿಸಿ ಈ ಬಾರಿ ತಾನು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದು, ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳ ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಜಿಪಂ ಮಾಜಿ ಅಧ್ಯಕ್ಷ ರಾಘವೇಂದ್ರರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಹೊಸಕೋಟೆ ಕುಮಾರ, ಭುಗತಗಳ್ಳಿ ಮಣಿ, ಮರಯ್ಯ, ಬಾಬು, ಜಿಪಂ ಮಾಜಿ ಸದಸ್ಯ ಮಹಾದೇವ್, ಇಂಧನ್‌ಬಾಬು, ಮುನಿಯಪ್ಪ, ಪುರುಷೋತ್ತಮ, ರೇವಣ್ಣ ಇದ್ದರು.
ಯತೀಂದ್ರಗೆ ಮಜುಗರ: ದಲಿತ ಮುಖಂಡರ ಬೆಂಬಲ ಕೋರಲು ಕರೆಯಲಾಗಿದ್ದ ಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ನಿಮಗೆ ನಮ್ಮ ನೆನಪಾಗುತ್ತದೆ ಎಂದು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಚುನಾವಣೆಗಳಲ್ಲಿ ನಮ್ಮ ಬೆಂಬಲ ಪಡೆಯುತ್ತೀರಿ, ಗೆದ್ದ ನಂತರ ನಿಮ್ಮ ಮನೆ ಬಳಿ ಬಂದರೂ ನಮ್ಮನ್ನು ಗುರುತಿಸಿ, ಮಾತನಾಡಿಸುವುದಿಲ್ಲ.
ವಿವಿಧ ನಿಗಮಗಳ ಸಾಲ ಸೌಲಭ್ಯಕ್ಕೆ ಅರ್ಜಿ ಹಾಕಿದ್ದರೂ ನಿಮ್ಮ ಬೆಂಬಲಿಗರುಗಳಿಗೆ ಮಾತ್ರ ಕೊಡಿಸುತ್ತೀರಿ, ನಮಗೆ ಸಾಲ ಸೌಲಭ್ಯವೂ ಸಿಗುವುದಿಲ್ಲ ಎಂದು ವೇದಿಕೆಯತ್ತ ನುಗ್ಗಿ ತರಾಟೆಗೆ ತೆಗೆದುಕೊಂಡಿದ್ದರಿಂದ ಡಾ.ಯತೀಂದ್ರ ಮುಜುಗರ ಅನುಭವಿಸಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.